Tuesday, 26 October 2021

ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ : ಸಿಎಂ ಬಸವರಾಜ ಬೊಮ್ಮಾಯಿ


 ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ : ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ಬಿ.ಜೆ.ಪಿ ಸುನಾಮಿ ಎದ್ದಿದೆ. ಇದರ ಪರಿಣಾಮವಾಗಿ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹಾನಗಲ್ ನಲ್ಲಿ ಭಜಂತ್ರಿ ಸಮುದಾಯದ ಮುಖಂಡರು ಹಾಗೂ ಜನರನ್ನು ಉದ್ದೇಶಿಸಿ ಮಾಡಿದ ಚುನಾವಣಾ ಪ್ರಚಾರ ಭಾಷಣದ ಸಂದರ್ಭದಲ್ಲಿ ಈ ವಿಶ್ವಾಸ ವ್ಯಕ್ತಪಡಿಸಿದರು.‌

ಪ್ರತಿ ಊರಿನಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿಯೂ ನೆಲಕಚ್ಚಿದ್ದು, ಹಾನಗಲ್‌ನಲ್ಲಿಯೂ ಅವರನ್ನು ಮನೆಗೆ ಕಳಿಸಿದರೆ, ಅವರು ಖಾಯಂ ಆಗಿ ಮನೆಯಲ್ಲಿ ಇರುತ್ತಾರೆ ಎಂದರು. ಸುಳ್ಳು ಹೇಳುವವರಿಗೆ ಮನ್ನಣೆ ಕೊಡಬೇಡಿ ಎಂದು ಕರೆ ನೀಡಿದ ಮುಖ್ಯಮಂತ್ರಿ, ಎಲ್ಲಾ ಸಮುದಾಯಗಳ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಕಾಂಗ್ರೆಸ್ ಜನರನ್ನು ಮತ ಬ್ಯಾಂಕ್ ಎಂದು ತಿಳಿದುಕೊಂಡಿದ್ದರು. ಅಧಿಕಾರ ಪಡೆದವರು ಜನರನ್ನು ಮರೆತು ಅಧಿಕಾರದಲ್ಲಿ ಮೆರೆಯುತ್ತಿದ್ದರು. ಈಗ ನೀವು ಜಾಗೃತರಾಗಿರುವುದರಿಂದ ನಿಮ್ಮನ್ನು ವಂಚಿಸಲು ಯಾರಿಗೂ ಸಾಧ್ಯವಿಲ್ಲ ಎಂದರು.  

ಕಾಂಗ್ರೆಸ್ ಹತಾಶಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದಾರಿ ತಪ್ಪಿಸುವ, ಸಮಾಜಗಳಿಗೆ ಅನ್ಯಾಯ ಮಾಡುವ ಕೆಲಸವನ್ನು ಮಾಡಿದ್ದಾರೆ. ಇಂದಿಗೂ ಅಲ್ಲಲ್ಲಿ ಅಸಮಾನತೆಯ ಕೂಗು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಮೊದಲಿನಿಂದಲೂ ಸಮಾನತೆ ತರುವ ಕೆಲಸ ಮಾಡಿದ್ದರೆ, ಈ ಕೂಗು ಇರುತ್ತಿರಲಿಲ್ಲ. ಹಾಗಾಗಿ ತಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಬೇಕು ಎಂದರು.

ಆದರೆ ನನ್ನ ಗುರಿ ನನ್ನ ಜನರನ್ನು, ನನ್ನನ್ನು ನಂಬಿದವರಿಗೆ ನ್ಯಾಯ ಕೊಡುವುದು ನನ್ನ ಧರ್ಮ. ದನಿ ಇಲ್ಲದವರಿಗೆ ದನಿ ಕೊಡುವ ಕೆಲಸವನ್ನು ಮಾಡುವುದಾಗಿ ಅವರು ಭರವಸೆ ನೀಡಿದರು.

ನಮ್ಮದು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ, ಅವರ ಮಾತುಗಳನ್ನು ಕೇಳುವ ಸರ್ಕಾರ ಎಂದು ಮುಖ್ಯಮಂತ್ರಿಗಳು, ಜನರಿಗೆ ಅಧಿಕಾರ ಮತ್ತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆಯಿತ್ತರು. ಯುವಕರಿಗೆ ಉದ್ಯೋಗ, ಸ್ತ್ರೀ ಶಕ್ತಿಸಂಘಗಳಿಗೆ  ಆರ್ಥಿಕ ಬಲ ಕೊಡುವ ಕೆಲಸವನ್ನು ಸರ್ಕಾರ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರುನ್ನು ಶೀಘ್ರದಲ್ಲಿಯೇ ನೇಮಿಸುವುದಾಗಿ ತಿಳಿಸಿದರು.


SHARE THIS

Author:

0 التعليقات: