Friday, 15 October 2021

ತಲಪಾಡಿ; ಡಿವೈಡರ್ ಗೆ ಬೈಕ್ ಢಿಕ್ಕಿ; ಇಬ್ಬರು ಯುವಕರು ಮೃತ್ಯು


ತಲಪಾಡಿ; ಡಿವೈಡರ್ ಗೆ ಬೈಕ್ ಢಿಕ್ಕಿ; ಇಬ್ಬರು ಯುವಕರು ಮೃತ್ಯು

ಮಂಜೇಶ್ವರ :  ಡಿವೈಡರ್ ಗೆ  ಬೈಕ್  ಢಿಕ್ಕಿ ಹೊಡೆದ ಪರಿಣಾಮ ಕುಂಬಳೆಯ ಇಬ್ಬರು  ಯುವಕರು ಮೃತಪಟ್ಟ ದಾರುಣ ಘಟನೆ ನಿನ್ನೆ ರಾತ್ರಿ ತಲಪಾಡಿ ಕೆ.ಸಿ.ರೋಡ್  ನಲ್ಲಿ ನಡೆದಿದೆ.

ಕುಂಬಳೆ ಕುಂಟಗೇರಡ್ಕದ ಕೆ.ಪ್ರಜಿತ್(23) ಮತ್ತು ಕೃಷ್ಣ ಪ್ರಸಾದ್ (25) ಮೃತರು ಎಂದು ಗುರುತಿಸಲಾಗಿದೆ. 

ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ಕೆ.ಸಿ. ರೋಡ್ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.


SHARE THIS

Author:

0 التعليقات: