ಹರ್ಯಾಣ ಸರ್ಕಾರಿ ಉದ್ಯೋಗಿಗಳು ಇನ್ನು ಮುಂದೆ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು

ಚಂಡೀಗಢ: ರಾಜ್ಯ ಸರ್ಕಾರಿ ಉದ್ಯೋಗಿಗಳು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ 1967 ಹಾಗೂ 1980ರಲ್ಲಿ ಜಾರಿಗೊಳಿಸಲಾಗಿದ್ದ ತನ್ನ ಎರಡು ಆದೇಶಗಳನ್ನು ಹರ್ಯಾಣ ಸರಕಾರ ಅಕ್ಟೋಬರ್ 11, ಸೋಮವಾರ ವಾಪಸ್ ಪಡೆದು ಈ ಮೂಲಕ ಸರ್ಕಾರಿ ಉದ್ಯೋಗಿಗಳಿಗೆ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಇದ್ದ ಅಡ್ಡಿಯನ್ನು ತೆಗೆದು ಹಾಕಿದೆ. ಆದರೆ ಸರ್ಕಾರದ ಈ ಕ್ರಮ ವಿಪಕ್ಷ ಕಾಂಗ್ರೆಸ್ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದು ರಾಜ್ಯದ ಮನೋಹರ್ ಲಾಲ್ ಖಟ್ಟರ್ ಸರ್ಕಾರ "ಬಿಜೆಪಿ-ಆರೆಸ್ಸೆಸ್ ಪಾಠ್ಶಾಲೆ''ಯನ್ನು ನಡೆಸುತ್ತಿದೆಯೇ ಎಂದು ಪ್ರಶ್ನಿಸಿದೆ.
ಹರ್ಯಾಣ ಸಿವಿಲ್ ಸರ್ವಿಸಸ್ (ಸರ್ಕಾರಿ ಉದ್ಯೋಗಿಗಳ ನಡತೆ) ನಿಯಮಗಳು, 2016 ಇದರ ಜಾರಿಗೆ ಬರುವುದರೊಂದಿಗೆ ಮೇ 2, 1980 ಹಾಗೂ ಜನವರಿ 11, 1967ರಂದು ಹೊರಡಿಸಲಾಗಿದ್ದ ಆದೇಶಗಳು ಅಪ್ರಸ್ತುತವಾಗುತ್ತವೆ,'' ಎಂದು ಸರ್ಕಾರ ಸೋಮವಾರ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಇದನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. "ಈಗ ಹರ್ಯಾಣ ಸರ್ಕಾರಿ ಉದ್ಯೋಗಿಗಳು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸಲು ಸ್ವತಂತ್ರರು. ಇದೇನು ಸರ್ಕಾರವೇ ಅಥವಾ ಬಿಜೆಪಿ-ಆರೆಸ್ಸೆಸ್ ಪಾಠಶಾಲೆಯೇ?,'' ಎಂದು ಅವರು ಪ್ರಶ್ನಿಸಿದ್ದಾರೆ.
0 التعليقات: