ಐಎಎಸ್ ಅಧಿಕಾರಿಗಳಿಗೆ ಅವರ ಆಯ್ಕೆಯ ಕೇಡರ್ ಪಡೆಯುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಯಶಸ್ವಿ ಐಎಎಸ್ ಆಕಾಂಕ್ಷಿಗಳಿಗೆ ಅವರ ಆಯ್ಕೆಯ ಕೇಡರ್ಗಳನ್ನು ಪಡೆಯುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಹಿಮಾಚಲ ಪ್ರದೇಶ ಕೇಡರ್ ನೀಡಲಾಗಿರುವ ಐಎಎಸ್ ಅಧಿಕಾರಿ ಎ ಶೈನಿಮೋಲ್ ಅವರಿಗೆ ಕೇರಳ ಕೇಡರ್ ನೀಡುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿ ಕೇರಳ ಹೈಕೋರ್ಟ್ ಹೊರಡಿಸಿದ ಆದೇಶವನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಹಾಗೂ ವಿ ರಾಮಸುಬ್ರಮಣಿಯನ್ ಅವರ ಪೀಠ ಬದಿಗೆ ಸರಿಸಿದೆ.
ಐಎಎಸ್ ಅಧಿಕಾರಿಗಳಿಗೆ ಕೇಡರ್ ಆಯ್ಕೆಯ ಹಕ್ಕಿಲ್ಲ ಎಂದು 1995ರಲ್ಲಿ ಕೇಂದ್ರ ಸರಕಾರ ಹಾಗೂ ಐಎಎಸ್ ಅಧಿಕಾರಿ ರಾಜೀವ್ ಯಾದವ್ ಮತ್ತಿತರರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನೂ ಶುಕ್ರವಾರ ನ್ಯಾಯಾಲಯ ಉಲ್ಲೇಖಿಸಿದೆ. "ಆಯ್ಕೆಯಾದ ಅಭ್ಯರ್ಥಿಗೆ ಐಎಎಸ್ ಅಧಿಕಾರಿಯಾಗಿ ನಿಯೋಜನೆಗೊಳ್ಳುವ ಹಕ್ಕಿದೆ, ಆದರೆ ಆತನ ಆಯ್ಕೆಯ ಕೇಡರ್ ಅಥವಾ ತವರು ರಾಜ್ಯಕ್ಕೆ ನಿಯೋಜನೆ ಕೇಳುವ ಹಕ್ಕಿಲ್ಲ" ಎಂದು ನ್ಯಾಯಾಲಯ ಹೇಳಿದೆ.
0 التعليقات: