ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಮೃತ್ಯು: ವರದಿ

ಲಕ್ನೋ: ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಒಟ್ಟು ೮ ಮಂದಿ ಮೃತಪಟ್ಟಿದ್ದು, ಇದರಲ್ಲಿ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಮೃತಪಟ್ಟಿದ್ದಾರೆ ಎಂದು newslaundry ವರದಿ ಮಾಡಿದೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ ೯ಕ್ಕೇರಿದೆ. ಋವಿವಾರದ ಹಿಂಸಾಚಾರದ ಬಳಿಕ ಕಶ್ಯಪ್ ನಾಪತ್ತೆಯಾಗಿದ್ದರು. ಅವರ ಮೃತದೇಹವು ಬಳಿಕ ಶವಾಗಾರದಲ್ಲಿ ಪತ್ತೆಯಾಗಿದೆ ಎಂದು timesofindia ವರದಿ ಮಾಡಿದೆ.
ಪತ್ರಕರ್ತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡಾಗ ಆತನ ಗುರುತು ಪತ್ತೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾಗಿ ಈವ್ನಿಂಗ್ ನ್ಯೂಸ್ ವರದಿ ಮಾಡಿದೆ. ಆದಾಗ್ಯೂ, ಈ ಕುರಿತು ಅಧಿಕೃತ ದೃಢೀಕರಣವನ್ನು ಇದುವರೆಗೆ ಮಾಡಲಾಗಿಲ್ಲ ಎಂದು ವರದಿ ತಿಳಿಸಿದೆ.
0 التعليقات: