Wednesday, 13 October 2021

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಕುಮಾರಸ್ವಾಮಿ ಕಾರಣ: ಸಿದ್ದರಾಮಯ್ಯ


 ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಕುಮಾರಸ್ವಾಮಿ ಕಾರಣ: ಸಿದ್ದರಾಮಯ್ಯ 

ಕಲಬುರಗಿ: ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಹೆಚ್.ಡಿ. ಕುಮಾರಸ್ವಾಮಿಯವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.  

ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು ನಿನ್ನೆ ಮೈಸೂರಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡುವ ಮೂಲಕ ಉತ್ತರ ಕೊಟ್ಟಿದ್ದಾರೆ.  

ನನ್ನ ವಿರುದ್ಧ ಕುಮಾರಸ್ವಾಮಿ ಮಾತನಾಡುತ್ತಿರುವ ಆರೋಪಗಳು ಅಪ್ಪಟ ಸುಳ್ಳು. ಕುಮಾರಸ್ವಾಮಿಯವರಿಗೆ ಎರಡು ನಾಲಿಗೆಯಿದೆಯೇ, ಮೈತ್ರಿ ಸರ್ಕಾರ ರಚನೆಯಾಗುವುದು ಬೇಡ ಎಂದಿದ್ದರೆ ಅವರು ಹೇಗೆ ಮುಖ್ಯಮಂತ್ರಿಯಾಗುತ್ತಿದ್ದರು, ಮೈತ್ರಿ ಸರ್ಕಾರ ಬೀಳಿಸಬೇಕೆಂದಿದ್ದರೆ ಅವರು ಸಿಎಂ ಆಗುವುದಕ್ಕೆ ನಾನು ಒಪ್ಪುತ್ತಿರಲಿಲ್ಲ, ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಭಯ ಅನಿಸುತ್ತದೆ, ಯಾರ ಮೇಲೆ ಭಯವಿರುತ್ತದೋ ಅವರನ್ನು ಟಾರ್ಗೆಟ್ ಮಾಡುತ್ತಾರೆ, ರಾಜಕೀಯವಾಗಿ ಸಿದ್ದರಾಮಯ್ಯ ಕಂಡರೆ ಭಯವಾಗುತ್ತಿದೆ. ಜನರ ಅನು 

ಕಾಲು ಕೆರೆದು ಜಗಳ ಮಾಡಿಕೊಂಡು ಬರುವುದು ಕುಮಾರಸ್ವಾಮಿ ಅಭ್ಯಾಸ ಎಂದು ತಿರುಗೇಟು ನೀಡಿದರು. 

ಮುಖ್ಯಮಂತ್ರಿಯಾದವರು ಹೊಟೇಲ್ ನಲ್ಲಿ ಕುಳಿತು ಆಡಳಿತ ನಡೆಸುತ್ತಾರೆಯೇ, ಕುಮಾರಸ್ವಾಮಿಯವರು ಸಿಗುತ್ತಿರಲಿಲ್ಲ, ಹೀಗಾಗಿಯೇ ಮೈತ್ರಿ ಸರ್ಕಾರ ಮುರಿದು ಬಿತ್ತು. ಬಿಜೆಪಿಗೆ ಕಾಂಗ್ರೆಸ್ ನಿಂದ 17 ಶಾಸಕರು ಹೋದರು, ಜೆಡಿಎಸ್ ನಿಂದ ಕೂಡ ಮೂವರು ಶಾಸಕರು ಹೋಗಿದ್ದಾರೆ, ಹಾಗಾದರೆ ಜೆಡಿಎಸ್‌ನಿಂದ ಶಾಸಕರು ಬಿಜೆಪಿಗೆ ಹೋಗಲು ನಾನು ಕಾರಣವೇ ಎಂದು ಕುಮಾರಸ್ವಾಮಿಯನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.  

ನಾನು ಐದು ದಶಕಗಳಿಂದ ರಾಜಕೀಯದಲ್ಲಿದ್ದೇನೆ, ಕುಮಾರಸ್ವಾಮಿಯವರು ರಾಜಕೀಯವಾಗಿ ಇತ್ತೀಚಿನವರು, 1996ರವರೆಗೆ ಅವರು ಎಲ್ಲಿದ್ದರು ಎಂದು ಕೂಡ ಸಿದ್ದರಾಮಯ್ಯ ತಾನು ರಾಜಕೀಯದಲ್ಲಿ ಕುಮಾರಸ್ವಾಮಿಗಿಂತ ಅನುಭವಿ ಎಂದು ಹೇಳಿದ್ದಾರೆ. 


SHARE THIS

Author:

0 التعليقات: