ತ್ರಿಪುರಾದಲ್ಲಿ ಮಾಧ್ಯಮ ಕಚೇರಿಗಳ ಮೇಲೆ ದಾಳಿ ಪ್ರಕರಣ: ಬಿಜೆಪಿ ಯುವಮೋರ್ಚಾ ನಾಯಕನ ಬಂಧನ
ಅಗರ್ತಲಾ : ಬಿಜೆಪಿ ಯುವ ಮೋರ್ಚಾದ ತ್ರಿಪುರಾ ರಾಜ್ಯ ಸಹ-ವಕ್ತಾರ ರಾಘು ಲೋಧ್ (32) ಎಂಬಾತನನ್ನು ಸೆಪ್ಟೆಂಬರ್ 8ರಂದು ಅಗರ್ತಲಾದಲ್ಲಿ ಮಾಧ್ಯಮ ಸಂಸ್ಥೆಗಳ ಕಚೇರಿಗಳ ಮೇಲೆ ನಡೆದ ದಾಳಿಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣಕ್ಕೆ ಶಿಕ್ಷೆ), 448 (ಮನೆ-ಅತಿಕ್ರಮಣಕ್ಕೆ ಶಿಕ್ಷೆ), 427 (ಹಾನಿಯನ್ನು ಉಂಟುಮಾಡುವ ದುಷ್ಕೃತ್ಯ) ಮುಂತಾದ ಸೆಕ್ಷನ್ ಗಳನ್ನು ಆರೋಪಿಯ ವಿರುದ್ಧ ಹೇರಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಕಾರ್ಯಕರ್ತರೆಂದು ತಿಳಿಯಾದ ಕೆಲ ಮಂದಿ ಅಗರ್ತಲಾದಲ್ಲಿ ಮೂರು ಮಾಧ್ಯಮ ಕಚೇರಿಗಳಿಗೆ ಹಾಗೂ ಸಿಪಿಐ(ಎಂ) ಕಚೇರಿಗೆ ದಾಳಿ ನಡೆಸಿದ ನಂತರ ಸೆಪ್ಟೆಂಬರ್ 8ರಂದು ತ್ರಿಪುರಾದ ವಿವಿಧ ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರಲ್ಲದೆ ಆರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.
ಪ್ರತಿಬದಿ ಕಲಂ ಹಾಗೂ ಪತ್ರಿಕೆಯ ಸುದ್ದಿ ಜಾಲ ಪಿಬಿ24, ದೇಶೆರ್ ಕಥಾ, ದುರಂತ ಟಿವಿ ಕಚೇರಿಗಳ ಮೇಲೆ ದಾಳಿ ನಡೆದಿತ್ತು.
0 التعليقات: