Monday, 4 October 2021

ಡ್ರಗ್ಸ್‌ ಪ್ರಕರಣ: ಆರ್ಯನ್‌ ಖಾನ್‌ ಗೆ ಜಾಮೀನು ನಿರಾಕರಣೆ, ಕಸ್ಟಡಿ ವಿಸ್ತರಣೆ


 ಡ್ರಗ್ಸ್‌ ಪ್ರಕರಣ: ಆರ್ಯನ್‌ ಖಾನ್‌ ಗೆ ಜಾಮೀನು ನಿರಾಕರಣೆ, ಕಸ್ಟಡಿ ವಿಸ್ತರಣೆ

ಹೊಸದಿಲ್ಲಿ: ಮಾದಕ ಪದಾರ್ಥಗಳನ್ನು ಹೊಂದಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದೆ. ೨೩ರ ಹರೆಯದ ಆರ್ಯನ್‌ ಖಾನ್‌ ನನ್ನು ಮುಂಬೈ ನ್ಯಾಯಾಲಯವು ಗುರುವಾ ದವರೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ವಶಕ್ಕೆ ನೀಡಿದೆ. ಪೋಷಕರಾದ ಶಾರೂಖ್‌ ಖಾನ್‌ ಮತ್ತು ಗೌರಿ ಖಾನ್‌ ಜಾಮೀನು ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.

"ಈ ತನಿಖೆಯು ಪ್ರಾಮುಖ್ಯತೆ ಹೊಂದಿದೆ ಮತ್ತು ಇದನ್ನು ನಡೆಸಲೇಬೇಕಾಗಿದೆ. ಇದು ಆರೋಪಿಗೆ ಮತ್ತು ತನಿಖೆ ನಡೆಸುವವರಿಗೂ ಪ್ರಯೋಜನಕಾರಿಯಾಗುತ್ತದೆ" ಎಂದು ನ್ಯಾಯಾಧೀಶರು ಆರ್ಯನ್‌ ಖಾನ್‌ ಕಸ್ಟಡಿ ವಿಸ್ತರಿಸುವ ವೇಳೆ ಹೇಳಿಕೆ ನೀಡಿದರು. 

ಆರ್ಯನ್ ಖಾನ್ ವಿಚಾರಣೆಗೆಂದು ಅಕ್ಟೋಬರ್ 11 (ಸೋಮವಾರ ವಾರ) ವರೆಗೂ ಕಸ್ಟಡಿಯಲ್ಲಿ ಇರಿಸಬೇಕಾಗುತ್ತದೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಈ ಪ್ರಕರಣವು ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾ ಅನ್ನು ಒಳಗೊಂಡಿದೆ ಎಂದು ಆರೋಪಿಸಿದೆ. ನಾವು ಗ್ರಾಹಕರನ್ನು ತನಿಖೆ ಮಾಡದ ಹೊರತು ಯಾರು ಸರಬರಾಜುದಾರರು, ಯಾರು ಹಣಕಾಸು ವ್ಯವಹಾರ ಮಾಡುತ್ತಿದ್ದಾರೆ ಎಂಬುವುದು ನಮಗೆ ಹೇಗೆ ತಿಳಿಯುತ್ತದೆ?" ಎಂದು ಸಂಸ್ಥೆ ಪ್ರಶ್ನಿಸಿದೆ.

ಆರ್ಯನ್ ಖಾನ್ ಚಾಟ್‌ಗಳು ಮತ್ತು ಲಿಂಕ್‌ಗಳಲ್ಲಿ "ಕೋಡ್ ಹೆಸರುಗಳು" ಕಂಡುಬಂದಿವೆ ಎಂದು ಸಂಸ್ಥೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. "ನಾನು ವಿಶೇಷ ಆಹ್ವಾನಿತನಾಗಿದ್ದ ಕಾರಣ ತೆರಳಿದ್ದೆ. ಅಲ್ಲಿ ವಶಪಡಿಸಿಕೊಂಡ ವಸ್ತುಗಳಿಗೆ ಸಂಬಂಧಿಸಿ ನನ್ನನ್ನು ಆರೋಪಿಯಾಗಿಸುವುದು ಸರಿಯಲ್ಲ" ಎಂದು ಆರ್ಯನ್‌ ಖಾನ್‌ ನ್ಯಾಯಾಲಯದ ಮುಂದೆ ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.


SHARE THIS

Author:

0 التعليقات: