Tuesday, 5 October 2021

ಆಶಿಶ್ ಮಿಶ್ರಾ ವಿರುದ್ಧ ಕೊಲೆ ಆರೋಪ ಹೊರಿಸಿದ ಲಖಿಂಪುರ ಹಿಂಸಾಚಾರದಲ್ಲಿ ಹತ್ಯೆಗೀಡಾದ ಪತ್ರಕರ್ತನ ಕುಟುಂಬ


 ಆಶಿಶ್ ಮಿಶ್ರಾ ವಿರುದ್ಧ ಕೊಲೆ ಆರೋಪ ಹೊರಿಸಿದ ಲಖಿಂಪುರ ಹಿಂಸಾಚಾರದಲ್ಲಿ ಹತ್ಯೆಗೀಡಾದ ಪತ್ರಕರ್ತನ ಕುಟುಂಬ

ಲಕ್ನೊ: ಲಖಿಂಪುರ ಖೇರಿಯಲ್ಲಿ ರವಿವಾರ ನಡೆದ ಹಿಂಸಾಚಾರದ ವೇಳೆ ಹತ್ಯೆಗೀಡಾದ ಪತ್ರಕರ್ತ ರಾಮನ್ ಕಶ್ಯಪ್ ಅವರ ಕುಟುಂಬ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಹಾಗೂ  ಅವರ ಸಹಾಯಕರು 'ಕೊಲೆ' ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸೋಮವಾರ ಸಲ್ಲಿಸಿದ ಎರಡು ಎಫ್‌ಐಆರ್‌ಗಳಲ್ಲದೆ ಕುಟುಂಬವು ಪ್ರತ್ಯೇಕ ದೂರು ದಾಖಲಿಸಿದೆ ಎಂದು Times of India ವರದಿ ಮಾಡಿದೆ.

ರವಿವಾರದ ಹಿಂಸಾಚಾರದ ಬಳಿಕ ಕಶ್ಯಪ್ ನಾಪತ್ತೆಯಾಗಿದ್ದರು. ಅವರ ಶವ ಸೋಮವಾರ ಶವಾಗಾರದಲ್ಲಿ ಪತ್ತೆಯಾಗಿದೆ. Times of India ಪ್ರಕಾರ, ಅವರು ಹಿಂಸಾಚಾರದಲ್ಲಿ ಗಾಯಗೊಂಡರು ಹಾಗೂ  ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.

ಪತ್ರಕರ್ತನ ಸಹೋದರ ಪವನ್ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಸಹೋದರನ ಶವವನ್ನು ಶವಾಗಾರದಲ್ಲಿ ನೋಡಿದಾಗ, "ಆತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ" ಎಂದು ಕುಟುಂಬದವರು ಖಚಿತವಾಗಿ ಹೇಳಿದ್ದರು.. ಅವರ ಭುಜದ ಮೇಲೆ ತಲೆಗೆ ಭಾರೀ ಗಾಯವಾಗಿದ್ದವು. ಅವರ ಎದೆ ಹಾಗೂ ಬಲಗೈಯಲ್ಲಿ ಗುಂಡು ತಾಗಿ ರಂಧ್ರವಾಗಿತ್ತು" ಎಂದು ಹೇಳಿದರು.

ನನ್ನ ಮಗ ನಿಘಾಸನ್ ನಲ್ಲಿ ಸಾಧನಾ ನ್ಯೂಸ್ ಎಂಬ ಸುದ್ದಿ ಚಾನೆಲ್ ನ ವರದಿಗಾರನಾಗಿದ್ದ ಎಂದು ರಾಮನ್ ಅವರ ತಂದೆ, ವೃತ್ತಿಯಲ್ಲಿ ರೈತರಾಗಿರುವ ರಾಮ್ ಅಸ್ರೆ ತನ್ನ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ರಾಮನ್ ಅಕ್ಟೋಬರ್ 3 ರಂದು ಮಹಾರಾಜ ಅಗ್ರಾಸೆನ್ ಕ್ರೀಡಾ ಮೈದಾನದಲ್ಲಿ ನಡೆದ ರೈತರ ಪ್ರತಿಭಟನೆಗಳನ್ನು ವರದಿ ಮಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಅಜಯ್ ಕುಮಾರ್ ಮಿಶ್ರಾ ಮತ್ತು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭಾಗವಹಿಸಲಿದ್ದರು.

ರಾಮನ್ ವೀಡಿಯೋ ಸಂದರ್ಶನವೊಂದರಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಮೂರು ವಾಹನಗಳು, ಅದರಲ್ಲಿ ಒಂದನ್ನು ಆಶಿಶ್ ಮಿಶ್ರಾ ಚಾಲನೆ ಮಾಡುತ್ತಿದ್ದ ಎನ್ನಲಾದ ಕಾರು ರೈತರ ಗುಂಪಿನ ಮೇಲೆ ಹರಿದಿತ್ತು.

" ರೈತರನ್ನು ಕೆಣಕುತ್ತಿದ್ದ ಕಾರಿನ ದೃಶ್ಯವನ್ನು ನನ್ನ  ಮಗ ಚಿತ್ರೀಕರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅದಕ್ಕಾಗಿಯೇ ನನ್ನ ಪತ್ರಕರ್ತ ಮಗನ ಮೇಲೆ ಗುಂಡು ಹಾರಿಸಲಾಯಿತು.. ಸಂಸದನ ಮಗ ಆಶಿಶ್ ಮಿಶ್ರಾ ಹಾಗೂ ಪಕ್ಷದ ಕಾರ್ಯಕರ್ತರು ನನ್ನ ಮಗನನ್ನು ಕೊಂದರು" ರಾಮ್ ದೂರಿನಲ್ಲಿ ತಿಳಿಸಿದ್ದಾರೆ.


SHARE THIS

Author:

0 التعليقات: