Saturday, 2 October 2021

ಚೆನ್ನೈ ವಿರುದ್ಧ ರಾಜಸ್ಥಾನಕ್ಕೆ ಗೆಲುವು


ಚೆನ್ನೈ ವಿರುದ್ಧ ರಾಜಸ್ಥಾನಕ್ಕೆ ಗೆಲುವು

ಅಬುಧಾಬಿ: ಶಿವಂ ದುಬೆ ಹಾಗೂ ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕದ ಕೊಡುಗೆಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಪಂದ್ಯವನ್ನು 7 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ.

ಶನಿವಾರ ನಡೆದ  ಐಪಿಎಲ್ ಟೂರ್ನಿಯ 47ನೇ ಪಂದ್ಯದಲ್ಲಿ ಗೆಲ್ಲಲು 190 ರನ್  ಗುರಿ ಪಡೆದ ರಾಜಸ್ಥಾನ 17.3  ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗೆಲುವಿನ ನಗೆ ಬೀರಿತು.

ಮೊದಲ ಬಾರಿ ಅರ್ಧಶತಕ ಸಿಡಿಸಿದ (ಔಟಾಗದೆ 64 ರನ್ ,42 ಎಸೆತ, 4 ಬೌಂಡರಿ, 4 ಸಿಕ್ಸರ್) ಶಿವಂ ದುಬೆ ರಾಜಸ್ಥಾನದ ಗೆಲುವಿನ ರೂವಾರಿಯಾದರು. ಇದಕ್ಕೂ ಮೊದಲು ಆರಂಭಿಕ ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್ (50,21 ಎಸೆತ, 6 ಬೌಂಡರಿ, 3 ಸಿಕ್ಸರ್)ಬಿರುಸಿನ ಬ್ಯಾಟಿಂಗ್ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ನಾಯಕ ಸ್ಯಾಮ್ಸನ್(28), ಎವಿನ್ ಲೆವಿಸ್(27)ಎರಡಂಕೆಯ ಸ್ಕೋರ್ ಗಳಿಸಿದರು.


SHARE THIS

Author:

0 التعليقات: