‘ಮೋಹನ್ ಭಾಗವತ್ ಹಸಿವು,ಬಡತನದಂತಹ ನೈಜ ಸಮಸ್ಯೆಗಳತ್ತ ಗಮನ ಹರಿಸುವುದಿಲ್ಲ’
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಸಿವು, ನಿರುದ್ಯೋಗ ಹಾಗೂ ಬಡತನದಂತಹ ನೈಜ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಬಯಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ರಾಷ್ಟ್ರೀಯ ವಕ್ತಾರ ಸುಧೀಂದ್ರ ಭಡೋರಿಯಾ ಶುಕ್ರವಾರ ಹೇಳಿದ್ದಾರೆ.
"ಜನಸಂಖ್ಯೆಯ ಅಸಮತೋಲನ" ಕುರಿತು ಆರ್ಎಸ್ಎಸ್ ಮುಖ್ಯಸ್ಥರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಡೋರಿಯಾ, "ಮೋಹನ್ ಭಾಗವತ್ ಜೀ ನಿಜವಾದ ಸಮಸ್ಯೆಗಳತ್ತ ಗಮನ ಹರಿಸಲು ಬಯಸುವುದಿಲ್ಲ. ಹಸಿವು, ನಿರುದ್ಯೋಗ, ಬಡತನ ಮತ್ತು ಅಪೌಷ್ಟಿಕತೆ, ಆರೋಗ್ಯ ಮತ್ತು ಶಿಕ್ಷಣ ದೇಶದ ನಿಜವಾದ ಸಮಸ್ಯೆಗಳು. ಅದನ್ನು ಅವರು ನಿರ್ಲಕ್ಷಿಸುತ್ತಾರೆ ಹಾಗೂ ಇತರ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಿದ್ದಾರೆ’’ ಎಂದರು.
''ಈ ಭಾರತವು ಅಸಮಾನತೆಯ ಭಾರತವಾಗುತ್ತಿದೆ. ಬಿಜೆಪಿ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಮತ್ತು ಸಂಘವು ಕೂಡ ಈ ಬಗ್ಗೆ ಗಮನ ಹರಿಸಬೇಕು"ಎಂದು ಅವರು ಹೇಳಿದರು.
ಭಾಗವತ್ ಅವರು ಶುಕ್ರವಾರ ತಮ್ಮ ವಾರ್ಷಿಕ ವಿಜಯ ದಶಮಿಯ ಭಾಷಣದಲ್ಲಿ ದೇಶದ "ಜನಸಂಖ್ಯೆಯ ಅಸಮತೋಲನ" ದ ಬಗ್ಗೆ ಕಳವಳ ವ್ಯಕ್ತಪಡಿಸಿ, ರಾಷ್ಟ್ರದ ಜನಸಂಖ್ಯಾ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಹೇಳಿದರು.
0 التعليقات: