Wednesday, 27 October 2021

ಚಿಂತಕ ಎಸ್.ಎನ್. ಸುಬ್ಬರಾವ್ ನಿಧನ


ಚಿಂತಕ ಎಸ್.ಎನ್. ಸುಬ್ಬರಾವ್ ನಿಧನ

ಜೈಪುರ, ಅ. 27: ಕಳೆದ ಕೆಲವು ದಿನಗಳ ಹಿಂದೆ ಸವಾಯಿ ಮಾನ್ ಸಿಂಗ್ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಿರಿಯ ಗಾಂಧಿವಾದಿ ಎಸ್.ಎನ್. ಸುಬ್ಬ ರಾವ್ (92) ಅವರು ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರ ಪಾರ್ಥಿವ ಶರೀರವನ್ನು ಎಸ್ಎಂಎಸ್ ಆಸ್ಪತ್ರೆಯಿಂದ ಬಾಪು ನಗರದಲ್ಲಿರುವ ವಿನೋಬಾ ಜ್ಞಾನ ಮಂದಿರಕ್ಕೆ ತರಲಾಯಿತು. ಅಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಿಸಿಸಿ ವರಿಷ್ಠ ಗೋವಿಂದ್ ಸಿಂಗ್ ದೊತಾಸ್ರ ಹಾಗೂ ಇತರ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದರು.

ಸುಬ್ಬರಾವ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಅಶೋಕ್ ಗೆಹ್ಲೋಟ್, ಅವರು ಆಗಾಗ ರಾಜಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಜೈಪುರಕ್ಕೆ ಆಗಮಿಸಿದ್ದರು ಎಂದು ನೆನಪಿಸಿಕೊಂಡರು. ಅವರು ದಶಕಗಳ ಕಾಲ ಶಿಬಿರ ನಡೆಸುವ ಮೂಲಕ ದೇಶದ ಯುವಕರಿಗೆ ಸ್ಫೂರ್ತಿಯಾಗಿದ್ದರು ಎಂದು ಗೆಹ್ಲೋಟ್ ಹೇಳಿದರು.SHARE THIS

Author:

0 التعليقات: