ಚೀನಾ ಗಡಿಯಲ್ಲಿ ಭಾರತದಿಂದ ಅತಿ ಎತ್ತರದ ರಸ್ತೆ ಸುರಂಗ
ಕಮೆಂಗ್: ಗಡಿಯಲ್ಲಿ ಚೀನಾದ ಉಪಟಳ ಮುಂದುವರಿದಿರುವಂತೆಯೇ, ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತವು ಅರುಣಾಚಲ ಪ್ರದೇಶದಲ್ಲಿ ದ್ವಿಪಥ ರಸ್ತೆ ಸುರಂಗವೊಂದನ್ನು ನಿರ್ಮಾಣ ಮಾಡುವ ಪ್ರಕ್ರಿಯೆ ಆರಂಭಿಸಿದೆ.
ಬರೋಬ್ಬರಿ 13 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಈ ಸುರಂಗವು ಜಗತ್ತಿನಲ್ಲೇ ಅತಿ ಉದ್ದದ ದ್ವಿಪಥ ರಸ್ತೆ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2018-19ರ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಈ ಸೇಲಾ ಸುರಂಗ ಯೋಜನೆಯನ್ನು ಘೋಷಿಸಿತ್ತು. 700 ಕೋಟಿ ರೂ. ವೆಚ್ಚದ ಈ ಯೋಜನೆಯ ಕಾಮಗಾರಿ ಈಗ ಕೊನೆಯ ಹಂತಕ್ಕೆ ತಲುಪಿದೆ.
ನಿರ್ಮಾಣ ಪೂರ್ಣಗೊಂಡ ಬಳಿಕ, ಈ ಸುರಂಗದಲ್ಲಿ ಪ್ರತಿನಿತ್ಯ 3 ಸಾವಿರದಿಂದ 4 ಸಾವಿರ ವಾಹನಗಳು ಸಂಚರಿಸಲಿವೆ. ಮುಖ್ಯ ಸುರಂಗದ ಪಕ್ಕದಲ್ಲೇ ಪರ್ಯಾಯವಾಗಿ 1.55 ಕಿ.ಮೀ. ಉದ್ದದ ಎಸ್ಕೇಪ್ ಸುರಂಗವನ್ನೂ ನಿರ್ಮಿಸಲಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಅಲ್ಲಿಂದ ಸಂಚರಿಸಲು ಅವಕಾಶವಿರುತ್ತದೆ. ಮುಂದಿನ ವರ್ಷದ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಪ್ರಾಜೆಕ್ಟ್ ನಿರ್ದೇಶಕ ಪರೀಕ್ಷಿತ್ ಮೆಹ್ರಾ ಹೇಳಿದ್ದಾರೆ.
0 التعليقات: