Tuesday, 12 October 2021

ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತ್ವ ಅಭಿಯಾನ-ಇಂಡಿಯನ್ ಗ್ರ್ಯಾಂಡ್ ಮುಫ್ತಿಯಿಂದ ಪೋಸ್ಟರ್ ಬಿಡುಗಡೆ

 

ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತ್ವ ಅಭಿಯಾನ-ಇಂಡಿಯನ್ ಗ್ರ್ಯಾಂಡ್ ಮುಫ್ತಿಯಿಂದ ಪೋಸ್ಟರ್ ಬಿಡುಗಡೆ

ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಸದಸ್ಯತ್ವ ಅಭಿಯಾನವು ನವೆಂಬರ್ ತಿಂಗಳಲ್ಲಿ ನಡೆಯಲಿದ್ದು ನವೆಂಬರ್ 1 ರಂದು ಮುಸ್ಲಿಂ ಜಮಾಅತ್ ನ ಸದಸ್ಯತ್ವ ದಿನವನ್ನಾಗಿ ಆಚರಿಸಲಾಗುವುದು.

ಇದರ ಪೋಸ್ಟರ್ ನ್ನು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಬಿಡುಗಡೆ ಗೊಳಿಸಿ, 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಮುಸ್ಲಿಂ ಜಮಾಅತ್ ನ ಸದಸ್ಯತ್ವ ಪಡೆಯಬೇಕೆಂದು ಕರೆ ನೀಡಿದರು.

ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಮ್ ಶಾಫಿ ಸಅದಿ ಬೆಂಗಳೂರು, ರಾಜ್ಯ ಉಪಾಧ್ಯಕ್ಷರಾದ ಹಾಜಿ ಮುಹಮ್ಮದ್ ರಾಜೇಶ್,

ಹಾಜಿ ಎ ಹೆಚ್ ಅಬೂಬಕ್ಕರ್ ಸಕಲೇಶಪುರ,ಹಾಜಿ ಉಮರ್ ಅಭಿಮಾನ್ ಬೆಂಗಳೂರು, ಯೂಸುಫ್ ಹಾಜಿ ಚಿಕ್ಕಮಗಳೂರು,ಟಿ ಎಮ್ ನಾಸಿರ್ ಇಂಪಾಲ್ ಬಾಳೆಹೊನ್ನೂರು, ನಾಯಕರಾದ ಅನ್ವರ್ ಭಾಷಾ ಚಿತ್ರದುರ್ಗ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಅಶ್ರಫ್ ಕಿನಾರ ಮಂಗಳೂರು, ಇಸ್ಮಾಯಿಲ್ ಸಅದಿ ಕಿನ್ಯ, ಹಸೈನಾರ್ ಆನೆಮಹಲ್ ಹಾಸನ, ಹಬೀಬ್ ಕೋಯ ಕಾರವಾರ, ಬಿ ಎ ಅಬ್ದುನ್ನಾಸಿರ್ ಲಕ್ಕಿಸ್ಟಾರ್ ಮಂಗಳೂರು,ಜೆ ಎಸ್ ಮುಹಮ್ಮದ್ ಅಲಿ ಸಕಲೇಶಪುರ ಮತ್ತಿತರ ನಾಯಕರು ಉಪಸ್ಥಿತರಿದ್ದರು.


SHARE THIS

Author:

0 التعليقات: