Sunday, 3 October 2021

ಉತ್ತರಾಖಂಡ, ಲಡಾಖ್‌ನಲ್ಲಿ ಚೀನಾದ ಆಕ್ರಮಣ: ಕೇಂದ್ರ ಸರಕಾರಕ್ಕೆ ರಾಹುಲ್ ಗಾಂಧಿ ತರಾಟೆ

 ಉತ್ತರಾಖಂಡ, ಲಡಾಖ್‌ನಲ್ಲಿ ಚೀನಾದ ಆಕ್ರಮಣ: ಕೇಂದ್ರ ಸರಕಾರಕ್ಕೆ ರಾಹುಲ್ ಗಾಂಧಿ ತರಾಟೆ

ಹೊಸದಿಲ್ಲಿ: ಲಡಾಖ್ ಹಾಗೂ  ಉತ್ತರಾಖಂಡದಲ್ಲಿ ಚೀನಾದ ಆಕ್ರಮಣಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

2014 ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು  ರ್ಯಾಲಿಗಳಲ್ಲಿ ಮಾಡಿದ 56 ಇಂಚಿನ ಎದೆಯ ಹೇಳಿಕೆಯನ್ನು ಬಳಸಿಕೊಂಡು ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

"ಚೀನಾ ಹಾಗೂ  ಪಾಕಿಸ್ತಾನ ಜೊತೆಗೆ 'ಮಿಸ್ಟರ್ 56 ಇಂಚು' ಭಾರತದ ನೆಲದಲ್ಲಿ ಚೀನಾದ ಆಕ್ರಮಣ ಹೆಚ್ಚುತ್ತಿರುವುದಕ್ಕೆ ಸಮಾನವಾಗಿದೆ" ಎಂದು ಅವರು ಲಡಾಖ್ ಹಾಗೂ ಉತ್ತರಾಖಂಡವನ್ನು ಉಲ್ಲೇಖಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಸುಮಾರು 100 ಸೈನಿಕರು ಆಗಸ್ಟ್ 30 ರಂದು ಉತ್ತರಾಖಂಡದ ಬಾರಹೋಟಿ ಸೆಕ್ಟರ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಉಲ್ಲಂಘಿಸಿದ್ದಾರೆ.

ಕೆಲವು ಗಂಟೆಗಳ ಕಾಲ ಕಳೆದ ನಂತರ ಚೀನಾದ ಸೈನಿಕರು ಈ ಪ್ರದೇಶದಿಂದ ಮರಳಿದರು ಎಂದು ವರದಿಯಾಗಿತ್ತು.

ಚೀನಾದ ಉಲ್ಲಂಘನೆಯ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಇಲ್ಲ.


SHARE THIS

Author:

0 التعليقات: