Monday, 11 October 2021

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ : ಬೆಳ್ಳಿ ಬೆಲೆ ಇಳಿಕೆ


ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ : 
ಬೆಳ್ಳಿ ಬೆಲೆ ಇಳಿಕೆ

ಬೆಂಗಳೂರು : ದೇಶದಲ್ಲಿ ಚಿನ್ನ, ಬೆಳ್ಳಿ ಬೆಲೆ ನಿರಂತರ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇದೀಗ ಇಂದು ದೇಶದಲ್ಲಿ ಚಿನ್ನದ ಬೆಲೆ (Gold Price) ಸ್ಥಿರತೆ ಕಾಯ್ದುಕೊಂಡಿದೆ.

ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,940 ರೂ. ಇತ್ತು. ಇಂದೂ ಸಹ ಅದೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,940 ರೂ. ಇದೆ.

ಬೆಂಗಳೂರು : 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ಇಂದು 47,890 ರೂ ಮತ್ತು 22 ಕ್ಯಾರೆಟ್ 10 ಗ್ರಾಂ ಚಿನ್ನ 43,900 ರೂ.ಇದೆ. ಹಾಗೆಯೇ ಮೈಸೂರು ಹಾಗೂ ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ಇಂದು 1 ಕೆಜಿ ಬೆಳ್ಳಿಗೆ 4,200 ರೂಪಾಯಿ ಕಡಿಮೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 65,900 ರೂ. ಇತ್ತು. ಇಂದು 1 ಕೆಜಿ ಬೆಳ್ಳಿಗೆ 61,700 ರೂ. ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ (silver rate) ಇಂದು 61,700 ರೂ. ಇದೆ.SHARE THIS

Author:

0 التعليقات: