Friday, 1 October 2021

ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್ ವರದಿ ‘ತಪ್ಪು’ ಎಂದ ಸರಕಾರ

 ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್ ವರದಿ ‘ತಪ್ಪು’ ಎಂದ ಸರಕಾರ

ಹೊಸದಿಲ್ಲಿ: ಸಾಲದ ಹೊರೆ ಹೊತ್ತಿರುವ ಸರಕಾರಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಅಂತಿಮ  ಬಿಡ್ ಅನ್ನು  ಟಾಟಾ ಸನ್ಸ್ ಸಂಸ್ಥೆ ಗೆದ್ದುಕೊಂಡಿದೆ. ಅಮಿತ್ ಶಾ ನೇತೃತ್ವದ ಸಚಿವರ ಸಮಿತಿಯು ಇದಕ್ಕೆ ಅನುಮೋದನೆ ನೀಡಿದೆ ಎಂಬ  ಬ್ಲೂಮ್‌ಬರ್ಗ್ ವರದಿಯನ್ನು ಸರಕಾರವು ನಿರಾಕರಿಸಿದೆ.

 "ಏರ್ ಇಂಡಿಯಾ ಡಿಇನ್‌ವೆಸ್ಟ್‌ಮೆಂಟ್ ಪ್ರಕರಣದಲ್ಲಿ ಭಾರತ ಸರಕಾರವು ಹಣಕಾಸು ಬಿಡ್‌ಗಳ ಅನುಮೋದನೆಯನ್ನು ಸೂಚಿಸುವ ಮಾಧ್ಯಮ ವರದಿಗಳು ತಪ್ಪಾಗಿದೆ. ಸರಕಾರದ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಲಾಗುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಲಾಗುವುದು" ಎಂದು ಹೂಡಿಕೆ ಹಾಗೂ  ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ಟ್ವೀಟ್ ಮಾಡಿದೆ.

ಟಾಟಾ ಗ್ರೂಪ್ ಹಾಗೂ  ಸ್ಪೈಸ್ ಜೆಟ್ ಚೇರ್ಮನ್ ಅಜಯ್ ಸಿಂಗ್ ತಮ್ಮ ಖಾಸಗಿ ಸಾಮರ್ಥ್ಯದಲ್ಲಿ ಸಾಲದ ಹೊರೆಯಿರುವ ಸರಕಾರಿ ಸ್ವಾಮ್ಯದ ಏರ್ಲೈನ್ ಏರ್ ಇಂಡಿಯಾಕ್ಕಾಗಿ ಈ ತಿಂಗಳ ಆರಂಭದಲ್ಲಿ ಬಿಡ್ ಮಾಡಿದ್ದರು.

ಡಿಸೆಂಬರ್ 2020 ರಲ್ಲಿ ಏರ್ ಇಂಡಿಯಾದ ಹರಾಜಿಗೆ ಸರಕಾರವು ಆಸಕ್ತರನ್ನು ಆಹ್ವಾನಿಸಿತ್ತು. ಸಮಸ್ಯೆಯ ಸುಳಿಗೆ ಸಿಲುಕಿರುವ  ವಿಮಾನಯಾನ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲು ನಾಲ್ಕು ಬಿಡ್ಡರ್‌ಗಳು ರೇಸ್‌ಗೆ ಪ್ರವೇಶಿಸಿದ್ದರು. ಆದರೆ ಟಾಟಾ ಗ್ರೂಪ್ ಮತ್ತು ಸ್ಪೈಸ್‌ಜೆಟ್ ಸಿಇಒ ಅಜಯ್ ಸಿಂಗ್ ಮಾತ್ರ ಅಂತಿಮ ಹಂತಕ್ಕೆ ಬಂದಿದ್ದರು.


SHARE THIS

Author:

0 التعليقات: