Sunday, 3 October 2021

ಅ.7ರಿಂದ 17ರವರೆಗೆ 'ಮಡಿಕೇರಿ ನಗರದ ಪ್ರವಾಸಿ ತಾಣ'ಗಳು ಬಂದ್

 ಅ.7ರಿಂದ 17ರವರೆಗೆ 'ಮಡಿಕೇರಿ ನಗರದ ಪ್ರವಾಸಿ ತಾಣ'ಗಳು ಬಂದ್

ಮಡಿಕೇರಿ : ಜಿಲ್ಲೆಯಲ್ಲಿ ದಸರಾ ಹಾಗೂ ತಲಕಾವೇರಿ ತೀರ್ಥೋದ್ಭವದ ಹಿನ್ನಲೆಯಲ್ಲಿ ನಗರದ ಪ್ರವಾಸಿ ತಾಣಗಳನ್ನು ಅಕ್ಟೋಬರ್ 7 ರಿಂದ 17ರವರೆಗೆ ಬಂದ್ ಮಾಡಲಾಗಿದೆ. ಈ ಮೂಲಕ ಪ್ರವಾಸಿಗರಿಗೂ ನಿರ್ಬಂಧ ಹೇರಿದಂತೆ ಆಗಿದೆ.

ಈ ಕುರಿತಂತೆ ಮಡಿಕೇರಿ ಜಿಲ್ಲಾಧಿಕಾರಿ ಚಾರು ಲತಾ ಸೋಮಲ್ ಅವರು ದೇಶ ಹೊರಡಿಸಿದ್ದು, ಅಕ್ಟೋಬರ್ 7 ರಿಂದ 15ರವರೆಗೆ ಮಡಿಕೇರಿ ದಸರಾ ಹಾಗೂ ಅಕ್ಟೋಬರ್ 17ರಂದು ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವದ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಮಡಿಕೇರಿ ನಗರದ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ ಎಂದಿದ್ದಾರೆ.

ಅಂದಹಾಗೇ ಅಕ್ಟೋಬರ್ 7 ರಿಂದ 17ರವರೆಗೆ ಮಡಿಕೇರಿ ನಗರದ ಪ್ರವಾಸಿತಾಣಗಳಾದಂತ ರಾಜಾ ಸೀಟು, ಜನರಲ್ ತಿಮ್ಮಯ್ಯ ಮ್ಯೂಸಿಯಂ, ಗದ್ದಿಗೆ, ಕೋಟೆ, ನೆಹರು ಮಂಟವಗಳಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.


SHARE THIS

Author:

0 التعليقات: