Monday, 25 October 2021

ಮಧ್ಯಪ್ರದೇಶದಲ್ಲಿ ಎರಡು ಲಸಿಕೆ ಪಡೆದ 6 ಜನರಲ್ಲಿ ಡೆಲ್ಟಾ ಪ್ಲಸ್ ಎವೈ.4.2 ಪತ್ತೆ ಸೋಂಕು


ಮಧ್ಯಪ್ರದೇಶದಲ್ಲಿ ಎರಡು ಲಸಿಕೆ ಪಡೆದ 6 ಜನರಲ್ಲಿ ಡೆಲ್ಟಾ ಪ್ಲಸ್ ಎವೈ.4.2 ಪತ್ತೆ ಸೋಂಕು

ಇಂದೋರ್: ದೇಶದಲ್ಲಿ ರೂಪಾಂತರಗಳ ಹಾವಳಿ ಹೆಚ್ಚುತ್ತಿದ್ದು, ಲಸಿಕೆ ಪಡೆದವರಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಮಧ್ಯ ಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಸಂಪೂರ್ಣ ಎರಡೂ ಡೋಸ್ ಲಸಿಕೆ ಪಡೆದ ಆರು ಜನರಲ್ಲಿ ಹೊಸ ಕೊರೋನಾ ವೈರಸ್ ಡೆಲ್ಟಾ ಪ್ಲಸ್ ಎವೈ.4.2 ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ.

'ದೆಹಲಿ ಮೂಲದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ನಿಂದ ಪಡೆದ ವರದಿಯ ಪ್ರಕಾರ, ಆರು ಜನರಲ್ಲಿ ಕೊರೋನಾ ವೈರಸ್‌ನ AY.4.2 ರೂಪಾಂತರಿ ಕಂಡು ಬಂದಿದೆ. ಅವರ ಮಾದರಿಗಳನ್ನು ಪರೀಕ್ಷೆಗಾಗಿ ಸೆಪ್ಟೆಂಬರ್‌ನಲ್ಲಿ ಕಳುಹಿಸಲಾಗಿತ್ತು ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಬಿಎಸ್ ಸಾಹಿತ್ಯ ಹೇಳಿದ್ದಾರೆ.

ಸಾಂಕ್ರಾಮಿಕ ರೋಗ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ AY.4.2 ರೂಪಾಂತರ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಈ ಆರು ಜನರ ಸಂಪರ್ಕಕ್ಕೆ ಬಂದ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.SHARE THIS

Author:

0 التعليقات: