ದೆಹಲಿಯಲ್ಲಿ ಭೀಕರ ಅವಘಡ :
ಕಟ್ಟದಲ್ಲಿ ಬೆಂಕಿ 4 ಜನ ಸಜೀವ ದಹನ
ನವದೆಹಲಿ : ದೆಹಲಿಯ ಓಲ್ಡ್ ಸೀಮಾಪುರಿ ಪ್ರದೇಶದ ಮೂರು ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಲ್ಲಿ ಮಂಗಳವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡ ನಂತರ ನಾಲ್ವರು ಸತ್ತಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.
ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೆಂಕಿ ಕಾಣಿಸಿಕೊಂಡ ನಂತರ ಮೂರು ಅಂತಸ್ತಿನ ಕಟ್ಟಡವು ನಡುಗಿದೆ ಎಂದು ವರದಿಯಾಗಿದೆ.
ಟೆರೇಸ್ ನಲ್ಲಿ ಎಲ್ಲಾ ಮೃತರ ಶವಗಳು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಬೆಂಕಿ ಹೇಗೆ ಆವರಿಸಿದೆ, ಎಷ್ಟು ಜನ ಸಿಲುಕಿಕೊಂಡಿದ್ದಾರೆ, ಬೆಂಕಿ ಆರಿಸಲಾಗಿದೆಯೇ? ಮೊದಲಾದ ಮಾಹಿತಿ ಇನ್ನಷ್ಟೇ ಲಾಭವಾಗಲಿದೆ.
0 التعليقات: