Saturday, 2 October 2021

ಟೊಯೋಟಾ ಕಂಪೆನಿಯ ವಿರುದ್ಧ ಕಾರ್ಮಿಕರ ಆಕ್ರೋಶ: ಮುಷ್ಕರನಿರತ 45 ಕಾರ್ಮಿಕರ ವಜಾ


 ಟೊಯೋಟಾ ಕಂಪೆನಿಯ ವಿರುದ್ಧ ಕಾರ್ಮಿಕರ ಆಕ್ರೋಶ: ಮುಷ್ಕರನಿರತ 45 ಕಾರ್ಮಿಕರ ವಜಾ

ಬೆಂಗಳೂರು: ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಕಂಪನಿಯು ಕಾರ್ಮಿಕ ವಿರೋಧ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಕಂಪನಿಯ ವಿರುದ್ಧ ಮುಷ್ಕರನಿರತ 66 ಕಾರ್ಮಿಕರ ಪೈಕಿ 45 ಕಾರ್ಮಿಕರನ್ನು ವಜಾ ಮಾಡಿದೆ. 

ಇನ್ನುಳಿದ 21 ಕಾರ್ಮಿಕರನ್ನು ಷರತ್ತುಗಳನ್ನು ವಿಧಿಸಿ, ಕೆಲಸಕ್ಕೆ ತೆಗೆದುಕೊಂಡಿದೆ. ವಿಚಾರಣೆಯಲ್ಲಿ ಕಾರ್ಮಿಕರು ಮಾಡಿದ್ದ ಆರೋಪಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಕಂಪನಿಯ ಆಡಳಿತ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಟೊಯೊಟಾ ಕಂಪನಿಯು ಶಿಸ್ತಿನ ವಿಚಾರಣೆಯನ್ನು ಮೂರನೇ ವ್ಯಕ್ತಿಯಿಂದ, ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲಾಗಿದ್ದು, ವಿಚಾರಣೆಯ ಪ್ರಕ್ರಿಯೆಯಲ್ಲಿ ಮುಷ್ಕರನಿರತರಿಗೆ ತಮ್ಮ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅಗತ್ಯವಾದ ಕಾಲಾವಕಾಶಗಳನ್ನು ಒದಗಿಸಲಾಗಿತ್ತು ಎಂದು ಕಂಪನಿ ಸ್ಪಷ್ಟಪಡಿಸಿದೆ.

ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳನ್ನು ವಿಚಾರಣೆಗೆ ಆಹ್ವಾನಿಸಿದರೂ, ಕಂಪನಿಯ ಆಹ್ವಾನವನ್ನು ಪರಿಗಣಿಸದೆ, ಪ್ರತಿಭಟನೆ ಮಾಡಿದ್ದಾರೆ. ಸರಕಾರವು ಮುಷ್ಕರವನ್ನು ನಿಷೇಧಿಸಿದರೂ, ಕಾರ್ಮಿಕ ಸಂಘಟಣೆಯು ಕಾನೂನುಬಾಹಿರವಾಗಿ ನಾಲ್ಕು ತಿಂಗಳುಗಳವರೆಗೆ ಮುಷ್ಕರವನ್ನು ವಿಸ್ತರಿಸಿದೆ. ಅಲ್ಲದೇ ಕಾರ್ಖಾನೆ ವ್ಯವಸ್ಥಾಪಕರಿಗೆ ಬೆದರಿಕೆ ಹಾಕಿ, ಕಂಪನಿಯ ಆಸ್ತಿಗೆ ಹಾನಿಗೆ ಯತ್ನ, ಮಾನನಷ್ಟ, ಹಲ್ಲೆ ಮುಂತಾದ ಗಂಭೀರ ದುಷ್ಕೃತ್ಯಗಳಲ್ಲಿ ಕಾರ್ಮಿಕರು ಭಾಗಿಯಾಗಿದ್ದರು ಎಂದು ಕಂಪನಿ ಆರೋಪಿಸಿದೆ.

ಕಾರ್ಮಿಕ ಸಂಘಟನೆ ಖಂಡನೆ:

ಕಂಪೆನಿಯು ಈ ಹಿಂದೆ ಮುಷ್ಕರನಿರತ 66 ಕಾರ್ಮಿಕರನ್ನು ಅಮಾನತು ಮಾಡಿ, 8 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿತ್ತು. ಈಗ ಮುಷ್ಕರನಿರತ 66 ಕಾರ್ಮಿಕರ ಪೈಕಿ 45 ಜನರನ್ನು ಕೆಲಸದಿಂದ ವಜಾ ಮಾಡುವ ಮೂಲಕ, ಟೊಯೊಟಾ ಕಾರ್ಖಾನೆ ಆಡಳಿತಮಂಡಳಿ ಮತ್ತೊಮ್ಮೆ ತನ್ನ ದುರಹಂಕಾರದ ಪರಮಾವಧಿ ಮೆರೆದಿದೆ. ಸಂಘವು ಈ ಕ್ರಮವನ್ನು ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದೆ.


SHARE THIS

Author:

0 التعليقات: