Wednesday, 20 October 2021

ಮುಂದುವರಿದ ತೈಲ ದರ ಏರಿಕೆ: ಪೆಟ್ರೋಲ್, ಡೀಸೆಲ್ ಲೀಟರ್ ಗೆ 35 ಪೈಸೆ ಹೆಚ್ಚಳ


ಮುಂದುವರಿದ ತೈಲ ದರ ಏರಿಕೆ: 
ಪೆಟ್ರೋಲ್, ಡೀಸೆಲ್ ಲೀಟರ್ ಗೆ 35 ಪೈಸೆ ಹೆಚ್ಚಳ

ಹೊಸದಿಲ್ಲಿ: ಎರಡು ದಿನಗಳ ಬಳಿಕ ತೈಲ ದರಗಳಲ್ಲಿ ಬುಧವಾರ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಲೀಟರ್ಗೆ ತಲಾ 35 ಪೈಸೆ ಹೆಚ್ಚಿಸಲಾಗಿದೆ.

ರಾಜಧಾನಿ ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ಅತ್ಯಧಿಕವಾಗಿದ್ದು ಲೀಟರ್ಗೆ 106.19 ರೂ., ಮುಂಬೈಯಲ್ಲಿ ಲೀಟರ್ಗೆ 112.11 ರೂ. ಗೆ ತಲುಪಿದೆ. ಮುಂಬೈಯಲ್ಲಿ ಡೀಸೆಲ್ ದರವು ಲೀಟರ್ಗೆ 102.89 ರೂ, ಹಾಗೂ ದಿಲ್ಲಿಲ್ಲಿ 94.92 ರೂ. ಆಗಿದೆ.

ಇಂದಿನ ತೈಲ ದರ ಹೆಚ್ಚಳದೊಂದಿಗೆ ದೇಶದ ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಪೆಟ್ರೋಲ್ ದರವು ಪ್ರತಿ ಲೀಟರ್ಗೆ 100 ರೂ. ಗಡಿಯನ್ನು ದಾಟಿದಂತಾಗಿದೆ ಹಾಗೂ ಡೀಸೆಲ್ ಬೆಲೆಯು 12ಕ್ಕೂ ಅಧಿಕ ರಾಜ್ಯಗಳಲ್ಲಿ ಶತಕವನ್ನು ತಲುಪಿದೆ.

ರಾಜಸ್ಥಾನದ ಗಂಗಾನಗರದಲ್ಲಿ ತೈಲ ದರ ದೇಶದಲ್ಲೇ ಅತ್ಯಧಿಕವಾಗಿದ್ದು, ಅಲ್ಲಿ ಪೆಟ್ರೋಲ್ ಲೀಟರ್ಗೆ 118.23 ಹಾಗೂ ಡೀಸೆಲ್ 109.04 ರೂ. ಆಗಿದೆ. ಪಣಜಿ ಹಾಗೂ ರಾಂಚಿಯಲ್ಲಿ ಡೀಸೆಲ್ ದರವು ಪ್ರತಿ ಲೀಟರ್ಗೆ 100 ರೂ. ದಾಟಿದೆ.

ಸೆಪ್ಟೆಂಬರ್ ತಿಂಗಳ ಬಳಿಕ ದೇಶಾದ್ಯಂತ ಪೆಟ್ರೋಲ್ ದರದಲ್ಲಿ ಹೆಚ್ಚಳವಾಗಿರುವುದು ಇದು 17ನೇ ಸಲ ಹಾಗೂ ಡೀಸೆಲ್ ದರದಲ್ಲಿ ಏರಿಕೆಯಾಗಿರುವುದು 20ನೇ ಸಲವಾಗಿದೆ. ಸ್ಥಳೀಯ ತೆರಿಗೆಗಳನ್ನು ಆಧರಿಸಿ ತೈಲದರಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯದಲ್ಲಿ ವಿಭಿನ್ನವಾಗಿರುತ್ತವೆ.SHARE THIS

Author:

0 التعليقات: