Tuesday, 19 October 2021

ಮತ್ತೆ ಏರಿಕೆ: ಪೆಟ್ರೋಲ್, ಡೀಸೆಲ್ ಬೆಲೆ ತಲಾ 35 ಪೈಸೆ ಹೆಚ್ಚಳ


ಮತ್ತೆ ಏರಿಕೆ: 
ಪೆಟ್ರೋಲ್, ಡೀಸೆಲ್ ಬೆಲೆ ತಲಾ 35 ಪೈಸೆ ಹೆಚ್ಚಳ

ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದ್ದು, ತಲಾ 35 ಪೈಸೆ ಇಂದು ಬುಧವಾರ ಏರಿಕೆಯಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ದೇಶಾದ್ಯಂತ ಇಂಧನ ದರವನ್ನು ಸತತವಾಗಿ ಹೆಚ್ಚಳ ಮಾಡುತ್ತಾ ಬಂದಿದ್ದು, ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ 112 ರೂಪಾಯಿ 11 ಪೈಸೆಯಾಗಿದ್ದು, ಡೀಸೆಲ್ ಬೆಲೆ 102 ರೂಪಾಯಿ 89 ಪೈಸೆಯಾಗಿದೆ.

ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 106 ರೂಪಾಯಿ 19 ಪೈಸೆ ಮತ್ತು ಡೀಸೆಲ್ ಬೆಲೆ 94 ರೂಪಾಯಿ 92 ಪೈಸೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 109 ರೂಪಾಯಿ 88 ಪೈಸೆಯಾದರೆ, ಪ್ರತೀ ಲೀಟರ್ ಡೀಸೆಲ್ ದರ 100 ರೂಪಾಯಿ 72 ಪೈಸೆಗೆ ಏರಿಕೆಯಾಗಿದೆ.SHARE THIS

Author:

0 التعليقات: