Thursday, 14 October 2021

ರಾಜ್ಯದಲ್ಲಿಂದು 310 ಮಂದಿಗೆ ಕೊರೋನ ದೃಢ: 6 ಮಂದಿ ಮೃತ್ಯು

 ರಾಜ್ಯದಲ್ಲಿಂದು 310 ಮಂದಿಗೆ ಕೊರೋನ ದೃಢ: 6 ಮಂದಿ ಮೃತ್ಯು

ಬೆಂಗಳೂರು, : ರಾಜ್ಯದಲ್ಲಿ ಗುರುವಾರ 310 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 6 ಜನರು ಸೋಂಕಿಗೆ ಬಲಿಯಾಗಿದ್ದು, 347 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 29,82,399ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 37, 922ಕ್ಕೆ ತಲುಪಿದೆ.

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 9,578ಕ್ಕೆ ಏರಿಕೆಯಾಗಿದ್ದು, ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

ರಾಜಧಾನಿಯಲ್ಲಿ 148 ಮಂದಿಗೆ ಸೋಂಕು

ಬೆಂಗಳೂರಿನಲ್ಲಿ 148 ಮಂದಿಗೆ ಸೋಂಕು ತಗಲಿದ್ದು ಒಟ್ಟು ಸೋಂಕಿತರ ಸಂಖ್ಯೆ 12,48,892 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,637 ಆಗಿದ್ದು ಇಬ್ಬರು ಮೃತಪಟ್ಟಿದ್ದಾರೆ.


SHARE THIS

Author:

0 التعليقات: