ಶಾರುಖ್ ಪುತ್ರನ ಡ್ರಗ್ಸ್ ಕೇಸ್ಗೆ ಭಾರಿ ಟ್ವಿಸ್ಟ್: 25 ಕೋಟಿ ರೂ. ಲಂಚ ಕೇಳಿದ ಅಧಿಕಾರಿಗಳು
ಮುಂಬೈ: ಡ್ರಗ್ಸ್ ಕೇಸ್ನಲ್ಲಿ ಸಿಲುಕಿ ಜಾಮೀನು ಸಿಗದೇ ಜೈಲಿನಲ್ಲಿ ಇರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣ ಇದೀಗ ಭಾರಿ ಕುತೂಹಲದ ತಿರುವು ಪಡೆದುಕೊಂಡಿದೆ. ಮಾದಕ ಪದಾರ್ಥ ನಿಯಂತ್ರಣ ಬ್ಯೂರೊದ (ಎನ್ಸಿಬಿ) ಅಧಿಕಾರಿಗಳು ಈತನ ಬಿಡುಗಡೆಗೆ 25 ಕೋಟಿ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು, ಮಧ್ಯವರ್ತಿಗಳ ಮೂಲಕ ಲಂಚ ಕೇಳಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಆರೋಪ ಮಾಡಿದವರು ಡ್ರಗ್ಸ್ ಪ್ರಕರಣದ ಸಾಕ್ಷಿಯಲ್ಲಿ ಒಬ್ಬರಾಗಿರುವ ಪ್ರಭಾಕರ ಸೈಲ್. ಆರ್ಯನ್ ಖಾನ್ ಜತೆಗೆ ಸೆಲ್ಫಿ ಕ್ಲಿಕ್ಕಿಸಿ ಈ ಪ್ರಕರಣದಲ್ಲಿ ಭಾರಿ ಕುತೂಹಲ ಮೂಡಿಸಿರುವ ವ್ಯಕ್ತಿ ಕಿರಣ್ ಗೋಸಾವಿ. ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಆತ ಎಸ್ಕೇಪ್ ಆಗಿದ್ದಾನೆ. ಈತನ ಬಾಡಿಗಾಡ್ ಈ ಪ್ರಭಾಕರ್ ಸೈಲ್. ಈತನೀಗ 25 ಕೋಟಿ ರೂಪಾಯಿ ಲಂಚದ ಬಗ್ಗೆ ಆರೋಪ ಮಾಡಿದ್ದಾನೆ.
ಎನ್ಸಿಬಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಎನ್ಸಿಬಿಯ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೇಡ್ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಮೊತ್ತ ಕೊಟ್ಟರೆ ಆರ್ಯನ್ ಬಿಡುಗಡೆ ಮಾಡಲಾಗುವುದು ಎಂದಿದ್ದರು, ಕೊನೆಗೆ 18 ಕೋಟಿ ರೂಪಾಯಿಗೆ ಇದು ಸೆಟ್ಲ್ ಆಗಿತ್ತು ಎಂದು ಸೈಲ್ ಆರೋಪಿಸಿದ್ದಾರೆ.
ವಿದೇಶದಲ್ಲಿ ಉದ್ಯೋಗ ದೊರಕಿಸಿ ಕೊಡುವ ಕೆ.ಪಿ. ಗೋಸಾವಿ ಎಂಬ ವ್ಯಕ್ತಿ ಪ್ರಕರಣದ ಇನ್ನೊಬ್ಬ ಸಾಕ್ಷಿ. 2018ರ ವಂಚನೆ ಪ್ರಕರಣವೊಂದರಲ್ಲಿ ಗೋಸಾವಿ ವಿರುದ್ಧ ಪುಣೆ ಪೊಲೀಸರು ಇತ್ತೀಚೆಗೆ ಲುಕ್ಔಟ್ ನೋಟಿಸ್ ಹೊರಡಿಸಿದ್ದಾರೆ. ಆದರೆ ಈ ಆರೋಪಗಳನ್ನು ಎನ್ಸಿಬಿ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಇವು ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಹೇಳಿದ್ದಾರೆ.
0 التعليقات: