Sunday, 17 October 2021

ಗಾಝಿಯಾಬಾದ್‌: 25 ನೇ ಮಹಡಿಯಿಂದ ಕೆಳಗೆ ಬಿದ್ದು 14 ವರ್ಷದ ಅವಳಿ ಸಹೋದರರು ಮೃತ್ಯು

 ಗಾಝಿಯಾಬಾದ್‌: 25 ನೇ ಮಹಡಿಯಿಂದ ಕೆಳಗೆ ಬಿದ್ದು 14 ವರ್ಷದ ಅವಳಿ ಸಹೋದರರು ಮೃತ್ಯು

ಗಾಝಿಯಾಬಾದ್: ಹದಿನಾಲ್ಕು ವರ್ಷದ ಅವಳಿ ಸಹೋದರರು ಶನಿವಾರ ತಡರಾತ್ರಿ ತಮ್ಮ ಅಪಾರ್ಟ್ ಮೆಂಟ್  ಕಟ್ಟಡದ 25 ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ NDTV ವರದಿ ಮಾಡಿದೆ.

ಇಬ್ಬರು ಹುಡುಗರು  25 ನೇ ಮಹಡಿಯಿಂದ ಹೇಗೆ ಬಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಇಬ್ಬರೂ 9ನೇ ತರಗತಿಯ ವಿದ್ಯಾರ್ಥಿಗಳಾಗಿದ್ದರು.

ಪೊಲೀಸರ ಪ್ರಕಾರ,ಮಕ್ಕಳ ತಂದೆ ಮುಂಬೈನಲ್ಲಿ ಅಧಿಕೃತ ಪ್ರವಾಸದಲ್ಲಿದ್ದರು. ಅವಳಿ ಮಕ್ಕಳ ತಾಯಿ ಹಾಗೂ  ಸಹೋದರಿ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಮಧ್ಯರಾತ್ರಿಯ ನಂತರ ನಡೆದ ಈ ಘಟನೆ ಸಿದ್ಧಾರ್ಥ್ ವಿಹಾರ್‌ನ ಅಪಾರ್ಟ್‌ಮೆಂಟ್ ಸಂಕೀರ್ಣದಿಂದ ವರದಿಯಾಗಿದೆ.

"ನಿನ್ನೆ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಸತ್ಯನಾರಾಯಣ್ ಹಾಗೂ  ಸೂರ್ಯನಾರಾಯಣ್  ಹೆಸರಿನ ಅವಳಿ ಸಹೋದರರು  ತಮ್ಮ ಅಪಾರ್ಟ್ ಮೆಂಟ್ ಕಟ್ಟಡದ 25 ನೇ ಮಹಡಿಯಿಂದ ಬಿದ್ದ ತಕ್ಷಣ ಮೃತಪಟ್ಟರು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ವಿಜಯ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


SHARE THIS

Author:

0 التعليقات: