Saturday, 30 October 2021

ಎಸ್.ಎಸ್.ಎಫ್ ರೆಂಜ ಸೆಕ್ಟರ್ ಪ್ರತಿಭೋತ್ಸವ - 21 : ಡೆಮ್ಮಂಗರ ಶಾಖೆ ಚಾಂಪಿಯನ್

 

ಎಸ್.ಎಸ್.ಎಫ್ ರೆಂಜ ಸೆಕ್ಟರ್ ಪ್ರತಿಭೋತ್ಸವ - 21 : ಡೆಮ್ಮಂಗರ ಶಾಖೆ ಚಾಂಪಿಯನ್

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್.ಎಸ್.ಎಫ್ ರೆಂಜ ಸೆಕ್ಟರ್ ವತಿಯಿಂದ ನಿರೀಕ್ಷೆಗಳ ನೀಲ ನಕ್ಷೆ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿಭೋತ್ಸವ 21 ಕಾರ್ಯಕ್ರಮವು ರೆಂಜ ತಾಜುಲ್ ಫುಖಹಾ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.

ಎಸ್.ಎಸ್.ಎಫ್ ರೆಂಜ ಸೆಕ್ಟರ್ ಅಧ್ಯಕ್ಷರಾದ ಕರೀಂ ಬಾಹಸನಿ ರೆಂಜ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಎಫ್ ಪೇರಲ್ತಡ್ಕ ಶಾಖೆಯ ಅಧ್ಯಕ್ಷರಾದ ಹಾಮಿದ್ ಅಲಿ ಹಿಮಮಿ ಸಖಾಫಿ ಸ್ವಾಗತಿಸಿದರು. ಫಾರೂಕ್ ಜುಮಾ ಮಸೀದಿಯ ಖತೀಬರಾದ ಜುನೈದ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಹಮ್ಮದ್ ಮುಸ್ಲಿಯಾರ್ ಮಣ್ಣಾಪು ಮೌಲಿದ್ ಗೆ ನೇತೃತ್ವ ವಹಿಸಿ ದುಆ ನೆರವೇರಿಸಿಕೊಟ್ಟರು. ಎಸ್.ಎಸ್.ಎಫ್ ಡೆಮ್ಮಂಗರ ಶಾಖೆಯ ಪ್ರಧಾನ ಕಾರ್ಯದರ್ಶಿ ಖಲಂದರ್ ಹಿಮಮಿ ಸಖಾಫಿ ಧನ್ಯವಾದ ಅರ್ಪಿಸಿದರು.

 ‌ಬಳಿಕ ರೆಂಜ ಸೆಕ್ಟರ್ ವ್ಯಾಪ್ತಿಗೊಳಪಟ್ಟ ರೆಂಜ, ಡೆಮ್ಮಂಗರ, ಪೇರಲ್ತಡ್ಕ, ಪಾಣಾಜೆ ಹಾಗೂ ತಂಬುತ್ತಡ್ಕ ಶಾಖೆಗಳ ಸುಮಾರು 150 ರಷ್ಟು ಪ್ರತಿಭೆಗಳು ಪ್ರತಿಭೋತ್ಸವ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಚೇರ್ಮನ್ ರಫೀಕ್ ಬಾಹಸನಿ ವಹಿಸಿದರು. ಎಸ್.ವೈ.ಎಸ್ ರೆಂಜ ಸೆಂಟರ್ ಕೋಶಾಧಿಕಾರಿ ಅಬ್ಬಾಸ್ ಮದನಿ ಉಸ್ತಾದರು  ಕಾರ್ಯಕ್ರಮವನ್ನು ಉದ್ಘಾಟಿಸಿ ದುಆ ನೆರವೇರಿಸಿದರು.ಪ್ರತಿಭೋತ್ಸವ ನಡೆಸಲು ಸ್ಥಳಾವಕಾಶ ನೀಡಿ ಸಹಕರಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ನಾಯಕರಾದ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಪ್ರಾಸ್ತಾವಿಕ ಭಾಷಣ ಮಾಡಿ ಶುಭಹಾರೈಸಿದರು.

ಬಳಿಕ ಪ್ರತಿ ವಿಷಯದಲ್ಲೂ ಪ್ರಥಮ, ದ್ವಿತೀಯ ಸ್ಥಾನ ಪಡೆದ ಪ್ರತಿಭೆಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಅತೀ ಹೆಚ್ಚು ಅಂಕ ಪಡೆದ ಡೆಮ್ಮಂಗರ ಶಾಖೆಯು ಚಾಂಪಿಯನ್ ಆಗಿ ಹೊರಹೊಮ್ಮಿದರೆ,ರೆಂಜ ಶಾಖೆ ದ್ವಿತೀಯ ಸ್ಥಾನ ಹಾಗೂ ಪೇರಲ್ತಡ್ಕ ಶಾಖೆ ತೃತೀಯ ಸ್ಥಾನವನ್ನು ಅಲಂಕರಿಸಿತು.ತೀರ್ಪುಗಾರರಾಗಿ ಶಫೀಕ್ ಸಅದಿ ಈಶ್ವರಮಂಗಲ, ಶಫೀಕ್ ಮಾಸ್ಟರ್ ತಿಂಗಳಾಡಿ, ಮುಹ್ಸಿನ್ ಕಟ್ಟತ್ತಾರು, ವಾಸಿಹ್ ಮತ್ತು ಸಾದಾತ್ ರು ಸಹಕರಿಸಿದರು. ಪುತ್ತೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಅಡ್ಕ, ಇಮ್ರಾನ್ ರೆಂಜಲಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ವೇದಿಕೆಯಲ್ಲಿ ಇಬ್ರಾಹಿಂ ಮುಸ್ಲಿಯಾರ್ ರೆಂಜ, ಶರೀಫ್ ಅಮಾನಿ ಇರ್ದೆ, ಅಬ್ದುರ್ರಹ್ಮಾನ್ ಮಣ್ಣಾಪು, ಅಮೀರ್ ವೈ.ಎಂ.ಕೆ, ಜಾಬಿರ್ ಕೇಕನಾಜೆ ಕೆಸಿಎಫ್ ಸೌದಿ, ಅಬ್ದುರ್ರಝಾಕ್ ಕೆಸಿಎಫ್ ಅಬುಧಾಬಿ, ಎಂ.ಕೆ ಶಂಸುದ್ದೀನ್, ಖಾಸಿಂ ಪೇರಲ್ತಡ್ಕ, ರಝಾಕ್ ನೂಜಿ,ಮೂಸೆ ಚೆಲ್ಯಡ್ಕ, ಕಲಂದರ್ ಅಲಿ ಮಣ್ಣಾಪು, ರಫೀಕ್ ಮಣ್ಣಾಪು ಹಾಗೂ ಇನ್ನಿತರ ಹಲವಾರು ಉಲಮಾ ಉಮರಾ ನೇತಾರರು ಸೇರಿದಂತೆ, SYS SSF ಎಲ್ಲಾ ಶಾಖೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಎಸ್.ಎಫ್ ರೆಂಜ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ರಝಾಕ್ ಹಿಮಮಿ ಸ್ವಾಗತಿಸಿ , ಪ್ರತಿಭೋತ್ಸವ ಸ್ವಾಗತ ಸಮಿತಿ ಕನ್ವೀನರ್ ಝುಬೈರ್ ವಂದಿಸಿದರು.
SHARE THIS

Author:

0 التعليقات: