Tuesday, 26 October 2021

ಟ್ವೆಂಟಿ-20 ವಿಶ್ವಕಪ್:ನ್ಯೂಝಿಲ್ಯಾಂಡ್ ವಿರುದ್ಧ ಪಾಕಿಸ್ತಾನಕ್ಕೆ ಐದು ವಿಕೆಟ್ ಜಯ


ಟ್ವೆಂಟಿ-20 ವಿಶ್ವಕಪ್:ನ್ಯೂಝಿಲ್ಯಾಂಡ್ ವಿರುದ್ಧ ಪಾಕಿಸ್ತಾನಕ್ಕೆ ಐದು ವಿಕೆಟ್ ಜಯ

ಶಾರ್ಜಾ: ಹಾರಿಸ್ ರವೂಫ್ (4-22)ಶಿಸ್ತುಬದ್ಧ ಬೌಲಿಂಗ್ ದಾಳಿ ಹಾಗೂ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಟ್ವೆಂಟಿ-20 ವಿಶ್ವಕಪ್ ನ ಗ್ರೂಪ್-2ರ 19ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಝಿಲ್ಯಾಂಡ್ ವಿರುದ್ಧ 5 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲ್ಲಲು ಸುಲಭ ಸವಾಲು ಪಡೆದ ಪಾಕ್ ತಂಡ 18.4ನೇ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು.

ಶುಐಬ್ ಮಲಿಕ್(ಔಟಾಗದೆ 27, 20 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ಆಸಿಫ್ ಅಲಿ(ಔಟಾಗದೆ 27, 12 ಎಸೆತ, 1 ಬೌಂಡರಿ, 3 ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸಿದರು.  ಆರಂಭಿಕ ಬ್ಯಾಟ್ಸ್ ಮನ್ ಮುಹಮ್ಮದ್ ರಿಝ್ವಾನ್ ಗರಿಷ್ಟ ಸ್ಕೋರ್ (33, 34 ಎಸೆತ, 5 ಬೌಂಡರಿ) ಗಳಿಸಿದರು. ಫಖರ್ ಝಮಾನ್ , ಇಮಾದ್ ವಸಿಂ ಹಾಗೂ ಮುಹಮ್ಮದ್ ಹಫೀಝ್ ತಲಾ 11 ರನ್ ಗಳಿಸಿದರು.



SHARE THIS

Author:

0 التعليقات: