ದೇಶದಲ್ಲಿ ಮತ್ತೆ ಏರಿಕೆ:
ಇಂದು 16,156 ಜನರಿಗೆ ಕೊರೋನಾ,
733 ಜನರು ಸಾವು
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 16,156 ಹೊಸ ಕೋವಿಡ್-19 ಪ್ರಕರಣಗಳು, 733 ಜನರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ.
ಈ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 16,156 ಹೊಸ ಪ್ರಕರಣಗಳು ವರದಿಯಾದ ನಂತರ ಕೊರೊನಾ ವೈರಸ್ ಕಾಯಿಲೆಯ (ಕೋವಿಡ್-19) ಭಾರತದ ದೈನಂದಿನ ಸಂಖ್ಯೆ ಗುರುವಾರ ಹೆಚ್ಚಳವಾಗಿದೆ. ಇದರಿಂದಾಗಿ ಕೊರೋನಾ ಪ್ರಕರಣಗಳ ಸಂಖ್ಯೆ 34,231,809ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಇನ್ನೂ 17,000 ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡರೆ, ಕಳೆದ 24 ಗಂಟೆಗಳಲ್ಲಿ 733 ಜನರು ವೈರಲ್ ಕಾಯಿಲೆಗೆ ಬಲಿಯಾಗಿದ್ದಾರೆ. ಒಟ್ಟು ಚೇತರಿಕೆ ಮತ್ತು ಸಾವಿನ ಸಂಖ್ಯೆ ಕ್ರಮವಾಗಿ 33,614,434 ಮತ್ತು 456,386 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು 160,989 ಆಗಿದೆ.
0 التعليقات: