Sunday, 10 October 2021

ರಷ್ಯಾದಲ್ಲಿ ವಿಮಾನ ಪತನ: 16 ಜನರು ಮೃತಪಟ್ಟಿರುವ ಭೀತಿ


ರಷ್ಯಾದಲ್ಲಿ ವಿಮಾನ ಪತನ: 16 ಜನರು ಮೃತಪಟ್ಟಿರುವ ಭೀತಿ

ಮಾಸ್ಕೋ:  ಪ್ಯಾರಾಚೂಟಿಸ್ಟ್‌ಗಳನ್ನು ಹೊತ್ತ ವಿಮಾನವು ಮಧ್ಯ ರಷ್ಯಾದಲ್ಲಿ ರವಿವಾರ ಪತನಗೊಂಡಿದೆ ಎಂದು ತುರ್ತು ಸಚಿವಾಲಯ ಹೇಳಿದೆ. ಹದಿನಾರು ಜನರು ಸಾವನ್ನಪ್ಪಿರುವ ಭೀತಿ ಇದೆ.

23 ಜನರನ್ನು ಹೊತ್ತ ಎಲ್ -410 ವಿಮಾನವು ಸ್ಥಳೀಯ ಸಮಯ ಬೆಳಗ್ಗೆ 9:23 ರ ಸುಮಾರಿಗೆ ಟಾಟರ್ಸ್ತಾನ್ ಗಣರಾಜ್ಯದ ಮೇಲೆ ಹಾರಾಟದ ವೇಳೆ ಪತನಗೊಂಡಿದೆ ಎಂದು ಸಚಿವಾಲಯ ತನ್ನ ಟೆಲಿಗ್ರಾಂ ಚಾನೆಲ್ ನಲ್ಲಿ ತಿಳಿಸಿದ್ದು, ಏಳು ಜನರನ್ನು ಅವಶೇಷಗಳಿಂದ ರಕ್ಷಿಸಲಾಗಿದೆ.

ಉಳಿದ ಹದಿನಾರು ಜನರ ಸುಳಿವು ಲಭ್ಯವಾಗಿಲ್ಲ ಎಂದು ತುರ್ತು ಸೇವೆಗಳ ಪ್ರತಿನಿಧಿ ಆರ್‌ಐಎ ನೊವೊಸ್ಟಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಸಚಿವಾಲಯವು ಪ್ರಕಟಿಸಿದ ಚಿತ್ರಗಳಲ್ಲಿ ವಿಮಾನವು ಮುರಿದಿರುವುದನ್ನು ತೋರಿಸಿದೆ.

ಬದುಕುಳಿದ ಏಳು ಮಂದಿ ಆಸ್ಪತ್ರೆಯಲ್ಲಿದ್ದಾರೆ,.  ಒಬ್ಬರು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಆರ್‌ಐಎ ನೊವೊಸ್ಟಿ ವರದಿ ಮಾಡಿದೆ. 


SHARE THIS

Author:

0 التعليقات: