Tuesday, 5 October 2021

15 ವರ್ಷಕ್ಕಿಂತ ಹಳೆಯ ವಾಹನ ನೋಂದಣಿ ಶುಲ್ಕದಲ್ಲಿ ಭಾರೀ ಏರಿಕೆ

 ಹಳೆಯ ವಾಹನ ಮಾಲೀಕರಿಗೆ ಬಿಗ್ ಶಾಕ್ : 


15 ವರ್ಷಕ್ಕಿಂತ ಹಳೆಯ ವಾಹನ ನೋಂದಣಿ ಶುಲ್ಕದಲ್ಲಿ ಭಾರೀ ಏರಿಕೆ

ನವದೆಹಲಿ : ಕೇಂದ್ರ ಸರ್ಕಾರವು ಹಳೇ ವಾಹನ ಮಾಲೀಕರಿಗೆ ಬಿಗ್ ಶಾಕ್ ನೀಡಿದ್ದು, 15 ವರ್ಷ ಹಳೆಯ ವಾಹನ ಗುಜರಿಗೆ ಹಾಕುವ ನೀತಿ ಜಾರಿಯಾಗಿರುವುದರಿಂದ ಹಳೆ ವಾಹನಗಳ ನೋಂದಣಿ ನವೀಕರಣ ಶುಲ್ಕವನ್ನು ಬರೋಬ್ಬರಿ 8 ಪಟ್ಟು ಹೆಚ್ಚಳ ಮಾಡಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, 15 ವರ್ಷಗಳ ಹಳೆಯ ವಾಹನ ನೋಂದಣಿ ನವೀಕರಣಕ್ಕೆ ಕಟ್ಟುವ ಶುಲ್ಕ ಈಗಿರುವ 600 ರೂ. ನಿಂದ 5000 ರೂ.ಗೆ ಏರಿಕೆಯಾಗಲಿದ್ದು, 2022 ರ ಏಪ್ರಿಲ್ ನಿಂದ ಈ ನಿಯಮ ಜಾರಿಗೆ ಬರಲಿದೆ.

ದ್ವಿಚಕ್ರ ವಾಹನಗಳ ನೋಂದಣಿ ನವೀಕರಣ ದರ 300 ರೂ.ನಿಂದ 1000 ರೂ. ಗೆ ಏರಿಕೆಯಾಗಲಿದೆ. 15 ವರ್ಷ ಮೇಲ್ಪಟ್ಟ ಬಸ್, ಟ್ರಕ್ ಗಳಿಗೆ ಫಿಟ್ ನೆಸ್ ಪ್ರಮಾಣಪತ್ರ ನವೀಕರಣ ಶುಲ್ಕ 1,500 ರೂ.ನಿಂದ 12,500 ರೂ.ಗೆ ಹೆಚ್ಚಳ ಆಗಲಿದೆ. ಜೊತೆಗೆ 15 ವರ್ಷ ಹಳೆಯ ವಾಹನಗಳ ಬಳಕೆಯನ್ನು ಮುಂದುವರೆಸಿದರೆ 5 ವರ್ಷಗಳಿಗೆ ಒಮ್ಮೆ ನೋಂದಣಿ ನವೀಕರಿಸಬೇಕು. ವಾಣಿಜ್ಯ ವಾಹನಗಳಿಗೆ 8 ವರ್ಷಗಳಿಗೆ ಒಮ್ಮೆ ಫಿಟ್ ನೆಸ್ ಪ್ರಮಾಣ ನವೀಕರಸಬೇಕು ಎಂದು ಕೇಂದ್ರ ಹೆದ್ದಾರಿ ಸಚಿವಾಲಯ ತಿಳಿಸಿದೆ.

ಖಾಸಗಿ ವಾಹನಗಳ ನೋಂದಣಿ ನವೀಕರಣದಲ್ಲಿ ವಿಳಂಬವು ಪ್ರತಿ ತಿಂಗಳೂ 300 ರೂಪಾಯಿ ಮತ್ತು ವಾಣಿಜ್ಯ ವಾಹನಗಳಿಗೆ 500 ರೂಪಾಯಿ ದಂಡಕ್ಕೆ ಆಹ್ವಾನ ನೀಡಲಿದೆ. ಹಾಗೆಯೇ ವಾಣಿಜ್ಯ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ನವೀಕರಣ ವಿಳಂಬವಾದರೆ ಪ್ರತಿ ದಿನ 50 ರೂಪಾಯಿ ದಂಡ ತೆರಬೇಕಾಗುತ್ತದೆ.SHARE THIS

Author:

0 التعليقات: