Tuesday, 12 October 2021

ಸತತ 15ನೇ ದಿನವೂ ಜಿಲ್ಲೆಗಳಲ್ಲಿ ತೈಲ ಬೆಲೆ ಏರಿಕೆ; ಇಲ್ಲಿದೆ ಪೆಟ್ರೋಲ್-ಡೀಸೆಲ್ ಬೆಲೆ ವಿವರ!


ಸತತ 15ನೇ ದಿನವೂ ಜಿಲ್ಲೆಗಳಲ್ಲಿ ತೈಲ ಬೆಲೆ ಏರಿಕೆ; ಇಲ್ಲಿದೆ ಪೆಟ್ರೋಲ್-ಡೀಸೆಲ್ ಬೆಲೆ ವಿವರ!

ಬೆಂಗಳೂರು ; ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸತತ 15ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದ್ದರೂ ಸಹ ಜಿಲ್ಲೆಗಳಲ್ಲಿ ತೈಲ ಬೆಲೆಗಳನ್ನು ಏರಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 1 ಲೀಟರ್ ಪೆಟ್ರೋಲ್ ಅನ್ನು 108.08 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 98.89 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಚಿತ್ರದುರ್ಗದಲ್ಲಿ ಪೆಟ್ರೋಲ್ ಇಂದು 35 ಪೈಸೆ ಏರಿಕೆ ಕಂಡಿದ್ದು, ಅತ್ಯಧಿಕ 110.40 ರೂ. ಮಾರಾಟ ಮಾಡಲಾಗುತ್ತಿದೆ. 100.76 ರೂ ಮಾರಾಟವಾಗುವ ಮೂಲಕ ಡೀಸೆಲ್ ಬಳ್ಳಾರಿಯಲ್ಲಿ  ಹೊಸ ಇತಿಹಾಸ ನಿರ್ಮಿಸಿದೆ.


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

ಬಾಗಲಕೋಟೆ - 108.71 ರೂ. (34 ಪೈಸೆ ಇಳಿಕೆ)

ಬೆಂಗಳೂರು - 108.08 ರೂ. (00)

ಬೆಂಗಳೂರು ಗ್ರಾಮಾಂತರ -108.24ರೂ. (10 ಪೈಸೆ ಏರಿಕೆ)

ಬೆಳಗಾವಿ - 107.83 ರೂ. (62 ಪೈಸೆ ಇಳಿಕೆ)

ಬಳ್ಳಾರಿ - 110.10 ರೂ. (17 ಪೈಸೆ ಇಳಿಕೆ )

ಬೀದರ್ - 108.96 ರೂ. (08 ಪೈಸೆ ಇಳಿಕೆ)

ಬಿಜಾಪುರ - 107.79 ರೂ. (21 ಪೈಸೆ ಇಳಿಕೆ)

ಚಾಮರಾಜನಗರ - 108.16 ರೂ. (61 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ - 108.37 ರೂ. (26 ಪೈಸೆ ಏರಿಕೆ)

ಚಿಕ್ಕಮಗಳೂರು - 108.50ರೂ. (98 ಪೈಸೆ ಇಳಿಕೆ)

ಚಿತ್ರದುರ್ಗ - 110.40 ರೂ. (35 ಪೈಸೆ ಏರಿಕೆ)

ದಕ್ಷಿಣ ಕನ್ನಡ - 107.58 ರೂ. (36 ಪೈಸೆ ಇಳಿಕೆ)

ದಾವಣಗೆರೆ - 109.65 ರೂ. (41 ಪೈಸೆ ಏರಿಕೆ)

ಧಾರವಾಡ - 107.96 ರೂ. (01 ಪೈಸೆ ಏರಿಕೆ)

ಗದಗ - 108.83 ರೂ. (45 ಪೈಸೆ ಏರಿಕೆ)

ಗುಲಬುರ್ಗ - 107.88 ರೂ. (34 ಪೈಸೆ ಇಳಿಕೆ)

ಹಾಸನ - 107.99 ರೂ. (16 ಪೈಸೆ ಏರಿಕೆ)

ಹಾವೇರಿ - 108.80 ರೂ. (07 ಪೈಸೆ ಏರಿಕೆ)

ಕೊಡಗು - 109.32 ರೂ. (16 ಪೈಸೆ ಇಳಿಕೆ)

ಕೋಲಾರ - 107.94 ರೂ. (27 ಪೈಸೆ ಇಳಿಕೆ)

ಕೊಪ್ಪಳ- 108.98 ರೂ. (17 ಪೈಸೆ ಇಳಿಕೆ)

ಮಂಡ್ಯ - 108.07 ರೂ. (38 ಪೈಸೆ ಏರಿಕೆ)

ಮೈಸೂರು - 107.82 ರೂ. (05 ಪೈಸೆ ಇಳಿಕೆ )

ರಾಯಚೂರು - 107.90 ರೂ. (00)

ರಾಮನಗರ - 108.20 ರೂ. (24 ಪೈಸೆ ಇಳಿಕೆ)

ಶಿವಮೊಗ್ಗ - 109.55 ರೂ. (46 ಪೈಸೆ ಏರಿಕೆ)

ತುಮಕೂರು - 108.67 ರೂ. (32 ಪೈಸೆ ಇಳಿಕೆ)

ಉಡುಪಿ - 107.94 ರೂ. (27 ಪೈಸೆ ಏರಿಕೆ)

ಉತ್ತರಕನ್ನಡ - 110 ರೂ . (82 ಪೈಸೆ ಏರಿಕೆ)

ಯಾದಗಿರಿ - 108.89 ರೂ. (47 ಪೈಸೆ ಏರಿಕೆ ).

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ - 99.49

ಬೆಂಗಳೂರು - 98.89

ಬೆಂಗಳೂರು ಗ್ರಾಮಾಂತರ : 99.04

ಬೆಳಗಾವಿ - 98.69

ಬಳ್ಳಾರಿ - 100.76

ಬೀದರ್ -99.72

ಬಿಜಾಪುರ - 98.65

ಚಾಮರಾಜನಗರ - 98.96

ಚಿಕ್ಕಬಳ್ಳಾಪುರ - 99.16

ಚಿಕ್ಕಮಗಳೂರು - 99.19

ಚಿತ್ರದುರ್ಗ - 100.90

ದಕ್ಷಿಣ ಕನ್ನಡ - 98.40

ದಾವಣಗೆರೆ -100.21

ಧಾರವಾಡ - 98.81

ಗದಗ - 99.60

ಗುಲಬರ್ಗ - 98.74

ಹಾಸನ - 98.69

ಹಾವೇರಿ - 99.57

ಕೊಡಗು - 99.90

ಕೋಲಾರ - 98.77

ಕೊಪ್ಪಳ- 99.73

ಮಂಡ್ಯ - 98.87

ಮೈಸೂರು -98.65

ರಾಯಚೂರು - 98.77

ರಾಮನಗರ - 99.00

ಶಿವಮೊಗ್ಗ - 100.16

ತುಮಕೂರು -99.31

ಉಡುಪಿ - 98.72

ಉತ್ತರಕನ್ನಡ - 100.60

ಯಾದಗಿರಿ - 99.65

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.02 ರೂ ಇದ್ದರೆ ಡೀಸೆಲ್​ ಬೆಲೆ 96.60 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 109.76 ರೂ ಆಗಿದ್ದರೆ, ಡೀಸೆಲ್​ ಬೆಲೆ 101.24 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 103.84 ರೂ ಮತ್ತು ಡೀಸೆಲ್ 92.12 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ 109.83 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 99.92 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ  ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.



SHARE THIS

Author:

0 التعليقات: