Sunday, 31 October 2021

ಸತತ ಮೂರು ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ:

ಸತತ ಮೂರು ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ:

ಸತತ ಮೂರು ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ:

ನವದೆಹಲಿ: ದೀಪಾವಳಿ ಹಬ್ಬಕ್ಕೆ ಮುನ್ನ ತೈಲ ದರ ಏರಿಕೆ ಕಂಡುಬರುತ್ತಲೇ ಇದೆ. ಕಳೆದ ಮೂರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ಏರಿಕೆಯಾಗುತ್ತಿದ್ದು, ತಿಂಗಳ ಆರಂಭದಲ್ಲಿಯೇ ಗ್ರಾಹಕರ ಜೇಬಿಗೆ ಮತ್ತಷ್ಟು ಭಾರ ಬಿದ್ದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಇಂದಿನ ದರವೆಷ್ಟು?: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ಮತ್ತು ಲೀಟರ್ ಡೀಸೆಲ್ ದರದಲ್ಲಿ ಕ್ರಮವಾಗಿ 35 ಪೈಸೆ ಹೆಚ್ಚಳವಾಗಿದೆ. ಇದರಂತೆ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 109 ರೂಪಾಯಿ 69 ಪೈಸೆಗೆ ಏರಿಕೆಯಾಗಿದ್ದು, ಡೀಸೆಲ್​ ದರ ಸಹ 100ರ ಗಡಿ ತಲುಪಿ 98 ರೂಪಾಯಿ 42 ಪೈಸೆಯಾಗಿದೆ. ಇಂಧನ ದರ ಗರಿಷ್ಠ ಮಟ್ಟ ತಲುಪಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 115 ರೂಪಾಯಿ 50 ಪೈಸೆಯಾಗಿದ್ದು, ಡೀಸೆಲ್ ದರ 106 ರೂಪಾಯಿ 62 ಪೈಸೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 110 ರೂಪಾಯಿ 15 ಪೈಸೆಯಾಗಿದ್ದು, ಡೀಸೆಲ್ ದರ 101 ರೂಪಾಯಿ 56 ಪೈಸೆಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 106 ರೂಪಾಯಿ 35 ಪೈಸೆಯಾಗಿದ್ದು, ಡೀಸೆಲ್ ಬೆಲೆ 102 ರೂಪಾಯಿ 59 ಪೈಸೆಯಾಗಿದೆ.

ಇನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 113 ರೂಪಾಯಿ 50 ಪೈಸೆಯಾಗಿದ್ದು, ಡೀಸೆಲ್ ಬೆಲೆ 104 ರೂಪಾಯಿ 41 ಪೈಸೆಯಾಗಿದೆ.


ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಏಮ್ಸ್ ನಿಂದ ಬಿಡುಗಡೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಏಮ್ಸ್ ನಿಂದ ಬಿಡುಗಡೆ.


ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಏಮ್ಸ್ ನಿಂದ ಬಿಡುಗಡೆ.

ಹೊಸದಿಲ್ಲಿ: ದಿಲ್ಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ (ಏಮ್ಸ್) ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಚಿಕಿತ್ಸೆ ನಂತರ ರವಿವಾರ ಡಿಸ್ಚಾರ್ಜ್ ಆಗಿದ್ದಾರೆ.

ಡಾ.ಸಿಂಗ್ ಅವರು ದಿಲ್ಲಿಯ ಏಮ್ಸ್ ನಿಂದ ಸಂಜೆ 5:20 ಕ್ಕೆ ಡಿಸ್ಚಾರ್ಜ್ ಆದರು. ಅಕ್ಟೋಬರ್ 13 ರಂದು ಅವರನ್ನು ಏಮ್ಸ್‌ಗೆ ದಾಖಲಿಸಲಾಯಿತು ಹಾಗೂ  ಅಂದಿನಿಂದ ವೈದ್ಯರ ಮೇಲ್ವಿಚಾರಣೆಯಲ್ಲಿದ್ದರು.

ಅವರು ನಿಶ್ಶಕ್ತಿಯ ಸಮಸ್ಯೆ ಎದುರಿಸುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ತಿಂಗಳ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಸಿಂಗ್ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು.


ಮದುವೆ ಸಮಾರಂಭದಲ್ಲಿ 13 ಜನರನ್ನು ಕೊಂದ ತಾಲಿಬಾನ್‌!

ಮದುವೆ ಸಮಾರಂಭದಲ್ಲಿ 13 ಜನರನ್ನು ಕೊಂದ ತಾಲಿಬಾನ್‌!


ಮದುವೆ ಸಮಾರಂಭದಲ್ಲಿ 13 ಜನರನ್ನು ಕೊಂದ ತಾಲಿಬಾನ್‌!

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಶನಿವಾರ ವಿವಾಹ ಸಮಾರಂಭವೊಂದರಲ್ಲಿ ಸಂಗೀತ ಹಾಕಿದ್ದಕ್ಕಾಗಿ ತಾಲಿಬಾನ್ ಹದಿಮೂರು ಜನರನ್ನು ಕೊಂದಿದ್ದಾರೆ ಎಂದು ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಟ್ವೀಟ್‌ ಮೂಲಕ ಹೇಳಿದ್ದಾರೆ.

ನಂಗರ್‌ಹಾರ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸಂಗೀತವನ್ನು ನಿಶ್ಯಬ್ದಗೊಳಿಸಲು ತಾಲಿಬಾನ್ ಸೇನಾಪಡೆಗಳು 13 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಖಂಡನೆಯಿಂದ ಮಾತ್ರ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. "25 ವರ್ಷಗಳ ಕಾಲ ಪಾಕ್ ಅವರಿಗೆ ಅಫ್ಘನ್ ಸಂಸ್ಕೃತಿಯನ್ನು ನಾಶಮಾಡಲು ತರಬೇತಿ ನೀಡಿತು ಮತ್ತು ನಮ್ಮ ನೆಲವನ್ನು ನಿಯಂತ್ರಿಸಲು ISI ನೀತಿಗಳಿಗುಣವಾಗಿ ಮತಾಂಧತೆಯನ್ನು ಹೇಳಿಕೊಟ್ಟಿತು. ಅದು ಈಗ ಕೆಲಸ ಮಾಡುತ್ತಿದೆ. ಈ ಆಡಳಿತವು ಹೆಚ್ಚು ಕಾಲ ಉಳಿಯುವುದಿಲ್ಲ ಆದರೆ ದುರದೃಷ್ಟವಶಾತ್, ಅದು ಕೊನೆಗೊಳ್ಳುವ ಕ್ಷಣದವರೆಗೂ, ಆಫ್ಘನ್ನರು ಸಂಕಷ್ಟ ಅನುಭವಿಸಬೇಕು" ಎಂದು ಅಮ್ರುಲ್ಲಾ ಸಲೇಹ್ ಹೇಳಿದ್ದಾರೆ.

ತಾಲಿಬಾನ್‌ ಮತ್ತು ಸಂಗೀತ!

ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿತ್ತು. ಅಫ್ಘಾನಿಸ್ತಾನದ ಮೇಲೆ ತಾಲಿಬಾನ ಹಿಡಿತ ಸಾಧಿಸಿದ ನಂತರ ದೇಶದಲ್ಲಿ ಕಾನೂನು ಸುವವ್ಯಸ್ಥೆ ಹದಗೆಟ್ಟಿದೆ. ತಾಲಿಬಾನ ಹೊರಡಿಸಿರುವ ನೀತಿ-ನಿಯಮಾವಳಿಗಳು ಜನರನ್ನು ಸಂಕಷ್ಟಕ್ಕೀಡು ಮಾಡಿವೆ. ತಾಲಿಬಾನ್‌ ಅಧಿಕಾರಕ್ಕೆ ಬಂದಾಗಿನಿಂದಲೂ ಸಂಗೀತ ಕಾರ್ಯಕ್ರಮ ಮತ್ತು ಸಂಗೀತಗಾರರ ಮೇಲೆ ದಾಳಿ ನಡೆಸಿದಂತಹ ಹಲವಾರು ಘಟನೆಗಳು ನಡೆದಿವೆ.

ಇಸ್ಲಾಂನಲ್ಲಿ ಸಂಗೀತವನ್ನು ನಿಷೇಧ!

ಆಗಸ್ಟ್ ಅಂತ್ಯದ ವೇಳೆಗೆ, ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ತಾಲಿಬಾನ್ ದೂರದರ್ಶನ ಮತ್ತು ರೇಡಿಯೊ ಚಾನೆಲ್‌ಗಳಲ್ಲಿ ಸಂಗೀತ ಮತ್ತು ಮಹಿಳೆಯರ ಧ್ವನಿ ಪ್ರಸಾರ ಮಾಡುವುದನ್ನು ನಿಷೇಧಿಸಿತ್ತು. ಸೆಪ್ಟೆಂಬರ್ 4 ರಂದ ಆಫ್ಘಾನಿಸ್ತಾನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಅನ್ನು ಮುಚ್ಚಿದ್ದರು. ಅಫ್ಘಾನಿಸ್ತಾನದ ಜಾನಪದ ಗಾಯಕ ಫವಾದ್ ಅಂದ್ರಾಬಿ ಅವರನ್ನು ಅಗಸ್ಟ್ ಕೊನೆಯ ವಾರದಲ್ಲಿ ತಾಲಿಬಾನ್ ಹೋರಾಟಗಾರರು ಅಂಡರಾಬಿ ಕಣಿವೆಯಲ್ಲಿ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಕೂಡ ವರದಿಯಾಗಿತ್ತು.

ಸೆಪ್ಟೆಂಬರ್ ಮೊದಲ ವಾರದಲ್ಲಿ, ಅಫ್ಘಾನಿಸ್ತಾನದ ಕಾಬೂಲ್‌ನ ಸ್ಟೇಟ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಎರಡು ಗ್ರ್ಯಾಂಡ್ ಪಿಯಾನೋಗಳು ಮತ್ತು ಇತರ ಸಂಗೀತ ಉಪಕರಣಗಳು ತಾಲಿಬಾನಿಗಳು ನಾಶಪಡಿಸಿದ್ದರು. ಆಗಸ್ಟ್‌ನಲ್ಲಿ ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ , "ಇಸ್ಲಾಂನಲ್ಲಿ ಸಂಗೀತವನ್ನು ನಿಷೇಧಿಸಲಾಗಿದೆ. ಆದರೆ ನಾವು ಜನರ ಮೇಲೆ ಒತ್ತಡ ಹೇರುವ ಬದಲು ಅಂತಹ ಕೆಲಸಗಳನ್ನು ಮಾಡದಂತೆ ಮನವೊಲಿಸಬಹುದು ಎಂದು ನಾವು ಭಾವಿಸುತ್ತೇವೆ." ಎಂದು ಹೇಳಿದ್ದರು.

ಆತ್ಮಾಹುತಿ ಬಾಂಬರ್‌ಗಳಿಗೆ ತಾಲಿಬಾನ್‌ 'ಹುತಾತ್ಮ' ಪಟ್ಟ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ರಚನೆಗೂ ಮುನ್ನ ಅಮೆರಿಕ ಮತ್ತು ಆಫ್ಘನ್‌ ಸೇನೆ ಮೇಲೆ ಆತ್ಮಾಹುತಿ ದಾಳಿ ನಡೆಸಿದವರನ್ನು ತಾಲಿಬಾನ್‌ ಸರ್ಕಾರ 'ಹುತಾತ್ಮರು' ಎಂದು ಘೋಷಣೆ ಮಾಡಿದೆ. ಅಲ್ಲದೆ ಆತ್ಮಾಹುತಿ ದಾಳಿ ಎಸಗಿದ ಕುಟುಂಬ ಸದಸ್ಯರಿಗೆ ಜಮೀನು, ನಿವೇಶನ, ಬಟ್ಟೆ-ಬರೆ ಹಣಕಾಸು ನೆರವು ಸೇರಿದಂತೆ ಇನ್ನಿತರ ನೆರವು ನೀಡುವುದಾಗಿ ತಾಲಿಬಾನ್‌ ಸರ್ಕಾರ ಭರವಸೆ ನೀಡಿದೆ.

ಅಮೆರಿಕ ಮತ್ತು ಆಫ್ಘನ್‌ ಸೈನಿಕರ ಮೇಲೆ ಆತ್ಮಾಹುತಿ ದಾಳಿ ಮುಖಾಂತರ ತಾಲಿಬಾನ್‌ ಸರ್ಕಾರ ರಚನೆಗೆ ದಾರಿಮಾಡಿಕೊಟ್ಟಬಾಂಬರ್‌ಗಳ ಕುಟುಂಬಗಳನ್ನು ಹಂಗಾಮಿ ಗೃಹ ಸಚಿವನೂ ಆದ ಕುಖ್ಯಾತ ಭಯೋತ್ಪಾದಕ ಸಿರಾಜುದ್ದೀನ್‌ ಹಕ್ಕಾನಿ ಹೋಟೆಲ್‌ವೊಂದರಲ್ಲಿ ಭೇಟಿ ಮಾಡಿದ. ಈ ವೇಳೆ ಮಾತನಾಡಿದ ಹಕ್ಕಾನಿ, 'ಆತ್ಮಾಹುತಿ ದಾಳಿಕೋರರು ಹುತಾತ್ಮರು' ಎಂದು ಸಂಬೋಧಿಸಿದ. ಅಲ್ಲದೆ ಅವರು ಇಸ್ಲಾಂ ಮತ್ತು ದೇಶದ ನಿಜವಾದ ಹೀರೋಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.


ವಿಶ್ವಕಪ್:ನ್ಯೂಝಿಲ್ಯಾಂಡ್‌ಗೆ ಶರಣಾದ ಭಾರತ

ವಿಶ್ವಕಪ್:ನ್ಯೂಝಿಲ್ಯಾಂಡ್‌ಗೆ ಶರಣಾದ ಭಾರತ


ವಿಶ್ವಕಪ್:ನ್ಯೂಝಿಲ್ಯಾಂಡ್‌ಗೆ ಶರಣಾದ ಭಾರತ

ದುಬೈ, ಅ.31: ಟ್ವೆಂಟಿ-20 ವಿಶ್ವಕಪ್‌ನ ಸೂಪರ್-12ರ ಸುತ್ತಿನಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಸೋಲುಂಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋತಿದ್ದ ಕೊಹ್ಲಿ ಬಳಗ ಇದೀಗ ಸತತ ಎರಡನೇ ಸೋಲು ಕಂಡಿದೆ.

ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು 7 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ಗೆಲ್ಲಲು ಸುಲಭ ಸವಾಲು ಪಡೆದ ನ್ಯೂಝಿಲ್ಯಾಂಡ್ 14.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.

ಆರಂಭಿಕ ಬ್ಯಾಟ್ಸ್‌ಮನ್ ಡರಿಲ್ ಮಿಚೆಲ್(49, 35 ಎಸೆತ, 4 ಬೌಂ,3 ಸಿ. ), ನಾಯಕ ಕೇನ್ ವಿಲಿಯಮ್ಸನ್(ಔಟಾಗದೆ 33, 31 ಎಸೆತ, 3 ಬೌಂ.) ಹಾಗೂ ಮಾರ್ಟಿನ್ ಗಪ್ಟಿಲ್(20,17 ಎಸೆತ, 3 ಬೌಂ.) ಗೆಲುವಿಗೆ ನೆರವಾದರು. ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ(2-19) ಎರಡು ವಿಕೆಟ್‌ಗಳನ್ನು ಪಡೆದರು.


ವಿಶ್ವಕಪ್: ಭಾರತ ವಿರುದ್ಧ ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಮೊದಲು ಫೀಲ್ಡಿಂಗ್ ಆಯ್ಕೆ

ವಿಶ್ವಕಪ್: ಭಾರತ ವಿರುದ್ಧ ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಮೊದಲು ಫೀಲ್ಡಿಂಗ್ ಆಯ್ಕೆ

 ವಿಶ್ವಕಪ್: ಭಾರತ ವಿರುದ್ಧ ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಮೊದಲು ಫೀಲ್ಡಿಂಗ್ ಆಯ್ಕೆ


 ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಸೂಪರ್-12ರ ಪಂದ್ಯದಲ್ಲಿ ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

ರವಿವಾರದ ಪಂದ್ಯದಲ್ಲಿ ಭಾರತವು ಆಡುವ 11ರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ. ಸೂರ್ಯಕುಮಾರ್ ಯಾದವ್ ಹಾಗೂ ಭುವನೇಶ್ವರ ಕುಮಾರ್ ಬದಲಿಗೆ ಇಶಾನ್ ಕಿಶನ್ ಹಾಗೂ ಶಾರ್ದೂಲ್ ಠಾಕೂರ್‌ಗೆ ಅವಕಾಶ ನೀಡಲಾಗಿದೆ.

ನ್ಯೂಝಿಲ್ಯಾಂಡ್ ಆಡುವ ಬಳಗದಲ್ಲಿ ಒಂದು ಬದಲಾವಣೆಯನ್ನಷ್ಟೇ ಮಾಡಿದ್ದು ಟಿಮ್ ಸೆಫರ್ಟ್ ಬದಲಿಗೆ ಆಡಮ್ ಮಿಲ್ನೆ ಅವಕಾಶ ಪಡೆದಿದ್ದಾರೆ.

 ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ಮೂರು ಬಾರಿ ಸಿಮ್‌ ಬದಲಾಯಿಸಿದ್ದೇನೆ: ಕಾಮೆಡಿಯನ್‌ ಮುನವ್ವರ್‌ ಫಾರೂಕಿ

ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ಮೂರು ಬಾರಿ ಸಿಮ್‌ ಬದಲಾಯಿಸಿದ್ದೇನೆ: ಕಾಮೆಡಿಯನ್‌ ಮುನವ್ವರ್‌ ಫಾರೂಕಿ

 ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ಮೂರು ಬಾರಿ ಸಿಮ್‌ ಬದಲಾಯಿಸಿದ್ದೇನೆ: ಕಾಮೆಡಿಯನ್‌ ಮುನವ್ವರ್‌ ಫಾರೂಕಿ

ಮುಂಬೈ: "ದೇಶದ ಜನರು ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸಬಹುದಾದರೆ, ಏನನ್ನು ವೀಕ್ಷಿಸಬೇಕು ಎಂಬುವುದನ್ನೂ ಅವರು ನಿರ್ಧರಿಸಬಹುದು" ಎಂದು ಸ್ಟ್ಯಾಂಡ್‌ ಅಪ್‌ ಕಾಮೆಡಿಯನ್‌ ಮುನವ್ವರ್‌ ಫಾರೂಕಿ ಹೇಳಿಕೆ ನೀಡಿದ್ದಾರೆ. ಮುಂಬೈನಲ್ಲಿ ನಡೆಯಲಿದ್ದ ಮೂರು ಕಾಮಿಡಿ ಶೋಗಳನ್ನು ಬಜರಂಗದಳದ ಬೆದರಿಕೆ ಕರೆಗಳ ಬಳಿಕ ರದ್ದುಗೊಳಿಸಿದ ಕುರಿತು ಮುನವ್ವರ್‌ ಫಾರೂಕಿ ndtv.com  ಜೊತೆ ಮಾತನಾಡಿದ್ದಾರೆ.

"ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ್ದಾರೆ" ಎಂಬ ಆರೋಪದ ಮೇರೆಗೆ ವರ್ಷಾರಂಭದಲ್ಲಿ ಮುನವ್ವರ್‌ ಫಾರೂಕಿ ಒಂದು ತಿಂಗಳ ಕಾಲ ಜೈಲಿನಲ್ಲಿದ್ದರು. ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕವೂ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ‌ ಎಂದು ಅವರು ಹೇಳಿದ್ದಾರೆ.

"ನನಗೆ ದಿನಂಪ್ರತಿ 50 ಬೆದರಿಕೆ ಕರೆಗಳು ಬರುತ್ತವೆ. ನಾನು ನನ್ನ ಸಿಮ್‌ ಕಾರ್ಡ್‌ ಅನ್ನು ಮೂರು ಬಾರಿ ಬದಲಾಯಿಸಬೇಕಾಗಿತ್ತು. ನನ್ನ ನಂಬರ್‌ ಸೋರಿಕೆಯಾದಾಗ ಜನರು ಕರೆಮಾಡಿ ನಿಂದಿಸುತ್ತಾರೆ" ಎಂದು ಅವರು ಹೇಳಿದ್ದಾರೆ.

ಹಿಂದುತ್ವ ಸಂಘಟನೆಯ ಸದಸ್ಯರು ಕಾರ್ಯಕ್ರಮ ನಡೆಯುವ ಸ್ಥಳವನ್ನು ಸುಟ್ಟು ಹಾಕುತ್ತೇವೆಂದು ಬೆದರಿಕೆಯೊಡ್ಡಿದ ಬಳಿಕ ಅವರ ಮುಂಬೈ ಪ್ರದರ್ಶನಗಳನ್ನು ರದ್ದುಪಡಿಸಲಾಗಿತ್ತು. ಈ ಕುರಿತು ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದ ಫಾರೂಕಿ, "ನನಗೆ ನನ್ನ ಪ್ರೇಕ್ಷಕರ ಸುರಕ್ಷತೆ ಮುಖ್ಯ" ಎಂದು ಟ್ವೀಟ್‌ ಮಾಡಿದ್ದರು.

"ಇಂತಹಾ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ನಮ್ಮ ದೇಶದಲ್ಲಿ ಹಲವಾರು ತಪ್ಪುಗಳು ನಡೆಯುತ್ತಿವೆ. ಕಾರ್ಯಕ್ರಮ ರದ್ದತಿಯ ಹಿಂದಿನ ಗಂಭೀರ ವಿಚಾರವೆಂದರೆ 1,500 ಮಂದಿ ಒಂದು ತಿಂಗಳ ಹಿಂದೆಯೇ ಟಿಕೆಟ್‌ ಖರೀದಿಸಿದ್ದರು. ಅವರ ಕುರಿತು ನನಗೆ ಬೇಸರವಾಗುತ್ತಿದೆ. ಈ ದೇಶದಲ್ಲಿ ಹಲವಾರು ಮಂದಿ ಈ ದುಃಖಕರ ನೈಜತೆಯೊಂದಿಗೆ ಬದುಕುತ್ತಿದ್ದಾರೆ. ಕೆಲವು ಸಂದರ್ಭದದಲ್ಲಿ ನಾನು ತಪ್ಪು ಮಾಡಿದ್ದೇನೆಂದು ಭಾಸವಾಗುತ್ತದೆ. ಆದರೆ ಕೆಲ ಜನರು ಇದರಿಂದ ರಾಜಕೀಯ ಲಾಭ ಪಡೆಯುತ್ತಾರೆ ಎನ್ನುವುದು ಬಳಿಕ ಅರ್ಥವಾಯಿತು. ಎಲ್ಲರನ್ನೂ ಗುರಿಪಡಿಸಲಾಗುತ್ತದೆ. ನನ್ನ ವಿಚಾರದಲ್ಲಿ ಅದು ಧರ್ಮದ ಆಧಾರದಲ್ಲಿದೆ ಎನ್ನುವುದು ನನ್ನನ್ನು ಭಯಪಡಿಸುತ್ತದೆ" ಎಂದು ಅವರು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

 ಸುಮಾರು 20 ಲಕ್ಷ ಜನರಿಂದ ಪುನೀತ್ ಅಂತಿಮ ದರ್ಶನ: ಗೃಹ ಸಚಿವ ಆರಗ ಜ್ಞಾನೇಂದ್ರ

ಸುಮಾರು 20 ಲಕ್ಷ ಜನರಿಂದ ಪುನೀತ್ ಅಂತಿಮ ದರ್ಶನ: ಗೃಹ ಸಚಿವ ಆರಗ ಜ್ಞಾನೇಂದ್ರ


 ಸುಮಾರು 20 ಲಕ್ಷ ಜನರಿಂದ ಪುನೀತ್ ಅಂತಿಮ ದರ್ಶನ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಪುನೀತ್ ರಾಜ್‍ಕುಮಾರ್ ನಿಧನದ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 20 ಲಕ್ಷ ಜನರು ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇದೆಲ್ಲವನ್ನೂ ನಿಯಂತ್ರಣ ಮಾಡುವುದರಲ್ಲಿ ಪೊಲೀಸರ ಶ್ರಮ ಬಹಳ ಇದೆ ಎಂದರು.

ಬೆಂಗಳೂರು ಮಾತ್ರವಲ್ಲದೆ, ಹೊರ ಜಿಲ್ಲೆಗಳಿಂದ ಒಂದೂವರೆ ಸಾವಿರ ಪೊಲೀಸರು, ಸೆಂಟ್ರಲ್ ಫೋರ್ಸ್ ಜೊತೆಗೆ 50 ಕೆಎಸ್‍ಆರ್‍ಪಿ ತುಕಡಿ ಸೇರಿದಂತೆ ಎಲ್ಲರೂ ನಿದ್ದೆ ಬಿಟ್ಟು ಶ್ರಮಪಟ್ಟಿದ್ದಾರೆ. ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.

ಪುನೀತ್ ಅಭಿಮಾನಿಗಳು ಶಾಂತಿಯಿಂದ, ಶಿಸ್ತಿನಿಂದ ಸರಕಾರಕ್ಕೆ ಸಹಕಾರ ನೀಡಿದ್ದಾರೆ. ರಾಜ್‍ಕುಮಾರ್ ಅವರ ಕುಟುಂಬ ಸರಕಾರಕ್ಕೆ ಸಹಕಾರ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಗಾಯಾಲು ಪೇದೆಯ ಆರೋಗ್ಯ ವಿಚಾರಣೆ: ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ವೇಳೆ ಕರ್ತವ್ಯ ನಿರ್ವಹಿಸುವ ವೇಳೆ ಜನರ ನೂಕು ನುಗ್ಗಲಿನಲ್ಲಿ ಕೆಳಗೆ ಬಿದ್ದು ಕಾಲು ಮುರಿತಕ್ಕೆ ಒಳಗಾದ, ಮಡಿವಾಳ ಪೊಲೀಸ್ ಠಾಣೆಯ ಪೇದೆ ಗಣೇಶ್ ನಾಯಕ್ ಆರೋಗ್ಯವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಚಾರಿಸಿದರು.

 ಬಿಜೆಪಿ ತೊರೆದು ಟಿಎಂಸಿಗೆ ವಾಪಸಾದ ರಾಜೀಬ್ ಬ್ಯಾನರ್ಜಿ

ಬಿಜೆಪಿ ತೊರೆದು ಟಿಎಂಸಿಗೆ ವಾಪಸಾದ ರಾಜೀಬ್ ಬ್ಯಾನರ್ಜಿ


 ಬಿಜೆಪಿ ತೊರೆದು ಟಿಎಂಸಿಗೆ ವಾಪಸಾದ ರಾಜೀಬ್ ಬ್ಯಾನರ್ಜಿ

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ನಾಯಕ ರಾಜೀಬ್ ಬ್ಯಾನರ್ಜಿ ಅವರು ರವಿವಾರ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದಾರೆ.

ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ರ್ಯಾಲಿ ನಡೆಸುತ್ತಿರುವ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ  ರಾಜೀಬ್ ಬ್ಯಾನರ್ಜಿ ‘ಘರ್ ವಾಪ್ಸಿ’ ನಡೆಯಿತು.

ರಾಜೀಬ್ ಬ್ಯಾನರ್ಜಿಯವರ ವಾಪಸಾತಿಗೆ ಅಗರ್ತಲಾವನ್ನು  ಆಯ್ಕೆ ಮಾಡಿರುವ ತೃಣಮೂಲ ಕಾಂಗ್ರೆಸ್, ಬಿಜೆಪಿ ಭದ್ರಕೋಟೆ ಗೋವಾ ಅಥವಾ ತ್ರಿಪುರಾವು ಟಿಎಂಸಿ ದಾಳಿಯಿಂದ ಸುರಕ್ಷಿತವಾಗಿಲ್ಲ ಎಂದು ಸೂಚಿಸುವ ಉದ್ದೇಶಪೂರ್ವಕ ಕ್ರಮವಾಗಿದೆ ಎನ್ನಲಾಗಿದೆ.

ಬಿಜೆಪಿ ಸೇರುವ ಮೂಲಕ ತಾನು ತಪ್ಪು ಮಾಡಿದ್ದೇನೆ ಎಂದು ಹೇಳಿರುವ ಈ ಹಿಂದೆ ಮಮತಾ ಬ್ಯಾನರ್ಜಿ ಸರಕಾರದಲ್ಲಿ ಸಚಿವರಾಗಿದ್ದ ರಾಜೀಬ್ ಬ್ಯಾನರ್ಜಿ, "ನನಗೆ ಮತ್ತೆ ಸೇರ್ಪಡೆಗೊಳ್ಳಲು ಅವಕಾಶ ನೀಡಿದ ಅಭಿಷೇಕ್ ಬ್ಯಾನರ್ಜಿ ಹಾಗೂ  ಮಮತಾ ಬ್ಯಾನರ್ಜಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಜೀಬ್ ಬ್ಯಾನರ್ಜಿ "ಬಿಜೆಪಿ ಸೇರುವ ಮೊದಲು ಉದ್ಯೋಗ ಮತ್ತು ಕೃಷಿಯಲ್ಲಿ ಹಲವಾರು ಭರವಸೆಗಳನ್ನು ನೀಡಲಾಗಿತ್ತು. ಅದು ಈಡೇರಲಿಲ್ಲ. ಮತ ಗಳಿಸುವುದು ಹಾಗೂ  ಧಾರ್ಮಿಕ ರಾಜಕಾರಣ ಮಾಡುವುದು ಬಿಜೆಪಿಯ ಅಜೆಂಡಾ'' ಎಂದು ಅವರು ಆರೋಪಿಸಿದ್ದಾರೆ.

 ಗೌರಿ ಲಂಕೇಶ್ ಕೊಲೆ ಪ್ರಕರಣ: 18 ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿದ ಬೆಂಗಳೂರಿನ ನ್ಯಾಯಾಲಯ

ಗೌರಿ ಲಂಕೇಶ್ ಕೊಲೆ ಪ್ರಕರಣ: 18 ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿದ ಬೆಂಗಳೂರಿನ ನ್ಯಾಯಾಲಯ


 ಗೌರಿ ಲಂಕೇಶ್ ಕೊಲೆ ಪ್ರಕರಣ: 18 ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿದ ಬೆಂಗಳೂರಿನ ನ್ಯಾಯಾಲಯ

ಬೆಂಗಳೂರು: ಬೆಂಗಳೂರಿನ ವಿಶೇಷ ನ್ಯಾಯಾಲಯವು ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ 18 ಆರೋಪಿಗಳ ವಿರುದ್ಧ ಶನಿವಾರ ಆರೋಪಗಳನ್ನು ರೂಪಿಸಿದೆ.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಲಾಪದಲ್ಲಿ ಆರೋಪಿಗಳಿಗೆ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಆರೋಪಗಳನ್ನು ಓದಿ ಹೇಳಲಾಗಿತ್ತು.

ಅಮೋಲ್ ಕಾಳೆ, ಪರಶುರಾಮ್ ಅಶೋಕ ವಾಘ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ರಾಮಚಂದ್ರ ಬದ್ದಿ, ಅಮಿತ್ ದಿಗ್ವೇಕರ್,ಭಾರತ್ ಕುರಣೆ,ಸುರೇಶ ಎಚ್.ಎಲ್.ಅಲಿಯಾಸ್ ಟೀಚರ್,ರಾಜೇಶ್ ಡಿ.ಬಂಗೇರಾ ಅಲಿಯಾಸ್ ಸರ್, ಸುಧನ್ವ ಗೊಂದಲೇಕರ್ ಅಲಿಯಾಸ್ ಪಾಂಡೆಜಿ ಅಲಿಯಾಸ್ ಓಂಡಿ ಅಲಿಯಾಸ್ ಗುಜ್ಜರ್ ಅಲಿಯಾಸ್ ಮಹೇಶ್ ಪಾಟೀಲ್, ಶರದ್ ಅಲಿಯಾಸ್ ಶರದ್ ಭಾವುಸಾಹಿಬ್ ಕಲಾಸ್ಕರ್ ಅಲಿಯಾಸ್ ಛೋಟು,ಎನ್.ಮೋಹನ ನಾಯಕ್ ಅಲಿಯಾಸ್ ಸಂಪಂಜೆ,ವಾಸುದೇವ ಭಗವಾನ್ ಸೂರ್ಯವಂಶಿ ಅಲಿಯಾಸ್ ವಾಸು ಅಲಿಯಾಸ್ ಮೆಕ್ಯಾನಿಕ್,ಸುಜಿತ್ ಕುಮಾರ್ ಅಲಿಯಾಸ್ ಸುಜಿತ್ ಎಸ್.ಆರ್.ಅಲಿಯಾಸ್ ಸಂಜಯ ಅಲಿಯಾಸ್  ಮಂಜುನಾಥ,ಮನೋಹರ ದುಂಡೆಪ್ಪಾ ಯಾದೆವ್ ಅಲಿಯಾಸ್ ಮನೋಹರ ಯಾದೆವ್ ಅಲಿಯಾಸ್ ಮನೋಜ,ವಿಕಾಸ ಪಾಟೀಲ ಅಲಿಯಾಸ್ ದಾದಾ ಅಲಿಯಾಸ್ ನಿಹಾಲ್,ಶ್ರೀಕಾಂತ ಜಗನ್ನಾಥ್ ಪಾಂಗರಕರ್ ಅಲಿಯಾಸ್ ಪ್ರಾಜೀ,ಕೆ,ಟಿ.ನವೀನ್ ಕುಮಾರ ಅಲಿಯಾಸ್ ನವೀನ್ ಮತ್ತು ಋಷಿಕೇಶ ದೇವಾಡಕರ್ ಅಲಿಯಾಸ್ ಮುರಳಿ ಅಲಿಯಾಸ್ ಶಿವಾ ಅವರ ವಿರುದ್ಧ ಐಪಿಸಿ, ಶಸ್ತ್ರಾಸ್ತ್ರಗಳ ಕಾಯ್ದೆ ಮತ್ತು ಕರ್ನಾಟಕ ಸಂಘಟಿತ ಅಪರಾಧಗಳ ಕಾಯ್ದೆಯ ವಿವಿಧ ಕಲಮ್ಗಳಡಿ ಆರೋಪಗಳನ್ನು ರೂಪಿಸಲಾಗಿದೆ.

ಆರೋಪಿಗಳು ವಿವಿಧ ಜೈಲುಗಳಲ್ಲಿದ್ದು,ವಿಚಾರಣೆ ಸಂದರ್ಭ ಎಲ್ಲ ಆರೋಪಿಗಳು ಹಾಜರಾಗುತ್ತಿರಲಿಲ್ಲ. ಹೀಗಾಗಿ ಆರೋಪಗಳನ್ನು ರೂಪಿಸುವ ಕಲಾಪ ಮುಂದೂಡಲ್ಪಡುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಎ.ಬಿ.ಕಟ್ಟಿ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಆರೋಪಗಳನ್ನು ರೂಪಿಸಲು ಬಳ್ಳಾರಿ,ತುಮಕೂರು,ಮೈಸೂರು ಮತ್ತು ಶಿವಮೊಗ್ಗ ಜೈಲುಗಳಿಂದ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆತರುವಂತೆ ಸೆ.22ರಂದು ಆದೇಶಿಸಿದ್ದರು.

 ಈ ಕೈದಿಗಳ ಜೊತೆಗೆ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿರುವ ಆರೋಪಿಗಳನ್ನೂ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

2017, ಸೆ.5ರಂದು ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ಅವರ ನಿವಾಸದ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ನ್ಯಾಯಾಲಯವು ಡಿ.8ರಂದು ಪ್ರಕರಣದ ವಿಚಾರಣೆಯ ಆರಂಭಕ್ಕೆ ದಿನಾಂಕವನ್ನು ನಿಗದಿಗೊಳಿಸಲಿದೆ.

 ಕೋವಿಡ್ ಹೆಚ್ಚಳ:ನಿಯಂತ್ರಣ ಕ್ರಮ ಹೆಚ್ಚಿಸುವಂತೆ ಅಸ್ಸಾಂ,ಪಶ್ಚಿಮಬಂಗಾಳಕ್ಕೆ ಕೇಂದ್ರ ಸೂಚನೆ

ಕೋವಿಡ್ ಹೆಚ್ಚಳ:ನಿಯಂತ್ರಣ ಕ್ರಮ ಹೆಚ್ಚಿಸುವಂತೆ ಅಸ್ಸಾಂ,ಪಶ್ಚಿಮಬಂಗಾಳಕ್ಕೆ ಕೇಂದ್ರ ಸೂಚನೆ


 ಕೋವಿಡ್ ಹೆಚ್ಚಳ:ನಿಯಂತ್ರಣ ಕ್ರಮ ಹೆಚ್ಚಿಸುವಂತೆ ಅಸ್ಸಾಂ,ಪಶ್ಚಿಮಬಂಗಾಳಕ್ಕೆ ಕೇಂದ್ರ ಸೂಚನೆ

ಹೊಸದಿಲ್ಲಿ: ಅಕ್ಟೋಬರ್ 20 ಹಾಗೂ ಅ. 26 ರ ನಡುವೆ ಎರಡು ರಾಜ್ಯಗಳಲ್ಲಿ ರೋಗದ ಪ್ರಕರಣಗಳಲ್ಲಿ ವಾರಕ್ಕೆ 41 ಶೇ. ರಷ್ಟು ಏರಿಕೆಯಾಗಿರುವುದರಿಂದ ಕೋವಿಡ್-ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೇಂದ್ರ ಸರಕಾರವು ಅಸ್ಸಾಂ ಹಾಗೂ  ಪಶ್ಚಿಮ ಬಂಗಾಳ ಸರಕಾರಗಳನ್ನು ಶನಿವಾರ ಸೂಚಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್ತಿ ಅಹುಜಾ ಅವರು ಅಕ್ಟೋಬರ್ 25 ರವರೆಗೆ ಕಳೆದ ನಾಲ್ಕು ವಾರಗಳಲ್ಲಿ ಪಾಸಿಟಿವ್ ಪ್ರಕರಣಗಳ ಏರಿಕೆಯ ಆರಂಭಿಕ ಚಿಹ್ನೆಗಳನ್ನು ಬೆಟ್ಟು ಮಾಡಿದ್ದಾರೆ.

 ಪ್ರಜಾಪ್ರಭುತ್ವ ‘ದುರ್ಬಲಗೊಳ್ಳುತ್ತಿರುವ’ ಈ ಸಮಯದಲ್ಲಿ ಸರ್ದಾರ್ ಪಟೇಲ್ ಕೊಡುಗೆ ಸ್ಮರಣೆ ಮುಖ್ಯ:ರಾಹುಲ್ ಗಾಂಧಿ

ಪ್ರಜಾಪ್ರಭುತ್ವ ‘ದುರ್ಬಲಗೊಳ್ಳುತ್ತಿರುವ’ ಈ ಸಮಯದಲ್ಲಿ ಸರ್ದಾರ್ ಪಟೇಲ್ ಕೊಡುಗೆ ಸ್ಮರಣೆ ಮುಖ್ಯ:ರಾಹುಲ್ ಗಾಂಧಿ


 ಪ್ರಜಾಪ್ರಭುತ್ವ ‘ದುರ್ಬಲಗೊಳ್ಳುತ್ತಿರುವ’ ಈ ಸಮಯದಲ್ಲಿ ಸರ್ದಾರ್ ಪಟೇಲ್ ಕೊಡುಗೆ ಸ್ಮರಣೆ ಮುಖ್ಯ: ರಾಹುಲ್ ಗಾಂಧಿ

ಹೊಸದಿಲ್ಲಿ: ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಕಾಂಗ್ರೆಸ್ ರವಿವಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳು ‘ದುರ್ಬಲಗೊಳ್ಳುತ್ತಿರುವ’ ಈ ಸಮಯದಲ್ಲಿ  ಅವರ ಕೊಡುಗೆಯನ್ನು ನೆನಪಿಸಿಕೊಳ್ಳುವುದು ಮುಖ್ಯ ಎಂದು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪಟೇಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರೈತರ ಹೋರಾಟಕ್ಕೆ ಪಟೇಲ್ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಪಟೇಲ್ ಅವರ ಹೋರಾಟವು "ದಬ್ಬಾಳಿಕೆ ಎದುರಿಸುತ್ತಿರುವ ರೈತರ ಪರ ನ್ಯಾಯಕ್ಕಾಗಿ ಹೋರಾಟದಲ್ಲಿ ಬಂಡೆಯಂತೆ ನಿಲ್ಲಲು ನಮಗೆ ಸ್ಫೂರ್ತಿ ನೀಡುತ್ತದೆ" ಎಂದು ಹೇಳಿದರು.

"ಇಂದು, ನಮ್ಮ ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳು ದುರ್ಬಲಗೊಳ್ಳುತ್ತಿರುವಾಗ, ನಾವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಬೇಕಾಗಿದೆ. ಈ ಸ್ತಂಬಗಳನ್ನು ನಿರ್ಮಿಸಿದ ಕಾಂಗ್ರೆಸ್ ನಾಯಕರಲ್ಲಿ ಅವರು ಪ್ರಮುಖ ಧ್ವನಿಯಾಗಿದ್ದರು" ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಭುತ್ವವನ್ನು ರಕ್ಷಿಸುವುದೇ ಸರ್ದಾರ್ ಪಟೇಲ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ರಾಹುಲ್ ಹೇಳಿದರು.

"ಉಕ್ಕಿನ ಮನುಷ್ಯ" ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಬಾರ್ಡೋಲಿ ಸತ್ಯಾಗ್ರಹದಲ್ಲಿ ರೈತರ ಹಕ್ಕುಗಳು ಮತ್ತು ಸ್ವಾಭಿಮಾನದ ಧ್ವನಿಯನ್ನು ಎತ್ತಿದ್ದರು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

 "ಭಾರತವನ್ನು ಒಗ್ಗೂಡಿಸುವ ಈ ಹೋರಾಟದಲ್ಲಿ; ದ್ವೇಷದ ಮೇಲೆ ಪ್ರೀತಿಗೆ ಜಯವನ್ನು ಖಚಿತಪಡಿಸುವ ಈ ಹೋರಾಟದಲ್ಲಿ; ನಮ್ಮ ರೈತರು, ನಮ್ಮ ಜನರು, ನಮ್ಮ ರಾಷ್ಟ್ರವನ್ನು ರಕ್ಷಿಸುವ ಈ ಹೋರಾಟದಲ್ಲಿ ನಾವು ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಇಂದು ಮತ್ತು ಪ್ರತಿದಿನ ಸ್ಮರಿಸುತ್ತೇವೆ" ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ತಿಳಿಸಿದೆ.

 ಸತತ ಐದನೇ ದಿನವೂ ದೇಶಾದ್ಯಂತ ಇಂಧನ ದರ ಏರಿಕೆ

ಸತತ ಐದನೇ ದಿನವೂ ದೇಶಾದ್ಯಂತ ಇಂಧನ ದರ ಏರಿಕೆ


 ಸತತ ಐದನೇ ದಿನವೂ ದೇಶಾದ್ಯಂತ ಇಂಧನ ದರ ಏರಿಕೆ

ಹೊಸದಿಲ್ಲಿ: ರವಿವಾರ ಸತತ ಐದನೇ ದಿನವೂ ದೇಶಾದ್ಯಂತ ಇಂಧನ ದರ ಏರಿಕೆಯಾಗಿರುವುದರಿಂದ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 115 ರೂಪಾಯಿ ದಾಟಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಪೆಟ್ರೋಲ್ ಹಾಗೂ  ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ 34 ಪೈಸೆ ಹಾಗೂ  37 ಪೈಸೆ ಏರಿಕೆಯಾಗಿದೆ.

ಮುಂಬೈನಲ್ಲಿ ರವಿವಾರ ಪೆಟ್ರೋಲ್ ದರ ಲೀಟರ್‌ಗೆ 115.15 ರೂ., ಡೀಸೆಲ್ ಬೆಲೆ ಲೀಟರ್‌ಗೆ 106.23 ರೂ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ, ಪೆಟ್ರೋಲ್ ಬೆಲೆ ಲೀಟರ್‌ಗೆ ರೂ 109.34 ರ ಗರಿಷ್ಠ ಮಟ್ಟಕ್ಕೆ ಏರಿದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ 98.07 ರಷ್ಟಿದೆ.

ಇಂಧನ ಉತ್ಪನ್ನಗಳು ರಾಜಸ್ಥಾನದ ಗಂಗಾನಗರ ಪಟ್ಟಣದಲ್ಲಿ ಅತ್ಯಂತ ದುಬಾರಿಯಾಗಿದೆ.  ಅಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 121.62 ರೂ ಹಾಗೂ  ಡೀಸೆಲ್ ಬೆಲೆ ಲೀಟರ್‌ಗೆ 112.52 ರೂ ತಲುಪಿದೆ ಎಂದು ಮಿಂಟ್ ವರದಿ ಮಾಡಿದೆ.

ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿ ಗಡಿ ದಾಟಿದೆ.

Saturday, 30 October 2021

ನಮ್ಮ ಸರ್ಕಾರವನ್ನು ಗುರುತಿಸದಿದ್ದರೆ ಇಡೀ ವಿಶ್ವಕ್ಕೆ ತೊಂದರೆ ಎಂದು ಧಮ್ಕಿ ಹಾಕಿದ ತಾಲಿಬಾನ್

ನಮ್ಮ ಸರ್ಕಾರವನ್ನು ಗುರುತಿಸದಿದ್ದರೆ ಇಡೀ ವಿಶ್ವಕ್ಕೆ ತೊಂದರೆ ಎಂದು ಧಮ್ಕಿ ಹಾಕಿದ ತಾಲಿಬಾನ್

ನಮ್ಮ ಸರ್ಕಾರವನ್ನು ಗುರುತಿಸದಿದ್ದರೆ ಇಡೀ ವಿಶ್ವಕ್ಕೆ ತೊಂದರೆ ಎಂದು ಧಮ್ಕಿ ಹಾಕಿದ ತಾಲಿಬಾನ್

ನಮ್ಮ ಸರ್ಕಾರವನ್ನು ಗುರುತಿಸದೆ ಹೋದಲ್ಲಿ ಇದರಿಂದ ಇಡೀ ವಿಶ್ವಕ್ಕೆ ತೊಂದರೆ ಎಂದು ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರ್ಕಾರ ಧಮ್ಕಿ ಹಾಕಿದೆ.

ಅಫ್ಘಾನಿಸ್ತಾನದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ತಾಲಿಬಾನ್ ಸರ್ಕಾರವನ್ನು ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳು ಗುರುತಿಸದಿದ್ದರೆ ಹಾಗೂ ವಿದೇಶದಲ್ಲಿ ಇರುವ ಆಫ್ಘನ್ ನಿಧಿಯನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸಿದರೆ ಇದರಿಂದ ಅಫ್ಘಾನಿಸ್ತಾನಕ್ಕೆ ಮಾತ್ರ ಅಲ್ಲ, ಇಡೀ ವಿಶ್ವಕ್ಕೆ ತೊಂದರೆ ಆಗಲಿದೆ ಎಂದು ಧಮ್ಕಿ ಹಾಕಲಾಗಿದೆ.

ಕಳೆದ ಆಗಸ್ಟ್​ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡಾಗಿನಿಂದಲೂ ಆ ಸರ್ಕಾರವನ್ನು ಯಾವುದೇ ದೇಶ ಅಧಿಕೃತವಾಗಿ ಗುರುತಿಸಿಲ್ಲ. ಇದರ ಜತೆಗೆ ಅಫ್ಘಾನಿಸ್ತಾನಕ್ಕೆ ಸೇರಿದ ಬಿಲಿಯನ್​ಗಟ್ಟಲೆ ಡಾಲರ್ ಆಸ್ತಿ ಮತ್ತು ನಿಧಿ ವಿದೇಶಗಳಲ್ಲಿ ಸ್ಥಗಿತಗೊಂಡಿದೆ. ಅಫ್ಘಾನಿಸ್ತಾನದಲ್ಲಿ ತೀವ್ರತರದಲ್ಲಿ ಆರ್ಥಿಕ ಹಾಗೂ ಮಾನವೀಯ ಬಿಕ್ಕಟ್ಟು ತಲೆದೋರಿದ್ದರೂ ಈ ಆಸ್ತಿ, ನಿಧಿಯನ್ನು ಹಿಂತಿರುಗಿಸುತ್ತಿಲ್ಲ. “ಅಮೆರಿಕಕ್ಕೆ ನಮ್ಮ ಸಂದೇಶ ಏನೆಂದರೆ, ಒಂದು ವೇಳೆ ಗುರುತಿಸದಿರುವುದು ಹೀಗೇ ಮುಂದುವರಿದಲ್ಲಿ ಆಫ್ಘನ್ ಸಮಸ್ಯೆ ಮುಂದುವರಿಯುತ್ತದೆ. ಇದು ಈ ಭಾಗದ ಸಮಸ್ಯೆ ಮತ್ತು ವಿಶ್ವದ ಸಮಸ್ಯೆ ಆಗಿಯೂ ಬದಲಾಗಬಹುದು,” ಎಂದು ತಾಲಿಬಾನ್ ವಕ್ತಾರ ಝಬೀವುಲ್ಲಾ ಮುಜಾಹಿದ್ ಶನಿವಾ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿರುವುದಾಗಿ ವರದಿ ಆಗಿದೆ.

ಕಳೆದ ಬಾರಿ ಕೂಡ ತಾಲಿಬಾನ್​ ಮತ್ತು ಅಮೆರಿಕ ಮಧ್ಯೆ ಯುದ್ಧ ಆಗುವುದಕ್ಕೆ ಕಾರಣ ಆಗಿದ್ದು ಎರಡರ ಮಧ್ಯೆಯೂ ರಾಜತಾಂತ್ರಿಕ ಬಾಂಧವ್ಯ ಇಲ್ಲದಿದ್ದದ್ದು. ಸೆಪ್ಟೆಂಬರ್ 11, 2001ರ ದಾಳಿ ನಂತರ ಅಮೆರಿಕವು ಅಫ್ಘಾನಿಸ್ತಾನದ ಮೇಲೆ ಯುದ್ಧ ಸಾರಿತು. ಆಗಿನ ತಾಲಿಬಾನ್ ಸರ್ಕಾರವು ಅಲ್​ ಕೈದಾದ ಒಸಾಮ ಬಿನ್ ಲಾಡೆನ್ ಜತೆಗೆ ಯಾವುದೇ ರೀತಿಯಲ್ಲೂ ಕೈ ಜೋಡಿಸಿಲ್ಲ ಎಂದ ಮೇಲೂ ದಾಳಿ ಮಾಡಲಾಗಿತ್ತು. “ಯಾವ ವಿಚಾರವು ಯುದ್ಧಕ್ಕೆ ಕಾರಣವಾಗಿತ್ತೋ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಅವರು ರಾಜಕೀಯ ಸಂಧಾನದ ಮೂಲಕವೂ ಬಗೆಹರಿಸಬಹುದಿತ್ತು,” ಎಂದು ಮುಜಾಹಿದ್ ಅಭಿಪ್ರಾಯ ಪಟ್ಟಿದ್ದಾಗಿ ಹೇಳಲಾಗಿದೆ. ತಾಲಿಬಾನ್ ಸರ್ಕಾರವನ್ನು ಗುರುತಿಸುವುದು ಆಫ್ಘನ್ ಜನರ ಹಕ್ಕು ಎಂದು ಕೂಡ ಆತ ಪ್ರತಿಪಾದಿಸಿದ್ದ ಬಗ್ಗೆ ವರದಿ ಆಗಿದೆ.

ತಾಲಿಬಾನ್ ಸರ್ಕಾರವನ್ನು ಯಾವುದೇ ದೇಶ ಗುರುತಿಸಿಲ್ಲ. ಆದ್ದರಿಂದ ಹಲವು ದೇಶಗಳ ಹಿರಿಯ ಅಧಿಕಾರಿಗಳು ಕಾಬೂಲ್ ಮತ್ತು ವಿದೇಶಗಳಲ್ಲಿ ಇರುವ ಚಳವಳಿಯ ನಾಯಕರನ್ನು ಭೇಟಿ ಆಗುತ್ತಿದ್ದಾರೆ. ತುರ್ಕ್​ಮನ್ ವಿದೇಶಾಂಗ ಸಚಿವ ರಸಿತ್ ಮೆರೆಡೊವ್ ಶನಿವಾರ ಕಾಬೂಲ್​ನಲ್ಲಿದ್ದರು. ಎರಡೂ ಕಡೆಯಿಂದಲೂ ತುರ್ಕ್​ಮೇನಿಸ್ತಾನ್- ಅಫ್ಘಾನಿಸ್ತಾನ್-ಪಾಕಿಸ್ತಾನ್-ಇಂಡಿಯಾ (TAPI) ಅನಿಲ ಪೈಪ್​ಲೈನ್ ಶೀಘ್ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಯಿತು ಎಂದು ಟ್ವಿಟ್ಟರ್​ನಲ್ಲಿ ಮುಜಾಹಿದ್ ಮಾಹಿತಿ ಹಂಚಿಕೊಂಡಿರುವುದರಿಂದ ತಿಳಿದುಬಂದಿದೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಈ ವಾರದ ಆರಂಭದಲ್ಲಿ ಕತಾರ್‌ನಲ್ಲಿ ತಾಲಿಬಾನ್ ಅಧಿಕಾರಿಗಳನ್ನು ಭೇಟಿಯಾದರು. ಸಾರಿಗೆ, ಮೂಲಸೌಕರ್ಯಕ್ಕೆ ಹಣಕಾಸು ಒದಗಿಸುವುದಾಗಿ ಚೀನಾ ಭರವಸೆ ನೀಡಿದೆ. ನೆರೆಯ ಪಾಕಿಸ್ತಾನದ ಮೂಲಕ ಚೀನಾದ ಮಾರುಕಟ್ಟೆಗಳಿಗೆ ಕಾಬೂಲ್‌ನ ರಫ್ತು ಪ್ರವೇಶವನ್ನು ನೀಡುವುದಾಗಿ ಮುಜಾಹಿದ್ ಶನಿವಾರ ಮಾಹಿತಿ ನೀಡಿದ್ದು, ಗಡಿ ದಾಟುವಿಕೆಗಳನ್ನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿ, ವಿಶೇಷವಾಗಿ ಪಾಕಿಸ್ತಾನದೊಂದಿಗೆ ಇತ್ತೀಚಿನ ದಿನಗಳಲ್ಲಿ ಆಗಾಗ ಗಡಿ ಮುಚ್ಚುವಿಕೆ ಮತ್ತು ಪ್ರತಿಭಟನೆಗಳನ್ನು ಕಂಡಿದೆ. ಅಫ್ಘಾನಿಸ್ತಾನಕ್ಕೆ ಕ್ರಾಸಿಂಗ್‌ಗಳು ನಿರ್ಣಾಯಕವಾಗಿವೆ. ಕಳೆದ ವಾರ ಪಾಕಿಸ್ತಾನದ ವಿದೇಶಾಂಗ ಸಚಿವರು ಕಾಬೂಲ್‌ಗೆ ತೆರಳಿದ್ದ ಸಂದರ್ಭದಲ್ಲಿ ಈ ಕುರಿತು ಗಂಭೀರ ಮಾತುಕತೆ ನಡೆಸಲಾಗಿತ್ತು ಎಂದು ತಿಳಿಸಲಾಗಿದೆ.

 ಅಪ್ಪು ಅಂತಿಮ ವಿಧಿವಿಧಾನ ನಡೆಸುತ್ತಿರುವ ವಿನಯ್ ರಾಜಕುಮಾರ್

ಅಪ್ಪು ಅಂತಿಮ ವಿಧಿವಿಧಾನ ನಡೆಸುತ್ತಿರುವ ವಿನಯ್ ರಾಜಕುಮಾರ್


ಅಪ್ಪು ಅಂತಿಮ ವಿಧಿವಿಧಾನ ನಡೆಸುತ್ತಿರುವ ವಿನಯ್ ರಾಜಕುಮಾರ್

ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಸಮಾಧಿಯ ಪಕ್ಕದಲ್ಲಿ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.

ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಹಾಗೂ ಪುತ್ರಿಯರು ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಪುತ್ರ ವಿನಯ್ ರಾಜಕುಮಾರ್ ಅಂತಿಮ ವಿಧಿವಿಧಾನ ನೆರವೇರಿಸುತ್ತಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ರವಿಚಂದ್ರನ್, ಯಶ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.

ಸ್ಟುಡಿಯೋ ಹೊರಗೆ ಬೃಹತ್ ಎಲ್‌ಇಡಿ ಪರದೆಗಳಲ್ಲಿ ಅಂತ್ಯ ಸಂಸ್ಕಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ವೀಕ್ಷಿಸಿದ್ದಾರೆ.


ಪುನೀತ್ ನಿಧನಕ್ಕೆ ಮನ ನೊಂದು ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ

ಪುನೀತ್ ನಿಧನಕ್ಕೆ ಮನ ನೊಂದು ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ


ಪುನೀತ್ ನಿಧನಕ್ಕೆ ಮನ ನೊಂದು ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ

ಚಿಕ್ಕಮಗಳೂರು: ನಟ ಪುನೀತ್ ರಾಜ್‌ಕುಮಾರ್ ಸಾವಿನಿಂದ ಮನ ನೊಂದು ಅವರ ಇನ್ನೊಬ್ಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ರಾಂಪುರದ ಶರತ್ (30) ಮೃತ ವ್ಯಕ್ತಿ.

ನಿನ್ನೆ ಪುನೀತ್ ನಿಧನರಾದಾಗಿನಿಂದಲೂ ಶರತ್ ಅಳುತ್ತಲೇ ಇದ್ದ.

ಆತನನ್ನು ಮನೆಯವರು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದರು. ಸತತವಾಗಿ ಟಿವಿ ನ್ಯೂಸ್‌ನಲ್ಲಿ ಪುನೀತ್ ಸಾವಿನ ವಿಷಯಗಳನ್ನು ನೋಡುತ್ತಿದ್ದ. ಇಂದು ಏಕಾಏಕಿ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶರತ್ ಹೋಟೆಲ್‌ಗಳಿಗೆ ಮರದ ಹೊಟ್ಟು ತುಂಬುವ ಕೆಲಸ ಮಾಡುತ್ತಿದ್ದ. ಆತನಿಗೆ ಒಂದು ಮಗುವಿದ್ದು, ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾಳೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


 ಎಸ್.ಎಸ್.ಎಫ್ ರೆಂಜ ಸೆಕ್ಟರ್ ಪ್ರತಿಭೋತ್ಸವ - 21 : ಡೆಮ್ಮಂಗರ ಶಾಖೆ ಚಾಂಪಿಯನ್

ಎಸ್.ಎಸ್.ಎಫ್ ರೆಂಜ ಸೆಕ್ಟರ್ ಪ್ರತಿಭೋತ್ಸವ - 21 : ಡೆಮ್ಮಂಗರ ಶಾಖೆ ಚಾಂಪಿಯನ್

 

ಎಸ್.ಎಸ್.ಎಫ್ ರೆಂಜ ಸೆಕ್ಟರ್ ಪ್ರತಿಭೋತ್ಸವ - 21 : ಡೆಮ್ಮಂಗರ ಶಾಖೆ ಚಾಂಪಿಯನ್

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್.ಎಸ್.ಎಫ್ ರೆಂಜ ಸೆಕ್ಟರ್ ವತಿಯಿಂದ ನಿರೀಕ್ಷೆಗಳ ನೀಲ ನಕ್ಷೆ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿಭೋತ್ಸವ 21 ಕಾರ್ಯಕ್ರಮವು ರೆಂಜ ತಾಜುಲ್ ಫುಖಹಾ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.

ಎಸ್.ಎಸ್.ಎಫ್ ರೆಂಜ ಸೆಕ್ಟರ್ ಅಧ್ಯಕ್ಷರಾದ ಕರೀಂ ಬಾಹಸನಿ ರೆಂಜ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಎಫ್ ಪೇರಲ್ತಡ್ಕ ಶಾಖೆಯ ಅಧ್ಯಕ್ಷರಾದ ಹಾಮಿದ್ ಅಲಿ ಹಿಮಮಿ ಸಖಾಫಿ ಸ್ವಾಗತಿಸಿದರು. ಫಾರೂಕ್ ಜುಮಾ ಮಸೀದಿಯ ಖತೀಬರಾದ ಜುನೈದ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಹಮ್ಮದ್ ಮುಸ್ಲಿಯಾರ್ ಮಣ್ಣಾಪು ಮೌಲಿದ್ ಗೆ ನೇತೃತ್ವ ವಹಿಸಿ ದುಆ ನೆರವೇರಿಸಿಕೊಟ್ಟರು. ಎಸ್.ಎಸ್.ಎಫ್ ಡೆಮ್ಮಂಗರ ಶಾಖೆಯ ಪ್ರಧಾನ ಕಾರ್ಯದರ್ಶಿ ಖಲಂದರ್ ಹಿಮಮಿ ಸಖಾಫಿ ಧನ್ಯವಾದ ಅರ್ಪಿಸಿದರು.

 ‌ಬಳಿಕ ರೆಂಜ ಸೆಕ್ಟರ್ ವ್ಯಾಪ್ತಿಗೊಳಪಟ್ಟ ರೆಂಜ, ಡೆಮ್ಮಂಗರ, ಪೇರಲ್ತಡ್ಕ, ಪಾಣಾಜೆ ಹಾಗೂ ತಂಬುತ್ತಡ್ಕ ಶಾಖೆಗಳ ಸುಮಾರು 150 ರಷ್ಟು ಪ್ರತಿಭೆಗಳು ಪ್ರತಿಭೋತ್ಸವ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಚೇರ್ಮನ್ ರಫೀಕ್ ಬಾಹಸನಿ ವಹಿಸಿದರು. ಎಸ್.ವೈ.ಎಸ್ ರೆಂಜ ಸೆಂಟರ್ ಕೋಶಾಧಿಕಾರಿ ಅಬ್ಬಾಸ್ ಮದನಿ ಉಸ್ತಾದರು  ಕಾರ್ಯಕ್ರಮವನ್ನು ಉದ್ಘಾಟಿಸಿ ದುಆ ನೆರವೇರಿಸಿದರು.ಪ್ರತಿಭೋತ್ಸವ ನಡೆಸಲು ಸ್ಥಳಾವಕಾಶ ನೀಡಿ ಸಹಕರಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ನಾಯಕರಾದ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಪ್ರಾಸ್ತಾವಿಕ ಭಾಷಣ ಮಾಡಿ ಶುಭಹಾರೈಸಿದರು.

ಬಳಿಕ ಪ್ರತಿ ವಿಷಯದಲ್ಲೂ ಪ್ರಥಮ, ದ್ವಿತೀಯ ಸ್ಥಾನ ಪಡೆದ ಪ್ರತಿಭೆಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಅತೀ ಹೆಚ್ಚು ಅಂಕ ಪಡೆದ ಡೆಮ್ಮಂಗರ ಶಾಖೆಯು ಚಾಂಪಿಯನ್ ಆಗಿ ಹೊರಹೊಮ್ಮಿದರೆ,ರೆಂಜ ಶಾಖೆ ದ್ವಿತೀಯ ಸ್ಥಾನ ಹಾಗೂ ಪೇರಲ್ತಡ್ಕ ಶಾಖೆ ತೃತೀಯ ಸ್ಥಾನವನ್ನು ಅಲಂಕರಿಸಿತು.ತೀರ್ಪುಗಾರರಾಗಿ ಶಫೀಕ್ ಸಅದಿ ಈಶ್ವರಮಂಗಲ, ಶಫೀಕ್ ಮಾಸ್ಟರ್ ತಿಂಗಳಾಡಿ, ಮುಹ್ಸಿನ್ ಕಟ್ಟತ್ತಾರು, ವಾಸಿಹ್ ಮತ್ತು ಸಾದಾತ್ ರು ಸಹಕರಿಸಿದರು. ಪುತ್ತೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಅಡ್ಕ, ಇಮ್ರಾನ್ ರೆಂಜಲಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ವೇದಿಕೆಯಲ್ಲಿ ಇಬ್ರಾಹಿಂ ಮುಸ್ಲಿಯಾರ್ ರೆಂಜ, ಶರೀಫ್ ಅಮಾನಿ ಇರ್ದೆ, ಅಬ್ದುರ್ರಹ್ಮಾನ್ ಮಣ್ಣಾಪು, ಅಮೀರ್ ವೈ.ಎಂ.ಕೆ, ಜಾಬಿರ್ ಕೇಕನಾಜೆ ಕೆಸಿಎಫ್ ಸೌದಿ, ಅಬ್ದುರ್ರಝಾಕ್ ಕೆಸಿಎಫ್ ಅಬುಧಾಬಿ, ಎಂ.ಕೆ ಶಂಸುದ್ದೀನ್, ಖಾಸಿಂ ಪೇರಲ್ತಡ್ಕ, ರಝಾಕ್ ನೂಜಿ,ಮೂಸೆ ಚೆಲ್ಯಡ್ಕ, ಕಲಂದರ್ ಅಲಿ ಮಣ್ಣಾಪು, ರಫೀಕ್ ಮಣ್ಣಾಪು ಹಾಗೂ ಇನ್ನಿತರ ಹಲವಾರು ಉಲಮಾ ಉಮರಾ ನೇತಾರರು ಸೇರಿದಂತೆ, SYS SSF ಎಲ್ಲಾ ಶಾಖೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಎಸ್.ಎಫ್ ರೆಂಜ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ರಝಾಕ್ ಹಿಮಮಿ ಸ್ವಾಗತಿಸಿ , ಪ್ರತಿಭೋತ್ಸವ ಸ್ವಾಗತ ಸಮಿತಿ ಕನ್ವೀನರ್ ಝುಬೈರ್ ವಂದಿಸಿದರು.ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 58 ಸಾಧಕರಿಗೆ ಪ್ರಶಸ್ತಿ

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 58 ಸಾಧಕರಿಗೆ ಪ್ರಶಸ್ತಿ

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 58 ಸಾಧಕರಿಗೆ ಪ್ರಶಸ್ತಿ

ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಶನಿವಾರ ಜಿಲ್ಲಾಡಳಿತದಿಂದ ಪ್ರಕಟಿಸಲಾಗಿದೆ. ಒಟ್ಟು 58 ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಧಕರ ಪಟ್ಟಿ ಇಂತಿದೆ:
ಸಮಾಜ ಸೇವೆ: ಮಂಗಳೂರಿನ ಎಸ್.ಎಸ್. ನಾಯಕ್, ಕಾಟಿಪಳ್ಳದ ಕೂಸಪ್ಪ ಶೆಟ್ಟಿಗಾರ್, ಬೆಳ್ತಂಗಡಿಯ ವಿವೇಕ್ ವಿನ್ಸೆಂಟ್ ಪಾಯಿಸ್, ಮಂಗಳೂರಿನ ಕೆ.ರಾಮ ಮೊಗರೋಡಿ, ಮಂಗಳೂರಿನ ಡಾ.ಅಶೋಕ್ ಶೆಟ್ಟಿ ಬಿ.ಎನ್., ಮಂಗಳೂರಿನ ಬೋಳಾರ್ ತಾರಾನಾಥ್ ಶೆಟ್ಟಿ, ಮಂಗಳೂರು ಸೋಮೇಶ್ವರದ ಅಶೋಕ್, ಮಂಗಳೂರಿನ ಬೊಕ್ಕಪಟ್ಣದ ವೀರನಾಯಕ್ ಜನಸೇವಾ ಟ್ರಸ್ಟ್, ಮುಲ್ಕಿಯ ಬಿಲ್ಲವ ಸಮಾಜ ಸೇವ ಸಂಘ, ಊರ್ವ ಚಿಲಿಂಬಿಯ ಬಾಲಕರ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಟ್ರಸ್ಟ್, ಬಂಟ್ವಾಳ ತಾಲೂಕಿನ ಕಡೆಶಿವಾಲಯದ ಯುವಶಕ್ತಿ ಕಡೆ ಶಿವಾಲಯ, ಮಂಗಳೂರು ಜಪ್ಪು ಕಡೆಕಾರು ಮಲ್ಲಿಕಾರ್ಜುನ ಸೇವಾ ಸಂಘ, ಮಂಗಳೂರು ಕುಳಾಯಿಯ ಸ್ಪಂದನಾ ಫ್ರೆಂಡ್ಸ್ ಸರ್ಕಲ್, ಮಂಗಳೂರು ಬೈಕಂಪಾಡಿ ವಿದ್ಯಾರ್ಥಿ ಸಂಘ ಯುವಕ ಮಂಡಲ, ಉಜಿರೆಯ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ, ಮಂಗಳೂರು ಕಿನ್ಯದ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲ, ಮಂಗಳೂರು ತೊಕ್ಕೊಟ್ಟುವಿನ ಹೆಲ್ತ್ ಇಂಡಿಯಾ ಫೌಂಡೇಶನ್, ಮಂಗಳೂರು ಮರೋಳಿಯ ವೈಟ್ ಡೌಸ್, ಮಂಗಳೂರು ತಾಲೂಕಿನ ಕೋಟೆಕಾರ್‌ನ ಕೇಸರಿ ಮಿತ್ರ ವೃಂದ, ಮಂಗಳೂರು ಉಳ್ಳಾಲದ ಶ್ರೀ ಸಾಯಿ ಪರಿವಾರ್ ಟ್ರಸ್ಟ್, ಮಂಗಳೂರು ಹಳೆಯಂಗಡಿಯ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್-ತೋಕೂರು, ಮಂಗಳೂರು ಪಡುಪೆರಾರ್‌ನ ಶ್ರೀ ನಾಗಬ್ರಹ್ಮ ಯುವಕ ಮಂಡಲ, ಮಂಗಳೂರು ಕಂಕನಾಡಿ ಯುವಕ ವೃಂದ

ಕ್ರೀಡೆ: ಬಂಟ್ವಾಳ ತಾಲೂಕಿನ ಬದಿಗುಡ್ಡ ಮನೆಮಾಣಿ ಉದಯ ಚೌಟ, ಮಂಗಳೂರಿನ ದಿನೇಶ್ ಕುಂದರ್, ಮಂಗಳೂರಿನ ಸತೀಶ್ ಬೋಳಾರ್, ಅನೀಲ್ ಮೆಂಡೋನ್ಸಾ, ಬಂಟ್ವಾಳ ತಾಲೂಕಿನ ಕು. ಜಯಲಕ್ಷ್ಮೀ ಜಿ., ಮಂಗಳೂರಿನ ಕುಲಶೇಖರದ ಕು. ವೆನಿಜಿಯಾ ಆ್ಯನ್ನಿ ಕಾರ್ಲೊ, ಮಂಗಳೂರಿನ ಕುಲಶೇಖರದ ವಿನ್ಸೆಂಟ್ ಪ್ರಕಾಶ್ ಕಾರ್ಲೊ

ಕಂಬಳದಲ್ಲಿ ಹಳದಂಗಡಿ ರವಿಕುಮಾರ್, ಸ್ಯಾಕ್ಸೋಫೋನ್ ವಾದಕದಲ್ಲಿ ಬಂಟ್ವಾಳ ಅಳಕೆಯ ಪಿ.ಕೆ. ದಾಮೋದರ, ನಾಗಸ್ವರ ವಾದಕದಲ್ಲಿ ಮಂಗಳೂರಿನ ಶಿಬರೂರು-ದೇಲಂತಬೆಟ್ಟುವಿನ ಶಿವರಾಮ ಶೇರಿಗಾರ, ಸಾಂಸ್ಕೃತಿಕ ವಿಭಾಗದಲ್ಲಿ ಮಂಗಳೂರಿನ ಹೊಸಬೆಟ್ಟುವಿನ ಶಂಕರ್ ಜೆ. ಶೆಟ್ಟಿ, ತಾಸೆ ವಾದಕ ವಿಭಾಗದಲ್ಲಿ ಮೂಡಬಿದಿರೆಯ ಅಣ್ಣಿ ಸುವರ್ಣ, ನಾದಸ್ವರ ವಾದಕ ವಿಭಾಗದಲ್ಲಿ ಮೂಡಬಿದಿರೆಯ ಎ.ಕೆ. ಉಮಾನಾಥ್ ದೇವಾಡಿಗ, ತಾಳಮದ್ದಳೆ ವಿಭಾಗದಲ್ಲಿ ಬಂಟ್ವಾಳದ ಪದ್ಮನಾಭ್ ಶೆಟ್ಟಿಗಾರ್, ನಾಗಸ್ವರ ವಾದಕ ವಿಭಾಗದಲ್ಲಿ ಬಂಟ್ವಾಳದ ನಾಗೇಶ್ ಶೇರಿಗಾರ, ನಾಟಕ ವಿಭಾಗದಲ್ಲಿ ಕಡಬದ ರವಿ ರಾಮಕುಂಜ, ಯಕ್ಷಗಾನ ವಿಭಾಗದಲ್ಲಿ ಸುಳ್ಯದ ಜಯಾನಂದ ಸಂಪಾಜೆ, ಸಂಗೀತ ವಿಭಾಗದಲ್ಲಿ ಪುತ್ತೂರಿನ ಪಾಂಡುರಂಗ ನಾಯಕ್, ಸಾಂಸ್ಕೃತಿಕ ವಿಭಾಗದಲ್ಲಿ ಪುತ್ತೂರು ಕರ್ಕುಂಜದ ಲಿಂಗಪ್ಪ ಗೌಡ ಕಡೆಂಗ, ಸಾಹಿತ್ಯ ವಿಭಾಗದಲ್ಲಿ ಬೆಳ್ತಂಗಡಿಯ ಪ.ರಾಮಕೃಷ್ಣ ಶಾಸ್ತ್ರಿ, ಸಾಂಸ್ಕೃತಿಕ ವಿಭಾಗದಲ್ಲಿ ಉಳ್ಳಾಲದ ಡಾ.ಅರುಣ್ ಉಳ್ಳಾಲ್, ಜಾನಪದ ವಿಭಾಗದಲ್ಲಿ ಕೊಂಚಾಡಿಯ ಉಮೇಶ್ ಪಂಬದ, ಜಾನಪದ ವಿಭಾಗದಲ್ಲಿ ಹಳೆಯಂಗಡಿಯ ಶ್ರೀ ಕೃಷ್ಣ ಪೂಜಾರಿ, ಜಾನಪದ ವಿಭಾಗದಲ್ಲಿ ಮಂಗಳೂರು ಕೊಂಚಾಡಿಯ ಭಾಸ್ಕರ್ ಬಂಗೇರ, ವೈದ್ಯಕೀಯ ವಿಭಾಗದಲ್ಲಿ ಮಂಗಳಾದೇವಿಯ ಡಾ. ಗೋಪಾಲ್ ಕೃಷ್ಣ ಭಟ್ ಬಿ. ಸಂಕಬಿತ್ತಿಲು, ವೈದ್ಯಕೀಯ ವಿಭಾಗದಲ್ಲಿ ಬಿಜೈನ ಡಾ.ಶಶಿಕಾಂತ್ ತಿವಾರಿ, ನಾಟಿ ವೈದ್ಯ ವಿಭಾಗದಲ್ಲಿ ಬಂಟ್ವಾಳದ ಬಡಗ ಬೆಳ್ಳೂರುವಿನ ಶೀನಾ ಪೂಜಾರಿ, ಪತ್ರಿಕೋದ್ಯಮ ವಿಭಾಗದಲ್ಲಿ ಮಂಗಳೂರು ಕೋಡಿಕಲ್‌ನ ಶಿವಪ್ರಸಾದ್ ಬಿ., ವಿದ್ಯಾಧರ್ ಶೆಟ್ಟಿ, ಗುವಾಯನ ಕೆರೆಯ ಬಿ.ಶ್ರೀನಿವಾಸ್ ಕುಲಾಲ್, ಗಡಿನಾಡು (ಯಕ್ಷಗಾನ) ವಿಭಾಗದಲ್ಲಿ ಕಾಸರಗೋಡು ಜಿಲ್ಲೆಯ ರಾಘವ್ ಬಳ್ಳಾಲ್ ಕಾರಡ್ಕ, ಹೊರನಾಡು ವಿಭಾಗದಲ್ಲಿ (ಬಹರೈನ್‌ನಲ್ಲಿ ವಾಸ) ಕಮಲಾಕ್ಷ ಅಮೀನ್, ಚಿತ್ರಕಲೆ ವಿಭಾಗದಲ್ಲಿ ಮಂಗಳೂರು ಕಾಟಿಪಳ್ಳದ ದೇವಿ ಕಿರಣ್ ಗಣೇಶ್‌ಪುರ, ಕೃಷಿ ವಿಭಾಗದಲ್ಲಿ ಪುತ್ತೂರಿನ ಕಡಮಜಲು ಸುಭಾಸ್ ರೈ ಬಿ.ಎ., ಭರತನಾಟ್ಯದಲ್ಲಿ ಮಂಗಳೂರು ಬಳ್ಳಾಲ್ ಬಾಗ್‌ನ ಸನಾತನ ನಾಟ್ಯಾಲಯ ಈ ಬಾರಿಯ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ವಿಶ್ವಕಪ್: ಶ್ರೀಲಂಕಾ ವಿರುದ್ಧ ಕೊನೆಯ ಓವರ್ ನಲ್ಲಿ ಗೆದ್ದ ದ.ಆಫ್ರಿಕಾ

ವಿಶ್ವಕಪ್: ಶ್ರೀಲಂಕಾ ವಿರುದ್ಧ ಕೊನೆಯ ಓವರ್ ನಲ್ಲಿ ಗೆದ್ದ ದ.ಆಫ್ರಿಕಾ

 ವಿಶ್ವಕಪ್: ಶ್ರೀಲಂಕಾ ವಿರುದ್ಧ ಕೊನೆಯ ಓವರ್ ನಲ್ಲಿ ಗೆದ್ದ ದ.ಆಫ್ರಿಕಾ

ಶಾರ್ಜಾ: ಟ್ವೆಂಟಿ-20 ವಿಶ್ವಕಪ್ ನ ಸೂಪರ್-12 ರ ಗ್ರೂಪ್-1ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕೊನೆಯ ಓವರ್ ನಲ್ಲಿ ಶ್ರೀಲಂಕಾ ವಿರುದ್ಧ ರೋಚಕ ಜಯ ದಾಖಲಿಸಿದೆ.

ಶನಿವಾರ ನಡೆದ ಟೂರ್ನಿಯ 25ನೇ ಪಂದ್ಯದಲ್ಲಿ ಗೆಲ್ಲಲು 143 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 19.5 ನೇ ಓವರ್ ನಲ್ಲಿ 6 ವಿಕೆಟ್ ನಷ್ಟದಲ್ಲಿ 146 ರನ್ ಗಳಿಸಿತು. ನಾಯಕ ಟೆಂಬ ಬವುಮಾ(46, 46 ಎಸೆತ, 1 ಬೌಂ, 1 ಸಿ.)ಸರ್ವಾಧಿಕ ಸ್ಕೋರ್ ಗಳಿಸಿದರು.

ದಕ್ಷಿಣ ಆಫ್ರಿಕಾಕ್ಕೆ ಕೊನೆಯ ಓವರ್ ನಲ್ಲಿ ಗೆಲ್ಲಲು 15 ರನ್ ಬೇಕಾಗಿತ್ತು. ಲಹಿರು ಕುಮಾರ ಬೌಲಿಂಗ್ ನಲ್ಲಿ ಸತತ 2 ಸಿಕ್ಸರ್ ಸಿಡಿಸಿದ ಮಿಲ್ಲರ್ (ಔಟಾಗದೆ 23) ಗೆಲುವಿನ ಹಾದಿ ಸುಗಮಗೊಳಿಸಿದರು. ರಬಾಡ(ಔಟಾಗದೆ 13)  19.5ನೇ ಓವರ್ ನಲ್ಲಿ ಬೌಂಡರಿ ಸಿಡಿಸಿ ಗೆಲುವಿನ ಸಂಭ್ರಮ ಆಚರಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 142 ರನ್ ಗೆ ಆಲೌಟಾಯಿತು. ತಬ್ರೈಝ್ ಶಂಸಿ(3-17), ಡ್ವೆಯ್ನ್ ಪ್ರಿಟೋರಿಯಸ್(3-17)  ಹಾಗೂ ಅನ್ರಿಚ್ ನೋಟ್ಜೆ(2-27) 8 ವಿಕೆಟ್ ಗಳನ್ನು ಹಂಚಿಕೊಂಡರು. ಶಂಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಲಂಕಾದ ಪರವಾಗಿ ಆರಂಭಿಕ ಆಟಗಾರ ಪಥುಮ್ ನಿಸ್ಸಾಂಕ(72, 58 ಎಸೆತ, 6 ಬೌಂಡರಿ, 3 ಸಿಕ್ಸರ್)ಏಕಾಂಗಿ ಹೋರಾಟ ನೀಡಿದರು.

 ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡುವಂತೆ ಅಭಿಯಾನ

ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡುವಂತೆ ಅಭಿಯಾನ


 ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡುವಂತೆ ಅಭಿಯಾನ

ಬೆಂಗಳೂರು: ನಟ ಪುನೀತ್ ರಾಜ್‍ ಕುಮಾರ್ ಗೆ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಅಭಿಮಾನಿಗಳು ಅಭಿಯಾನವನ್ನು ಆರಂಭಿಸಿದ್ದಾರೆ. ಇದಕ್ಕೆ ರಾಜಕೀಯ ಹಾಗೂ ಕನ್ನಡ ಚಿತ್ರೋದ್ಯಮದ ಗಣ್ಯರು ಕೂಡ ಬೆಂಬಲ ನೀಡಿದ್ದಾರೆ. 

ಜಗ್ಗೇಶ ಆಗ್ರಹ: ಈ ಕುರಿತಂತೆ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ನಟ ಜಗ್ಗೇಶ್ ಅವರು, ಸಜ್ಜನಿಕೆ ವ್ಯಕ್ತಿತ್ವ, ಸಮಾಜಮುಖಿ ಕಾರ್ಯ ಚಟುವಟಿಕೆ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಪುನೀತ್ ಅವರಿಗೆ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಹೇಳಿದ್ದಾರೆ. 

ಕನ್ನಡ ಹಾಗೂ ಸ್ಥಳೀಯ ಸಂಸ್ಕೃತಿಗೆ ಒತ್ತನ್ನು ನೀಡುವ ಮೂಲಕ ಪುನೀತ್ ಅವರು, ಉತ್ತಮ ಚಿಂತನೆ ಹೊಂದಿದ್ದರು. ಅಲ್ಲದೆ, ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅತಿ ಕಿರಿಯ ವಯಸ್ಸಿಗೆ ಅವರು ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಸೇವೆಯನ್ನು ಸರಕಾರ ಪರಿಗಣಿಸಬೇಕೆಂದು ಕೋರುತ್ತೇನೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.

ಕುಟುಂಬದ ಕೊಡುಗೆ ಗೌರವಿಸಿದಂತೆ: ಪುನೀತ್‍ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ನಗರದಲ್ಲಿ ಸಂಸದ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಗೌರವ ಹೆಚ್ಚುತ್ತದೆ. 

ಪುನೀತ್ ರಾಜ್ಯೋತ್ಸವಕ್ಕಿಂತಲೂ ಮೇಲಿನ ಪ್ರಶಸ್ತಿಗೆ ಅರ್ಹರು. ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಲು ನನ್ನ ಸಹಮತ ಇದೆ. ಇದು ಅತ್ಯಂತ ಸೂಕ್ತ ಸಮಯ. ಈ ವಿಚಾರವನ್ನು ಸಿಎಂ ಮತ್ತು ಕನ್ನಡ ಸಂಸ್ಕೃತಿ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಸಿಎಂ ಮತ್ರು ಸಚಿವರಿಗೆ ನಾನು ಆಗ್ರಹ ಮಾಡುತ್ತೇನೆ. ಪುನೀತ್‍ಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟರೆ ಕರ್ನಾಟಕಕ್ಕೆ ರಾಜ್‍ಕುಮಾರ್ ಕುಟುಂಬದ ಕೊಡುಗೆಯನ್ನು ಗೌರವಿಸಿದಂತಾಗುತ್ತದೆ ಎಂದು ಹೇಳಿದರು.

 ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ರನ್ನು ಭೇಟಿ ಮಾಡಿ ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ

ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ರನ್ನು ಭೇಟಿ ಮಾಡಿ ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ

 

ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ರನ್ನು ಭೇಟಿ ಮಾಡಿ ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ

ವ್ಯಾಟಿಕನ್ ಸಿಟಿ: ವ್ಯಾಟಿಕನ್ ಸಿಟಿಯಲ್ಲಿ  ಶನಿವಾರ ನಡೆದ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಭಾರತಕ್ಕೆ ಆಹ್ವಾನಿಸಿದ್ದಾರೆ. ಪ್ರಧಾನಿ ಅವರ ಜೊತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಡಾ ಎಸ್ .ಜೈಶಂಕರ್ ಇದ್ದರು. ಸಭೆಯನ್ನು ಕೇವಲ 20 ನಿಮಿಷಗಳ ಕಾಲ ನಿಗದಿಪಡಿಸಲಾಗಿತ್ತು. ಆದರೆ ಒಂದು ಗಂಟೆ ಕಾಲ ನಡೆಯಿತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

"ಪೋಪ್ ಫ್ರಾನ್ಸಿಸ್ ಅವರೊಂದಿಗೆ ಅತ್ಯಂತ ಆತ್ಮೀಯ ಸಭೆ ನಡೆಸಿದ್ದೇನೆ. ಅವರೊಂದಿಗೆ ವ್ಯಾಪಕವಾದ ವಿಷಯಗಳ ಬಗ್ಗೆ ಚರ್ಚಿಸಲು ನನಗೆ ಅವಕಾಶ ಸಿಕ್ಕಿತು ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದೇನೆ" ಎಂದು ಪ್ರಧಾನಿ ಮೋದಿ ಅವರ ವೈಯಕ್ತಿಕ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

 ರೈತರ ಲಂಗರ್ ಗೆ ಆರ್ಥಿಕ ಸಹಾಯ ನಿಲ್ಲಿಸದಿದ್ದರೆ ಭಾರತ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ: ಅನಿವಾಸಿ ಉದ್ಯಮಿ ಆರೋಪ

ರೈತರ ಲಂಗರ್ ಗೆ ಆರ್ಥಿಕ ಸಹಾಯ ನಿಲ್ಲಿಸದಿದ್ದರೆ ಭಾರತ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ: ಅನಿವಾಸಿ ಉದ್ಯಮಿ ಆರೋಪ


 ರೈತರ ಲಂಗರ್ ಗೆ ಆರ್ಥಿಕ ಸಹಾಯ ನಿಲ್ಲಿಸದಿದ್ದರೆ ಭಾರತ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ: ಅನಿವಾಸಿ ಉದ್ಯಮಿ ಆರೋಪ

ಹೊಸದಿಲ್ಲಿ: ದೇಶವನ್ನು ಪ್ರವೇಶಿಸಬೇಕಿದ್ದರೆ ಕೇಂದ್ರದ ಕೃಷಿ ಕಾಯಿದೆಗಳ ವಿರುದ್ಧ ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಲಂಗರ್ ಗಳನ್ನು ನಿಲ್ಲಿಸಬೇಕೆಂದು ತಮಗೆ ಭಾರತೀಯ ಇಮ್ಮಿಗ್ರೇಶನ್ ಅಧಿಕಾರಿಗಳು ಸೂಚಿಸಿದ್ದಾರೆಂದು ಅಮೆರಿಕಾ ಮೂಲದ ಉದ್ಯಮಿ ದರ್ಶನ್ ಸಿಂಗ್ ಧಲಿವಾಲ್ ಆರೋಪಿಸಿದ್ದಾರೆ ಎಂದು The Wire ವರದಿ ಮಾಡಿದೆ.

ಅಕ್ಟೋಬರ್ 23 ರಾತ್ರಿ ದಿಲ್ಲಿಗೆ ವಿಮಾನದಲ್ಲಿ ಆಗಮಿಸಿದ ಅಮೆರಿಕಾ ಪೌರ, ಭಾರತೀಯ ಮೂಲದ ಧಲಿವಾಲ್ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ.

ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರಿಗೆ ಲಂಗರ್ ಅಥವಾ ಸಮುದಾಯ ಪಾಕಶಾಲೆಯನ್ನು ಆರಂಭಿಸಿದ ನಂತರ ಧಲಿವಾಲ್ ಅವರು ಜನವರಿ, ಎಪ್ರಿಲ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಭಾರತಕ್ಕೆ ಆಗಮಿಸಿದ್ದರು.

ನಾನು ಭಾರತಕ್ಕೆ ಆಗಮಿಸಿದಾಗಲೆಲ್ಲಾ ಅಧಿಕಾರಿಗಳು ನಾನೇಕೆ ರೈತರನ್ನು ಬೆಂಬಲಿಸಿ ಲಂಗರ್ ನಡೆಸುತ್ತಿದ್ದೇನೆಂದು ಕೇಳುತ್ತಿದ್ದರು. ನಾನು ಇವುಗಳನ್ನು ಲಘುವಾಗಿ ಪರಿಗಣಿಸಿದ್ದೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಆದರೆ ಕೆಲ ದಿನಗಳ ಹಿಂದೆ ಅವರು ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ಆಗಮಿಸಿದಾಗ ಎರಡು ಗಂಟೆಗಳ ಕಾಯಿಸಿ ಮರಳಿ ಅಮೆರಿಕಾಗೆ ತೆರಳುವಂತೆ ಸೂಚಿಸಲಾಗಿದೆ.

ಹಿಂದಿನ ರೀತಿಯೇ ಈ ಬಾರಿಯೂ ಅಧಿಕಾರಿಗಳು ಅವರನ್ನು ಪ್ರಶ್ನಿಸಿದ್ದಾರೆ, ಇದಕ್ಕೆ ಧಲಿವಾಲ್ ಅವರನ್ನು ಮತ್ತಷ್ಟು ವಿವರ ಕೇಳಿದಾಗ "ಮೇಲಿನಿಂದ ಆದೇಶವಿದೆ'' ಎಂಬ ಉತ್ತರ ದೊರಕಿದೆಯೆನ್ನಲಾಗಿದೆ.

ತಮ್ಮ ತಂದೆಯ ಸ್ಮರಣಾರ್ಥ ಜನವರಿ 6ರಿಂದ ಅವರು ಸಿಂಘು ಗಡಿಯಲ್ಲಿ ಲಂಗರ್ ಅನ್ನು ಪ್ರಾಯೋಜಿಸಿದ್ದಾರೆ. ಅಮೆರಿಕಾಗೆ 1972ರಲ್ಲಿ ತೆರಳಿದ್ದ ಅವರು ಅಲ್ಲಿ 100ಕ್ಕೂ ಅಧಿಕ ಪೆಟ್ರೋಲ್ ಮತ್ತು ಗ್ಯಾಸ್ ಸ್ಟೇಷನ್ ಹೊಂದಿದ್ದಾರೆ.

 ಈ ಹುಡುಗನ ಜೊತೆ ಎಷ್ಟೊಂದು ಭೇಟಿಗಳ ನೆನಪುಗಳು: ಟ್ವಿಟರ್ ನಲ್ಲಿ ಪುನೀತ್ ಜೊತೆಗಿನ ಹಳೇಯ ಪೋಟೊ ಹಂಚಿಕೊಂಡ ಸಿದ್ದರಾಮಯ್ಯ

ಈ ಹುಡುಗನ ಜೊತೆ ಎಷ್ಟೊಂದು ಭೇಟಿಗಳ ನೆನಪುಗಳು: ಟ್ವಿಟರ್ ನಲ್ಲಿ ಪುನೀತ್ ಜೊತೆಗಿನ ಹಳೇಯ ಪೋಟೊ ಹಂಚಿಕೊಂಡ ಸಿದ್ದರಾಮಯ್ಯ


 ಈ ಹುಡುಗನ ಜೊತೆ ಎಷ್ಟೊಂದು ಭೇಟಿಗಳ ನೆನಪುಗಳು: ಟ್ವಿಟರ್ ನಲ್ಲಿ ಪುನೀತ್ ಜೊತೆಗಿನ ಹಳೇಯ ಪೋಟೊ ಹಂಚಿಕೊಂಡ ಸಿದ್ದರಾಮಯ್ಯ

ಬೆಂಗಳೂರು: ಶುಕ್ರವಾರ  ಹೃದಯಾಘಾತದಿಂದ ನಿಧನರಾದ ನಟ‌ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಕಂಠೀರವ‌ ಸ್ಟುಡಿಯೊ ಬಳಿ‌ ನೆರವೇರಲಿದೆ. 

ಇಂದು ಕಂಠೀರವ ಕ್ರೀಡಾಂಗಣದಲ್ಲಿ ನಟ ಪುನೀತ್ ಅವರ ಅಂತಿ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ತಮ್ಮ ಜೊತೆಗಿದ್ದ ಪುನೀತ್ ಅವರ ಹಳೇಯ ಪೋಟೊ ಟ್ವಟರ್ ನಲ್ಲಿ ಹಂಚಿಕೊಂಡಿದ್ದಾರೆ.

''ಈ ಹುಡುಗನ ಜೊತೆ ಎಷ್ಟೊಂದು ಭೇಟಿಗಳ ನೆನಪುಗಳು.... ಪ್ರತಿ ಭೇಟಿಯಲ್ಲಿಯೂ ಅದೇ ವಿನಯ, ಸಮ್ಮೋಹನಗೊಳಿಸುವ ನಗು, ಪುಟಿಯುವ ಜೀವನೋತ್ಸಾಹ, ಹಿರಿಯರಿಗೆ ಕೊಡುತ್ತಿದ್ದ ಗೌರವ, ನಮ್ಮವನೆಂದು ಭಾವಿಸುವ ಹಾಗೆ ಮಾಡುವ ಆತ್ಮೀಯ ನಡವಳಿಕೆ.... ಈಗ ಎಲ್ಲವೂ ಬರೀ ನೆನಪುಗಳು...'' ಎಂದು ತಿಳಿಸಿದ್ದಾರೆ.  

'ಸದಾ ಕ್ರೀಯಾಶೀಲವಾಗಿ ಉತ್ಸಾಹದ ಬುಗ್ಗೆಯಂತಿದ್ದ ನಟ ಪುನೀತ್ ರಾಜ್‌ಕುಮಾರ್, ಪಾರ್ಥೀವ ಶರೀರವಾಗಿ ಶಾಂತ ಮುಖಮುದ್ರೆಯೊಂದಿಗೆ ಮಲಗಿರುವುದನ್ನು ಕಂಡು ವೇದನೆಯಾಯಿತು' ಎಂದು ಹೇಳಿದ್ದಾರೆ.

'ವರನಟ ಡಾ. ರಾಜ್ ಕುಮಾರ್ ಅವರು ನನ್ನನ್ನು ಭೇಟಿಯಾದಾಗೆಲ್ಲ ‘ನಮ್ಮ ಕಾಡಿನವರು’ ಎಂದೇ ಮಾತು ಶುರುಮಾಡುತ್ತಿದ್ದರು. ಈ ಸ್ನೇಹ ಸಂಬಂಧ ಮಕ್ಕಳ ಕಾಲದಲ್ಲಿಯೂ ಮುಂದುವರಿದಿದೆ. ಪ್ರತಿ ಬಾರಿ ಪುನೀತ್ ಭೇಟಿಯಾದಾಗಲೂ ತನ್ನ ಸೌಜನ್ಯದ ನಡವಳಿಕೆಯಿಂದ ಅವರ ಅಪ್ಪಾಜಿ ರಾಜ್ ಕುಮಾರ್ ಅವರನ್ನು ನೆನಪು ಮಾಡಿಕೊಡುತ್ತಿದ್ದರು' ಎಂದು ಪುನೀತ್ ರಾಜ್ ಕುಮಾರ್ ಅವರ ಭೇಟಿಯ  ಹಳೇಯ ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ. 

 ನಾಳೆ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ನಾಳೆ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


 ನಾಳೆ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕನ್ನಡದ ಚಿತ್ರನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ನಗರದ ‘ಕಂಠೀರವ ಸ್ಟುಡಿಯೋ'ದಲ್ಲಿ ಅ.31ರಂದು( ರವಿವಾರ) ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅಂತ್ಯಕ್ರಿಯೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಜತೆ ಚರ್ಚೆ ನಡೆಸಿದ್ದೇವೆ. ಇಂದು ಇಡೀ ದಿನ ದರ್ಶನ ಪಡೆಯುವುದಕ್ಕೆ ಅವಕಾಶವಿದೆ. ಅಭಿಮಾನಿಗಳು ಶಾಂತಿಯುತವಾಗಿ ಬಂದು ದರ್ಶನ ಪಡೆಯಿರಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Friday, 29 October 2021

ಆಗುಂಬೆ ಘಾಟ್‌; ಪ್ರಪಾತಕ್ಕೆ ಬಿದ್ದ ಲಾರಿ,   ನಾಲ್ಕು ಮಂದಿ ಸಾವು,ಐವರ ಸ್ಥಿತಿ ಚಿಂತಾಜನಕ

ಆಗುಂಬೆ ಘಾಟ್‌; ಪ್ರಪಾತಕ್ಕೆ ಬಿದ್ದ ಲಾರಿ, ನಾಲ್ಕು ಮಂದಿ ಸಾವು,ಐವರ ಸ್ಥಿತಿ ಚಿಂತಾಜನಕ


ಆಗುಂಬೆ ಘಾಟ್‌; ಪ್ರಪಾತಕ್ಕೆ ಬಿದ್ದ ಲಾರಿ, 
ನಾಲ್ಕು ಮಂದಿ ಸಾವು,ಐವರ ಸ್ಥಿತಿ ಚಿಂತಾಜನಕ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದುದರಿಂದ ಲಾರಿಯಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಗುಂಬೆ ಘಾಟಿಯಲ್ಲಿ ತಿರುವು ಪಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಿಕ್ಕಮಗಳೂರಿನಿಂದ ಈ ಲಾರಿ ಕಾರವಾರಕ್ಕೆ ತೆರಳುತ್ತಿತ್ತು.

ಹೆಬ್ರಿ ಲಿಮಿಟೆಡ್‌ಗೆ ಸೇರಿರುವ ಲಾರಿ ಇದಾಗಿದೆ. ಘಟನೆಯಿಂದಾಗಿ ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹ ಮತ್ತು ಗಾಯಾಳುಗಳನ್ನು ಮೇಲಕ್ಕೆತ್ತಲು ಹರಸಾಹಸ ಪಡಬೇಕಾಯಿತು. ಹೆಬ್ರಿ ಮತ್ತು ಆಗುಂಬೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೃತ ನಾಲ್ವರು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಿಯಾರು ಜೋಡುಕಟ್ಟೆ ನಿವಾಸಿಗಳು ಎಂದು ಗುರುತಿಸಲಾಗಿದೆ. ಚಾಲಕ ವಿಘ್ನೇಶ್, ಶ್ರೀಜಿತ್, ಮಂಜುನಾಥ, ಮಣಿ ಮೃತಪಟ್ಟವರು

ರಸ್ತೆಗಳು ಮುಕ್ತವಾದರೆ, ನಾವು ಬೆಳೆ ಮಾರಾಟ ಮಾಡಲು ಸಂಸತ್ತಿಗೆ ಹೋಗಲಿದ್ದೇವೆ: ರಾಕೇಶ್ ಟಿಕಾಯತ್

ರಸ್ತೆಗಳು ಮುಕ್ತವಾದರೆ, ನಾವು ಬೆಳೆ ಮಾರಾಟ ಮಾಡಲು ಸಂಸತ್ತಿಗೆ ಹೋಗಲಿದ್ದೇವೆ: ರಾಕೇಶ್ ಟಿಕಾಯತ್


ರಸ್ತೆಗಳು ಮುಕ್ತವಾದರೆ, ನಾವು ಬೆಳೆ ಮಾರಾಟ ಮಾಡಲು ಸಂಸತ್ತಿಗೆ ಹೋಗಲಿದ್ದೇವೆ: ರಾಕೇಶ್ ಟಿಕಾಯತ್

ಗಾಝಿಪುರ, ಅ. 29: ಕೇಂದ್ರ ಸರಕಾರದ ಕೃಷಿ ಕಾಯ್ದೆಯ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಗಾಝಿಪುರ ಗಡಿಯಿಂದ ಬ್ಯಾರಿಕೇಡ್ಗಳನ್ನು ದಿಲ್ಲಿ ಪೊಲೀಸರು ತೆರವುಗೊಳಿಸಿರುವುದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ವಕ್ತಾರ ರಾಕೇಶ್ ಟಿಕಾಯತ್, ನಾವು ನಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಂಸತ್ತಿಗೆ ತೆರಳಿದ್ದೇವೆ ಎಂದಿದ್ದಾರೆ.

ರಸ್ತೆಯನ್ನು ಮುಕ್ತಗೊಳಿಸಿದರೆ, ನಾವು ದಿಲ್ಲಿಗೆ ಹೋಗಲಿದ್ದೇವೆ. ನಾವು ನಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಂಸತ್ತಿಗೆ ಹೋಗಲಿದ್ದೇವೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

‘‘ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಪ್ರಧಾನಿ ಅವರು ಹೇಳಿದ್ದಾರೆ. ಇನ್ನು ಮಾರಾಟವಾಗದ ಬೆಳೆಗಳನ್ನು ಎಲ್ಲಿ ಮಾರಾಟ ಮಾಡಬಹುದು ಎಂದು ನಾವು ಈಗ ರೈತರಿಗೆ ತಿಳಿಸಲಿದ್ದೇವೆ ’’ ಎಂದು ಅವರು ಹೇಳಿದ್ದಾರೆ. ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಮುಂದಿನ ಪ್ರತಿಭಟನೆ ಕುರಿತು ನಿರ್ಧರಿಸಲಿದೆ ಎಂದು ಅವರು ತಿಳಿಸಿದ್ದಾರೆ.

‘‘ಅವರು ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಈಗ ಅವರೇ ತೆರೆದಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಹಾಗೂ ಅದರಂತೆ ನಾವು ಮುಂದುವರಿಯಲಿದ್ದೇವೆ. ದಿಲ್ಲಿಗೆ ಹೋಗಲು ಅನುಮತಿ ನೀಡುವಂತೆ ನಾವು ಕಳೆದ 11 ತಿಂಗಳಿಂದ ಧರಣಿ ಕುಳಿತಿದ್ದೇವೆ. ಆದರೆ, ನಮಗೆ ಅವಕಾಶ ನೀಡಿರಲಿಲ್ಲ. ಈಗ ನಾವು ನಮ್ಮ ಬೆಳೆಯನ್ನು ಮಾರಾಟ ಮಾಡಲು ದಿಲ್ಲಿಗೆ ಹೋಗಲಿದ್ದೇವೆ. ಮೊದಲು ನಮ್ಮ ಟ್ರಾಕ್ಟರ್ ದಿಲ್ಲಿಗೆ ಹೋಗಲಿದೆ’’ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

 ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಟಿಕ್ರಿ ಹಾಗೂ ಗಾಝಿಪುರ ಗಡಿಯಲ್ಲಿ ಇರಿಸಿದ್ದ ಬ್ಯಾರಿಕೇಡ್ಗಳನ್ನು ತೆಗೆಯಲು ದಿಲ್ಲಿ ಪೊಲೀಸರು ಗುರುವಾರ ರಾತ್ರಿಯಿಂದ ಆರಂಭಿಸಿದ್ದಾರೆ.


ವಿಶ್ವಕಪ್: ಪಾಕಿಸ್ತಾನಕ್ಕೆ ಹ್ಯಾಟ್ರಿಕ್ ಜಯ

ವಿಶ್ವಕಪ್: ಪಾಕಿಸ್ತಾನಕ್ಕೆ ಹ್ಯಾಟ್ರಿಕ್ ಜಯ

 


ವಿಶ್ವಕಪ್: ಪಾಕಿಸ್ತಾನಕ್ಕೆ ಹ್ಯಾಟ್ರಿಕ್ ಜಯ

ದುಬೈ: ನಾಯಕ ಬಾಬರ್ ಆಝಂ ಅರ್ಧಶತಕ(51,47 ಎಸೆತ) ಹಾಗೂ ಅಸಿಫ್ ಅಲಿ ಅವರ ಅಬ್ಬರದ ಬ್ಯಾಟಿಂಗ್(25 ರನ್, 7 ಎಸೆತ, )ನೆರವಿನಿಂದ ಪಾಕಿಸ್ತಾನ ತಂಡ ಅಫ್ಘಾನಿಸ್ತಾನದ ವಿರುದ್ಧ ಐಸಿಸಿ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಸುತ್ತಿನ ಗ್ರೂಪ್-2ರ 24ನೇ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನಿಂದ ಮಿಂಚಿದೆ.

ಪಾಕಿಸ್ತಾನವು ಟೂರ್ನಿಯಲ್ಲಿ ಈಗಾಗಲೇ ಭಾರತ, ನ್ಯೂಝಿಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿತ್ತು.

ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 147 ರನ್ ಗುರಿ ಪಡೆದಿದ್ದ ಪಾಕಿಸ್ತಾನ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್ ಮನ್ ಮುಹಮ್ಮದ್ ರಿಝ್ವಾನ್(8) ಬೇಗನೆ ಔಟಾದರು. ಆಗ ಜೊತೆಯಾದ ಬಾಬರ್ ಆಝಂ(51,47 ಎಸೆತ, 4 ಬೌಂಡರಿ )ಹಾಗೂ ಫಖರ್ ಝಮಾನ್(30, 25 ಎಸೆತ)63 ರನ್ ಜೊತೆಯಾಟ ನಡೆಸಿದರು. ಮುಹಮ್ಮದ್ ಹಫೀಝ್ (10) ಹಾಗೂ ಶುಐಬ್ ಮಲಿಕ್(19) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ತಂಡವು ಸೋಲಿನ ಭೀತಿಯಲ್ಲಿದ್ದಾಗ ಅಸಿಫ್ ಅಲಿ ಕೇವಲ 7 ಎಸೆತಗಳಲ್ಲಿ 4 ಸಿಕ್ಸರ್ ಗಳನ್ನು ಸಿಡಿಸಿ ಇನ್ನೂ 1 ಓವರ್ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.


 ಹಾನಗಲ್-ಸಿಂದಗಿ ಉಪ ಚುನಾವಣೆ ಸಮರ: ನಾಳೆ ಮತದಾನ, ನ.2ರಂದು ಫಲಿತಾಂಶ

ಹಾನಗಲ್-ಸಿಂದಗಿ ಉಪ ಚುನಾವಣೆ ಸಮರ: ನಾಳೆ ಮತದಾನ, ನ.2ರಂದು ಫಲಿತಾಂಶ

 ಹಾನಗಲ್-ಸಿಂದಗಿ ಉಪ ಚುನಾವಣೆ ಸಮರ: ನಾಳೆ ಮತದಾನ, ನ.2ರಂದು ಫಲಿತಾಂಶ

ಬೆಂಗಳೂರು: ಆಡಳಿತರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಜಿದ್ದಾಜಿದ್ದಿನ ಕಣವಾಗಿ ಪರಿಣಮಿಸಿರುವ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಶನಿವಾರ(ಅ.30) ಮತದಾನ ನಡೆಯಲಿದ್ದು, ಹಾವೇರಿ ಹಾಗೂ ವಿಜಯಪುರ ಜಿಲ್ಲಾಡಳಿತಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 263 ಮತಗಟ್ಟೆಗಳಿದ್ದು, 33 ಸೂಕ್ಷ್ಮ ಹಾಗೂ 2 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 1155 ಸಿಬ್ಬಂದಿಯನ್ನು ನಿಯೋಜಿಸಿ ತರಬೇತಿ ನೀಡಲಾಗಿದೆ. ಒಟ್ಟು 204481 ಮತದಾರರಿದ್ದು, ಒಂದು ಅಂಗವಿಕಲ ಸ್ನೇಹಿ ಮತಗಟ್ಟೆ ಹಾಗೂ ಎರಡು ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 121 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ನ.2ರಂದು ಹಾವೇರಿ ನಗರದ ಸರಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ.

ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 297 ಮತದಾನ ಕೇಂದ್ರಗಳಿದ್ದು, 1308 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟು 2,34,584 ಮತದಾರರಿದ್ದಾರೆ. ವಿಜಯನಗರದ ಸೈನಿಕ ಶಾಲೆಯಲ್ಲಿ ನ.2ರಂದು ಬೆಳಗ್ಗೆ 8  ರಿಂದ ಮತ ಎಣಿಕೆ ನಡೆಯಲಿದೆ. ಸಿಂದಗಿ ಆರ್.ಡಿ.ಪಾಟೀಲ್ ಕಾಲೇಜಿನಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ.

 ವಿಶ್ವಕಪ್: ಬಾಂಗ್ಲಾದೇಶದ ವಿರುದ್ಧ ವೆಸ್ಟ್ ಇಂಡೀಸ್ ಗೆ ಪ್ರಯಾಸದ ಗೆಲುವು

ವಿಶ್ವಕಪ್: ಬಾಂಗ್ಲಾದೇಶದ ವಿರುದ್ಧ ವೆಸ್ಟ್ ಇಂಡೀಸ್ ಗೆ ಪ್ರಯಾಸದ ಗೆಲುವು


 ವಿಶ್ವಕಪ್: ಬಾಂಗ್ಲಾದೇಶದ ವಿರುದ್ಧ ವೆಸ್ಟ್ ಇಂಡೀಸ್ ಗೆ ಪ್ರಯಾಸದ ಗೆಲುವು

ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಗ್ರೂಪ್-1ರ 23ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಬಾಂಗ್ಲಾದೇಶದ ವಿರುದ್ಧ 3 ರನ್ ಗಳ ಪ್ರಯಾಸದ ಗೆಲುವು ದಾಖಲಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 143 ರನ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕೊನೆಯ ಓವರ್ ತನಕ ಹೋರಾಟ ನೀಡಿದ್ದು 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕ ಮಹ್ಮೂದುಲ್ಲಾ(ಔಟಾಗದೆ 31) ಗೆಲುವಿನ ಭರವಸೆ ಮೂಡಿಸಿದರು. ಕೊನೆಯ ಓವರ್  ಬೌಲಿಂಗ್ ಮಾಡಿದ ಆ್ಯಂಡ್ರೆ ರಸೆಲ್(1-29) ಬಾಂಗ್ಲಾಕ್ಕೆ ಗೆಲುವು ನಿರಾಕರಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ನಿಕೊಲಸ್ ಪೂರನ್(40) ಅಗ್ರ ಸ್ಕೋರರ್ ಗಳಿಸಿದರೆ, ರೋಸ್ಟನ್ ಚೇಸ್ 39 ರನ್ ಗಳಿಸಿದರು. ಆರಂಭಿಕ ಬ್ಯಾಟ್ಸ್ ಮನ್ ಗಳಾದ ಕ್ರಿಸ್ ಗೇಲ್(4) ಹಾಗೂ ಎವಿನ್ ಲೆವಿಸ್(6)ಮತ್ತೊಮ್ಮೆ ವಿಫಲರಾದರು. ಆಲ್ ರೌಂಡರ್ ರಸೆಲ್ ಶೂನ್ಯ ಸುತ್ತಿದರು. ಡ್ವೆಯ್ನ್ ಬ್ರಾವೊ 1 ರನ್ ಗಳಿಸಿದರು. ನಾಯಕ ಕಿರೊನ್ ಪೊಲಾರ್ಡ್ (14) ಹಾಗೂ ಜೇಸನ್ ಹೋಲ್ಡರ್(15)ಔಟಾಗದೆ ಉಳಿದರು.

 ಇನ್ನೂ ಒಂದು ರಾತ್ರಿ ಅರ್ಥರ್ ರೋಡ್ ಜೈಲಿನಲ್ಲಿ ಕಳೆಯಲಿರುವ ಆರ್ಯನ್ ಖಾನ್

ಇನ್ನೂ ಒಂದು ರಾತ್ರಿ ಅರ್ಥರ್ ರೋಡ್ ಜೈಲಿನಲ್ಲಿ ಕಳೆಯಲಿರುವ ಆರ್ಯನ್ ಖಾನ್


 ಇನ್ನೂ ಒಂದು ರಾತ್ರಿ ಅರ್ಥರ್ ರೋಡ್ ಜೈಲಿನಲ್ಲಿ ಕಳೆಯಲಿರುವ ಆರ್ಯನ್ ಖಾನ್

 ಮುಂಬೈ: ಆರ್ಥರ್ ರೋಡ್ ಜೈಲಿನ ಅಧಿಕಾರಿಗಳು ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು ಅಕ್ಟೋಬರ್ 29 ಶುಕ್ರವಾರ ಬಿಡುಗಡೆ ಮಾಡುವುದಿಲ್ಲ ಎಂದು ಖಚಿತಪಡಿಸಿದ್ದಾರೆ.

 "ಆರ್ಯನ್ ಇಂದು ಬಿಡುಗಡೆಯಾಗುವುದಿಲ್ಲ, ನಾಳೆ ಬಿಡುಗಡೆಯಾಗುತ್ತಾರೆ" ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

26 ದಿನಗಳ ಕಾಲ ಬಂಧನದಲ್ಲಿದ್ದ ಆರ್ಯನ್ ಖಾನ್ ಗೆ  ಅಕ್ಟೋಬರ್ 28 ರಂದು ಜಾಮೀನು ನೀಡಲಾಯಿತು. ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಅರ್ಬಾಝ್  ಮರ್ಚೆಂಟ್ ಹಾಗೂ  ಮುನ್‌ಮುನ್ ಧಮೇಚಾ ಅವರಿಗೂ ಜಾಮೀನು ನೀಡಲಾಗಿದೆ.

ಜೈಲಿನ ಅಧಿಕಾರಿಗಳ ಪ್ರಕಾರ, ಜೈಲಿನಲ್ಲಿ ಕಾಗದಪತ್ರದ  ಕೆಲಸಕ್ಕಾಗಿ ಶುಕ್ರವಾರ ಸಂಜೆ 5.30 ರ ಗಡುವು ತಪ್ಪಿಸಿಕೊಂಡಿರುವುದರಿಂದ ಆರ್ಯನ್ ಖಾನ್ ಶನಿವಾರವಷ್ಟೇ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಗುರುವಾರ ಜಾಮೀನು ಪಡೆದ ಆರ್ಯನ್ ಖಾನ್ ಶುಕ್ರವಾರ ಜೈಲಿನಿಂದ ಹೊರಬರುವ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿವಿಧಾನಗಳಿಗೆ ಸಮಯ ತೆಗೆದುಕೊಂಡಿದ್ದು  ಸಂಜೆ 5:30 ರ ಮೊದಲು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಅವರು ಜೈಲಿನಲ್ಲಿ ಮತ್ತೊಂದು ರಾತ್ರಿ ಕಳೆಯಬೇಕಾಗಿದೆ.

ಈ ಹಿಂದೆ ಆರ್ಯನ್ ಖಾನ್ ಬಿಡುಗಡೆಗಾಗಿ ಬಾಲಿವುಡ್ ನಟಿ ಜೂಹಿ ಚಾವ್ಲಾ 1 ಲಕ್ಷ ರೂಪಾಯಿ ಜಾಮೀನು ಬಾಂಡ್‌ಗೆ ಸಹಿ ಹಾಕಿದ್ದರು. ಬಾಂಬೆ ಹೈಕೋರ್ಟ್ ಶುಕ್ರವಾರ ಆರ್ಯನ್ ಖಾನ್ ಅವರನ್ನು 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್‌ನಲ್ಲಿ ಅದೇ ಮೊತ್ತದ ಒಂದು ಅಥವಾ ಇಬ್ಬರು ಶ್ಯೂರಿಟಿಗಳೊಂದಿಗೆ ಬಿಡುಗಡೆ ಮಾಡಬೇಕೆಂದು ತೀರ್ಪು ನೀಡಿತ್ತು. 

 ಹನೂರು: ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಕೇಳಿ ಕುಸಿದು ಬಿದ್ದು ಯುವಕ ಮೃತ್ಯು

ಹನೂರು: ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಕೇಳಿ ಕುಸಿದು ಬಿದ್ದು ಯುವಕ ಮೃತ್ಯು

 

ಹನೂರು: ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಕೇಳಿ ಕುಸಿದು ಬಿದ್ದು ಯುವಕ ಮೃತ್ಯು

ಹನೂರು: ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಮರೂರು ಎಂಬಲ್ಲಿ ನಡೆದಿದೆ. 

ಮುನಿಯಪ್ಪ ಎಂಬವನೇ ಮೃತಪಟ್ಟ ಯುವಕನಾಗಿದ್ದು, ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ವಿಷಯ ಕೇಳಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 

ಚಿಕ್ಕವರಿದ್ದಾಗಿನಿಂದಲೂ ಮುನಿಯಪ್ಪ, ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದು, ಪುನೀತ್  ಅವರ ಎಲ್ಲ ಸಿನೆಮಾಗಳನ್ನು ತಪ್ಪದೇ ನೋಡುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 

ಕುಸಿದು ಬಿದ್ದ ತಕ್ಷಣ ಕುಟುಂಬಸ್ಥರು ಪ್ರಥಮ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗದೆ ಮುನಿಯಪ್ಪ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. 

ನಾಳೆ ಮೃತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

 ಮೀನುಗಾರಿಕೆಯಲ್ಲಿ ರೋಬೋಟಿಕ್ಸ್ ತಂತ್ರಜ್ಞಾನ: ಸಚಿವ ಡಾ. ಅಶ್ವಥ ನಾರಾಯಣ

ಮೀನುಗಾರಿಕೆಯಲ್ಲಿ ರೋಬೋಟಿಕ್ಸ್ ತಂತ್ರಜ್ಞಾನ: ಸಚಿವ ಡಾ. ಅಶ್ವಥ ನಾರಾಯಣ

 ಮೀನುಗಾರಿಕೆಯಲ್ಲಿ ರೋಬೋಟಿಕ್ಸ್ ತಂತ್ರಜ್ಞಾನ: ಸಚಿವ ಡಾ. ಅಶ್ವಥ ನಾರಾಯಣ

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಮೀನುಗಾರಿಕೆಯನ್ನು ಆದಾಯದಾಯಕವಾಗಿ ಬೆಳೆಸಲಾಗುವುದು ಮತ್ತು ಮಂಗಳೂರಿನಲ್ಲಿ ಕಿಯೋನಿಕ್ಸ್ ವತಿಯಿಂದ ಸಾಫ್ಟ್‌ವೇರ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ, ಐಟಿ ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ವತಿಯಿಂದ ನಗರದ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಶುಕ್ರವಾರ ಮಂಗಳೂರು ಟೆಕ್ನೋವಾಂಝಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಅಪಾರವಾದ ಮತ್ಸ ಸಂಪತ್ತು ಇದೆ. ಇದನ್ನು ಆದಾಯದ ದೊಡ್ಡ ವಲಯವಾಗಿ ಗುರುತಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಸಾಫ್ಟ್‌ವೇರ್ ಪಾರ್ಕ್ ಸ್ಥಾಪಿಸಲು ಸರಕಾರ ಈಗಾಗಲೇ ಅನುಮೋದನೆ ನೀಡಿದೆ. ಸ್ಟಾರ್ಟ್‌ಅಪ್‌ಗಳನ್ನು ಸರಕಾರ ಪ್ರೋತ್ಸಾಹಿಸಲಿದ್ದು, ಕರ್ನಾಟಕದಲ್ಲಿ ಎಲಿವೇಟ್‌ಕಾರ್ಯಕ್ರಮಯ ಅನ್ವಯ ಮಂಗಳೂರು ಕ್ಲಸ್ಟರ್‌ಗೆ ವಿಶೇಷ ನಿಧಿಯನ್ನು ಕೊಡಲಾಗುವುದು. ನಗರದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಫೋರ್ ಫಿನ್ ಟೆಕ್ ಸ್ಥಾಪನೆಗಾಗಿ 12 ಕೋಟಿ ರೂ.ಗಳನ್ನು ಫೆಬ್ರವರಿಯ ಬಜೆಟ್‌ನಲ್ಲಿ ಮೀಸಲಾಗಿಟ್ಟು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಆರಿನ್ ಕ್ಯಾಪಿಟಲ್‌ನ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷ ಮೋಹನ್‌ದಾಸ್‌ರವರು ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಮಾತನಾಡಿ, ಟೆಕ್ ಉದ್ಯಮಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ 1000 ಕೋಟಿ ರೂ. ಅನುದಾನ ದೊರಕಿದ್ದಲ್ಲಿ ಸ್ಟಾರ್ಟ್ ಅಪ್‌ಗಳಿಗೆ ಬೆಂಬಲ ದೊರಕಲಿದೆ ಮಾತ್ರವಲ್ಲದೆ 6ರಿಂದ 7 ಲಕ್ಷ ಉನ್ನತ ಗುಣಮಟ್ಟದ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಭಿಪ್ರಾಯಿಸಿದರು.ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯಕ್ಕಾಗಿನ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮಾತನಾಡಿ, ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ (ಟಿಟಿಎಲ್)ನ ಸಹಭಾಗಿತ್ವದಲ್ಲಿ 150 ಐಟಿಐಗಳನ್ನು ಟೆಕ್ನಾಲಜಿ ಹಬ್‌ಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಆಯ್ದ ಐಟಿಐಗಳಿಗಾಗಿ ಸರಕಾರ 30 ಕೋಟಿ ರೂ.ಗಳನ್ನು ವಿನಿಯೋಗಿಸಲಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ 4500 ಕೋಟಿ ರೂ.ಗಳನ್ನು ಈ ಐಟಿಐಗಳಿಗಾಗಿ ವಿನಿಯೋಗಿಸಲಾಗಿದೆ ಎಂದರು.

ಇಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ ಮತ್ತು ಟಿ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಮಾತನಾಡಿ, ಬೆಂಗಳೂರಿನಿಂದಾಚೆಗೆ ನಗರಗಳಲ್ಲಿ ಅನುಶೋಧನೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗ್ಗೆ ಸರಕಾರ ಸ್ಪಷ್ಟ ಗುರಿಯನ್ನು ಹೊಂದಿದೆ ಎಂದರು. 2026ರ ವೇಳೆಗೆ 10 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಗುರಿಯನ್ನೂ ಹೊಂದಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ. ನಾಯ್ಡು, ಲಹರಿ ಎಂಡಿ ಮತ್ತು ಸಿಇಓ ಸಂಜೀವ್ ಗುಪ್ತಾ, ಟೆಕ್ನಿಕಲರ್ ಇಂಡಿಯಾದ ಕಂಟ್ರಿ ಹೆಡ್ ಬಿರೇನ್ ಘೋಷ್, ಕರ್ನಾಟಕ ಸ್ಟಾರ್ಪಪ್ ವಿಷನ್ ಗ್ರೂಪ್ ಅಧ್ಯಕ್ಷ ಮತ್ತು ಆಕ್ಸೆಲ್ ಪಾಲುದಾರ ಪ್ರಶಾಂತ್ ಪ್ರಕಾಶ್, ಮೀನಾ ನಾಗರಾಜ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ. ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

 ಪುನೀತ್ ರಾಜ್‌ಕುಮಾರ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಪುನೀತ್ ರಾಜ್‌ಕುಮಾರ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ


 ಪುನೀತ್ ರಾಜ್‌ಕುಮಾರ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಕನ್ನಡ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್(46 ವರ್ಷ)  ಅವರು ಶುಕ್ರವಾರ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ರಾಜಕಾರಣಿಗಳು ಜನಪ್ರಿಯ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

"ವಿಧಿಯ ಕ್ರೂರತೆ  ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್ ಅವರನ್ನು ನಮ್ಮಿಂದ ದೂರ ಮಾಡಿದೆ. ಇದು ಅವರು ಸಾಯುವ ವಯಸ್ಸಾಗಿರಲಿಲ್ಲ. ಮುಂಬರುವ ಪೀಳಿಗೆಗಳು ಅವರ ಕೆಲಸ ಹಾಗೂ ಅದ್ಭುತ ವ್ಯಕ್ತಿತ್ವಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತವೆ. ಅವರ ಕುಟುಂಬ ಹಾಗೂ  ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ" ಎಂದು ಪ್ರಧಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ,ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

Thursday, 28 October 2021

ರಾಯಚೂರು ಜನರಿಗೆ ಶಾಕ್ ಕೊಟ್ಟ ಡೆಂಗ್ಯೂ: ಐವರು ಬಲಿ

ರಾಯಚೂರು ಜನರಿಗೆ ಶಾಕ್ ಕೊಟ್ಟ ಡೆಂಗ್ಯೂ: ಐವರು ಬಲಿ


ರಾಯಚೂರು ಜನರಿಗೆ ಶಾಕ್ ಕೊಟ್ಟ ಡೆಂಗ್ಯೂ: ಐವರು ಬಲಿ

ರಾಯಚೂರು: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಇದುವರೆಗೆ 1,514 ಜನರಿಗೆ ಜ್ವರ ಕಾಣಿಸಿಕೊಂಡಿದ್ದು, ಇವರಲ್ಲಿ 73 ಜನರಿಗೆ ಡೆಂಗ್ಯೂ ದೃಢಪಟ್ಟಿದೆ. ಅಲ್ಲದೇ ಡೆಂಗ್ಯೂ ರೋಗಕ್ಕೆ ಐವರು ಬಲಿಯಾಗಿದ್ದಾರೆ.

ಈ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್ ಅವರು ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ಜುಲೈನಿಂದ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಜಿಲ್ಲೆಯ 1,514 ಜನರಿಗೆ ಜ್ವರ ಕಾಣಿಸಿಕೊಂಡಿದ್ದರೇ, 73 ಜನರಿಗೆ ಡೆಂಗ್ಯೂ ಸೋಂಕಿರೋದು ದೃಢಪಟ್ಟಿರೋದಾಗಿ ತಿಳಿಸಿದ್ದಾರೆ.

ಇನ್ನೂ ಡೆಂಗ್ಯೂ ಸೋಂಕಿನ ಶಂಕೆಯಿಂದ ಒಂದೇ ತಿಂಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ವಾಂತಿ, ಬೇಧಿಯಿಂದ ಸಾವನ್ನಪ್ಪಿದ್ದು, ಇದುವರೆಗೆ ಐವರು ಡೆಂಗ್ಯೂ ಶಂಕೆಯಿಂದ ಸಾವನ್ನಪ್ಪಿರೋದಾಗಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕಾಡುತ್ತಿರುವಂತ ಡೆಂಗ್ಯೂ ನಿಯಂತ್ರಣಕ್ಕಾಗಿ ಈಗಾಗಲೇ 23 ತಂಡಗಳನ್ನು ರಚಿಸಲಾಗಿದೆ. ಮನೆ ಮನೆಗೂ ತೆರಳಿ ಡೆಂಗ್ಯೂ ಸರ್ವೆ ಕಾರ್ಯವನ್ನು ನಡೆಸಲಾಗುತ್ತಿದೆ ಎಂಬುದಾಗಿ ಮಾಹಿತಿ ನೀಡಿದರು. ಪುತ್ರಿಯ ಜೀವತೆಗೆದ ತಂದೆ

ಪುತ್ರಿಯ ಜೀವತೆಗೆದ ತಂದೆ


ಪುತ್ರಿಯ ಜೀವತೆಗೆದ ತಂದೆ

ಚಿಕ್ಕಮಗಳೂರು: ಮನೆಯವರಿಗೆ ಇಷ್ಟವಿಲ್ಲದಿದ್ದರೂ ಪ್ರೀತಿಸಿದವನನ್ನೇ ಮದುವೆಯಾಗಲು ಹಠಹಿಡಿದಿದ್ದ ಪುತ್ರಿಯನ್ನು ತಂದೆಯೇ ಕೊಲೆಮಾಡಿದ ಘಟನೆ ಬೀರೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ.

ಶಿಕಾರಿಪುರ ತಾಲ್ಲೂಕು ಕೆಂಚನಕೊಪ್ಪದ ಚಂದ್ರಪ್ಪ ಕೊಲೆ ಆರೋಪಿ. ಆತ ತನ್ನ ಪುತ್ರಿ ರಾಧಾಳನ್ನು ಬುಧವಾರ 8.30 ರ ಸುಮಾರಿಗೆ ಬೀರೂರು ರೈಲ್ವೆ ಗೇಟ್ ಸಮೀಪ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಆರೋಪ ಕೇಳಿಬಂದಿದೆ.

ರಾಧಾ ಅದೇ ಊರಿನ ಯುವಕನನ್ನು ಪ್ರೀತಿಸಿದ್ದು, ಆಕೆ ಮನೆಯವರಿಗೆಗೆ ಇಷ್ಟ ಇರಲಿಲ್ಲ. ಆಕೆಯನ್ನು ಚಂದ್ರಪ್ಪನ ಸೋದರಿಯ ಮನೆಯಲ್ಲಿ ಬಿಡಲಾಗಿತ್ತು. ಊರಿನಲ್ಲಿ ಹಬ್ಬವಿದ್ದ ಕಾರಣ ಮಗಳನ್ನು ಬುಧವಾರ ರಾತ್ರಿ ಬೈಕ್ ನಲ್ಲಿ ಊರಿಗೆ ಕರೆದುಕೊಂಡು ಬರುತ್ತಿದ್ದ ಚಂದ್ರಪ್ಪ ಮಗಳಿಗೆ ಬುದ್ಧಿವಾದ ಹೇಳಿದ್ದಾನೆ. ಆದರೆ ಮಗಳು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಇದರಿಂದ ಸಿಟ್ಟಾದ ಚಂದ್ರಪ್ಪ ವೇಲ್ ನಿಂದ ಕುತ್ತಿಗೆ ಬಿಗಿದು ಪುತ್ರಿಯನ್ನು ಕೊಲೆ ಮಾಡಿ ಮೃತದೇಹವನ್ನು ಬಿಟ್ಟು ಮಧ್ಯರಾತ್ರಿ 2.30 ರ ವೇಳೆಗೆ ಮನೆಗೆ ತಲುಪಿದ್ದಾನೆ. ಮನೆಯವರಿಗೆ ವಿಷಯ ತಿಳಿಸಿ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಆತನಿಗೆ ಸಮಾಧಾನ ಮಾಡಿದ ಮನೆಯವರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಚಂದ್ರಪ್ಪನಿಂದ ಮಾಹಿತಿ ಪಡೆದ ಪೊಲೀಸರು ಆತನನ್ಜು ಬೀರೂರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬೀರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.


 ಬಿಟ್ ಕಾಯಿನ್ ಹಗರಣ:   'ಈ ಪ್ರಕರಣವನ್ನು ಖಂಡಿತ ಮುಚ್ಚಿಹಾಕುತ್ತಾರೆ; ಡಿ.ಕೆ.ಶಿವಕುಮಾರ್

ಬಿಟ್ ಕಾಯಿನ್ ಹಗರಣ: 'ಈ ಪ್ರಕರಣವನ್ನು ಖಂಡಿತ ಮುಚ್ಚಿಹಾಕುತ್ತಾರೆ; ಡಿ.ಕೆ.ಶಿವಕುಮಾರ್


ಬಿಟ್ ಕಾಯಿನ್ ಹಗರಣ: 
'ಈ ಪ್ರಕರಣವನ್ನು ಖಂಡಿತ ಮುಚ್ಚಿಹಾಕುತ್ತಾರೆ; ಡಿ.ಕೆ.ಶಿವಕುಮಾರ್

ಬೆಂಗಳೂಎರು:' ಬಿಟ್ ಕಾಯಿನ್ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿದ್ದು, ಈ ಪ್ರಕರಣವನ್ನು ಖಂಡಿತ ಮುಚ್ಚಿಹಾಕುತ್ತಾರೆ. ಅದೇ ಅವರ ಕೆಲಸ. ಬೇರೆ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ಹೆಸರುಗಳು ಕೇಳಿ ಬರುತ್ತಿವೆ. ಯಾರ್ಯಾರದ್ದೋ ಖಾತೆಗೆ ಹಣ ಬಂದಿದೆ ಎಂದು ಕೇಳಿಬರುತ್ತಿದ್ದು, ನಾನು ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದ್ದೇನೆ. ಪೊಲೀಸ್ ಅಧಿಕಾರಿಗಳು, ರಾಜಕೀಯ ನಾಯಕರು, ಉದ್ಯಮಿಗಳ ಹೆಸರು ಕೇಳಿ ಬರುತ್ತಿರುವುದು ಆಘಾತ ತಂದಿದೆ ಎಂದು .  

ನನ್ನ ಮನೆ ಮೇಲೆ ಐಟಿ ದಾಳಿ ನಡೆದಿಲ್ಲ: ಚುನಾವಣೆ ಬೆನ್ನಲ್ಲೇ ನಿಮ್ಮ ಮನೆ ಮೇಲೂ ಐಟಿ ದಾಳಿ ನಡೆದಿದೆ ಎಂಬ ಗಾಳಿಸುದ್ದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ನನ್ನ ಮನೆಗೆ ಯಾವ ಐಟಿ ಅಧಿಕಾರಿಗಳು ಬಂದಿಲ್ಲ. ನನ್ನ ಸ್ನೇಹಿತರ ಧಾರವಾಡದ ಮನೆಗೆ ಹೋಗಿದ್ದಾರೆ.  ಅವರು ನನ್ನ ಆಪ್ತರು ಎಂಬ ಬಗ್ಗೆ ಯಾವುದೇ ಅನುಮಾನ ಬೇಡ. ಮೊನ್ನೆ ಬೆಂಗಳೂರಿನಲ್ಲಿ ಕೆಲವರ ಮನೆಗೆ ಹೋಗಿದ್ದಾರೆ. ಯಾರ ಮನೆಯಲ್ಲಿ ಎಷ್ಟು ಕೋಟಿ ರುಪಾಯಿ ಸಿಕ್ಕಿದೆ ಎಂದು ಅಧಿಕಾರಿಗಳು ಇನ್ನೂ ಮಾಹಿತಿ ನೀಡಿಲ್ಲ. ಇವತ್ತು ನನ್ನ ಸ್ನೇಹಿತರ ಮನೆಗೆ ಹೋಗಿದ್ದಾರೆ. ಏನು ಸಿಕ್ಕಿತು ಎಂದು ನನ್ನ ಸ್ನೇಹಿತರೇ ತಿಳಿಸುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸ್ನೇಹಿತರ ಮನೆ ಮೇಲೆ ಐಟಿ ದಾಳಿ ಯಾಕೆ ಎಂಬ ಪ್ರಶ್ನೆಗೆ, 'ದಾಳಿ ಮಾಡಲಿ, ತೊಂದರೆ ಇಲ್ಲ. ಕಾನೂನು ಪ್ರಕಾರ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಆದರೆ ಕಾನೂನು ಎಲ್ಲರಿಗೂ ಒಂದೇ ಆಗಿರಲಿ' ಎಂದು ಉತ್ತರಿಸಿದರು.


ಮರು ನಾಮಕರಣ;   ಫೇಸ್ಬುಕ್ ಇನ್ನುಮುಂದೆ 'ಮೆಟಾವರ್ಸ್'

ಮರು ನಾಮಕರಣ; ಫೇಸ್ಬುಕ್ ಇನ್ನುಮುಂದೆ 'ಮೆಟಾವರ್ಸ್'


ಮರು ನಾಮಕರಣ; 
ಫೇಸ್ಬುಕ್ ಇನ್ನುಮುಂದೆ 'ಮೆಟಾವರ್ಸ್' 

ಓಕ್ ಲೆಂಡ್: ಜನಪ್ರಿಯ ಜಾಲತಾಣ ಫೇಸ್ಬುಕ್ ಕಂಪನಿಗೆ 'ಮೆಟಾವರ್ಸ್' ಎಂದು ಮರು ನಾಮಕರಣ ಮಾಡಲಾಗಿದೆ.

ಮೆಟಾವರ್ಸ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಮಾಹಿತಿ ನೀಡಿದ್ದಾರೆ. ಫೇಸ್ಬುಕ್ ಕಂಪನಿ ಇನ್ನುಮುಂದೆ ಮೆಟಾರವರ್ಸ್ ಎಂದು ಬದಲಾಗಲಿದೆ. ಕಂಪನಿಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮಾರ್ಕ್ ಜುಕರ್ ಬರ್ಗ್ ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್ 100 ಕೋಟಿ ಜನರನ್ನು ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿಕೊಡುವ ಜೊತೆಗೆ ಜನರ ಸಂವಹನ, ಉತ್ಪನ್ನಗಳಿಗೆ ಮಾರುಕಟ್ಟೆ, ವಿವಿಧ ವಿಷಯಗಳ ಕುರಿತ ರಚನೆಗೆ ಅವಕಾಶ ನೀಡಲಿದೆ ಎಂದು ಹೇಳಿದ್ದಾರೆ.

ತೋಡಾರು: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ

ತೋಡಾರು: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ

ತೋಡಾರು: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ

ಮೂಡುಬಿದಿರೆ, ಅ.28: ಇಲ್ಲಿನ ತೋಡಾರು ಸಮೀಪ ಇರುವ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳ ಇತ್ತಂಡಗಳ ನಡುವೆ ಹೊಡೆದಾಟ ನಡೆದು ಇಬ್ಬರು ವಿದ್ಯಾರ್ಥಿಗಳು ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಸಾಝ್ ಮತ್ತು ಸ್ವರೂಪ್ ಆಸ್ಪತ್ರೆಗೆ ದಾಖಲಾದವರು ಎಂದು ಗುರುತಿಸಲಾಗಿದೆ.

ತೋಡಾರಿನಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಂದಿನ ಶನಿವಾರ ‘ಸಂಪ್ರದಾಯ’ ದಿನ ಕಾರ್ಯಕ್ರಮ ನಡೆಯಲಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಪೂರ್ವ ತಯಾರಿ ನಡೆಸುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಬುಧವಾರ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ತೃತೀಯ ವರ್ಷದ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳ ಗುಂಪು ರ್ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬುಧವಾರ ನಡೆದ ಹೊಡೆದಾಟದ ಸಂಬಂಧ ಪ್ರಾಂಶುಪಾಲರು ಉಭಯ ತಂಡಗಳ ತಲಾ 4ರಂತೆ 8 ಮಂದಿಯನ್ನು ನಿನ್ನೆ ಅಮಾನತುಗೊಳಿಸಿ ಮನೆಗೆ ಕಳುಹಿಸಿದ್ದರು. ಮತ್ತೆ ಈ ಗುಂಪು ಕಾಲೇಜಿನ ಹೊರಗಡೆ ಹೊಡೆದಾಟ ನಡೆಸಿದ್ದು, ತೃತೀಯ ವರ್ಷದ ನಾಲ್ಕು ಮಂದಿಯ ಮೇಲೆ ಅಂತಿಮ ವರ್ಷದ ವಿದ್ಯಾರ್ಥಿಗಳ ನಲ್ವತ್ತು ಮಂದಿಯ ತಂಡ ಹಲ್ಲೆ ನಡೆಸಿದ್ದು, ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಕ್ರಮಿತ ಪಶ್ಚಿಮ ದಂಡೆಯಲ್ಲಿ 3 ಸಾವಿರ ವಸತಿ ನಿರ್ಮಿಸಲಿರುವ ಇಸ್ರೇಲ್

ಆಕ್ರಮಿತ ಪಶ್ಚಿಮ ದಂಡೆಯಲ್ಲಿ 3 ಸಾವಿರ ವಸತಿ ನಿರ್ಮಿಸಲಿರುವ ಇಸ್ರೇಲ್


ಆಕ್ರಮಿತ ಪಶ್ಚಿಮ ದಂಡೆಯಲ್ಲಿ 3 ಸಾವಿರ ವಸತಿ ನಿರ್ಮಿಸಲಿರುವ ಇಸ್ರೇಲ್

ಜೆರುಸಲೇಂ: ಆಕ್ರಮಿತ ಪಶ್ಚಿಮ ದಂಡೆಯಲ್ಲಿ 1,344 ಮನೆಗಳನ್ನು ನಿರ್ಮಿಸಲು ಪೂರ್ವಭಾವಿ ಅನುಮತಿ ನೀಡಲಾಗಿದ್ದು ಇನ್ನೂ 1,800 ಆಶ್ರಯ ಮನೆಗಳ ನಿರ್ಮಾಣ ಯೋಜನೆ ಅಂತಿಮ ಹಂತದ ಅನುಮತಿ ಪ್ರಕ್ರಿಯೆಯಲ್ಲಿದೆ ಎಂದು ಇಸ್ರೇಲ್‌ನ ರಕ್ಷಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಈ ಯೋಜನೆಯ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಆಡಳಿತದ ತೀವ್ರ ಟೀಕೆಯನ್ನು ನಿರ್ಲಕ್ಷಿಸಿ ಇಸ್ರೇಲ್‌ನ ಅಧಿಕಾರಿಗಳು ಅಂಗೀಕಾರ ನೀಡಿದ್ದಾರೆ. ಇಸ್ರೇಲ್‌ನ ನಿರ್ಧಾರದ ಬಗ್ಗೆ ಅಂತರಾಷ್ಟ್ರೀಯ ಸಮುದಾಯ ನಿರ್ಣಾಯಕ ನಿಲುವು ತಳೆಯಬೇಕು ಎಂದು ಪೆಲೆಸ್ತೀನಿಯನ್ ಅಥಾರಿಟಿ(ಪಿಎ) ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಕರೆ ನೀಡಿದ್ದಾರೆ.

ಆಕ್ರಮಿತ ಪ್ರದೇಶದಲ್ಲಿ ಜನರನ್ನು ನೆಲೆಗೊಳಿಸಲು ಇಸ್ರೇಲ್ 50 ವರ್ಷದಿಂದ ನಡೆಸುತ್ತಿರುವ ಕ್ರಮಗಳ ಮುಂದುವರಿದ ಭಾಗ ಇದಾಗಿದೆ. ಈ ಪ್ರದೇಶ ಪೆಲೆಸ್ತೀನ್‌ಗೆ ಸೇರಿದ್ದು ಎಂಬುದು ಪೆಲೆಸ್ತೀನೀಯರ ನಿಲುವಾಗಿದೆ. ಆಕ್ರಮಿತ ಪ್ರದೇಶದಲ್ಲಿ ಜನರನ್ನು ನೆಲೆಗೊಳಿಸುವುದು ಅಂತರಾಷ್ಟ್ರೀಯ ನಿಯಮದಡಿ ಕಾನೂನುಬಾಹಿರವಾಗಿದ್ದರೂ, ಇಸ್ರೇಲ್‌ನ ಉತ್ತರೋತ್ತರ(ಅನುಕ್ರಮ) ಸರಕಾರಗಳು ಈ ಕಾನೂನನ್ನು ಉಲ್ಲಂಘಿಸುತ್ತಲೇ ಬಂದಿವೆ ಮತ್ತು ಅಂತರಾಷ್ಟ್ರೀಯ ಸಮುದಾಯದ ಬೆಂಬಲ ಪಡೆದಿರುವ ಎರಡು ರಾಷ್ಟ್ರಗಳ ಪರಿಹಾರ ಕ್ರಮ ಜಾರಿಗೆ ಬರಲು ಅಸಾಧ್ಯವಾಗುವ ಪರಿಸ್ಥಿತಿ ನಿರ್ಮಿಸಿದೆ.

ಆಕ್ರಮಿತ ಪ್ರದೇಶದಲ್ಲಿ ಮನೆ ನಿರ್ಮಿಸಲು ಅನುಮೋದನೆ ನೀಡಿರುವುದು ಯೆಹೂದಿ ಪ್ರಾಭಲ್ಯವಾದಿ ಸರಕಾರಗಳ ವಿಸ್ತರಣಾವಾದಿ ನೀತಿಗೆ ಉದಾಹರಣೆಯಾಗಿದೆ . ಇಸ್ರೇಲ್‌ನ ಪ್ರಯತ್ನಗಳನ್ನು ತಡೆಯಲು ಪೆಲೆಸ್ತೀನ್ ಅಥಾರಿಟಿ(ಪಿಎ) ಮತ್ತು ಅಂತರಾಷ್ಟ್ರೀಯ ಸಮುದಾಯ ತಕ್ಷಣ ಮುಂದಾಗಬೇಕು ಎಂದು ಗಾಝಾ ಪಟ್ಟಿಯ ಒಂದು ಭಾಗದಲ್ಲಿ ನಿಯಂತ್ರಣ ಹೊಂದಿರುವ ಹಮಾಸ್ ಸಂಘಟನೆಯ ವ್ತಾರ ಹಸೀಮ್ ಖಾಸಿಂ ಆಗ್ರಹಿಸಿದ್ದಾರೆ.


 ಉಡುಪಿ: ಬಾವಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಕಾರ್ಮಿಕನ ರಕ್ಷಣೆ

ಉಡುಪಿ: ಬಾವಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಕಾರ್ಮಿಕನ ರಕ್ಷಣೆ


 ಉಡುಪಿ: ಬಾವಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಕಾರ್ಮಿಕನ ರಕ್ಷಣೆ

ಉಡುಪಿ: ಬಾವಿ ಕೆಲಸಕ್ಕೆ ಇಳಿದು ಮೇಲಕ್ಕೇರಲಾಗದೆ ಜೀವನ್ಮರಣ ಸ್ಥಿತಿಯಲ್ಲಿದ್ದ ಕೇರಳ ಮೂಲದ ಕಾರ್ಮಿಕನನ್ನು ಉಡುಪಿ ಅಗ್ನಿಶಾಮಕದಳದ ತಂಡ ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ ಉಡುಪಿ ನಿಟ್ಟೂರಿನ ಆಭರಣ ಮೋಟಾರ್ಸ್‌ ಬಳಿ ನಡೆದಿದೆ.

ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಸುಮಾರು 35 ಅಡಿ ಆಳ (25 ಅಡಿ ನೀರು)ದ ಬಾವಿಗೆ ಕ್ಲೀನಿಂಗ್ ಕೆಲಸಕ್ಕಾಗಿ ಕೇರಳ ಮೂಲದ ಪ್ರದೀಪ್ (34) ಎಂಬವರು ಇಳಿದಿದ್ದರು. ಅಲ್ಲಿ ಕೆಲಸ ಮುಗಿಸಿದ ಬಳಿಕ ಮೇಲಕ್ಕೆ ಬರಲಾಗದೆ ಅವರು ತೀವ್ರ ಅಸ್ವಸ್ಥಗೊಂಡರು. ಮಾಹಿತಿ ತಿಳಿದು ಉಡುಪಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಸತೀಶ್ ಎನ್. ನೇತೃತ್ವದ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿತು.

ಬಾವಿಯೊಳಗೆ ಜೀವನ್ಮರಣ ಸ್ಥಿತಿಯಲ್ಲಿದ್ದ ಕಾರ್ಮಿಕನನ್ನು ಅಗ್ನಿಶಾಮಕ ದಳದ ಚಾಲಕ ಸುಧೀರ್ ಬಾವಿಗೆ ಇಳಿದು ಪ್ರದೀಪ್‌ನನ್ನು ಮೇಲಕ್ಕೆತ್ತಿ ರಕ್ಷಿಸಿದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸತೀಶ್, ರವಿ ನಾಯ್ಕ, ವಿನಾಯಕ ಕಲ್ಮನೆ ಭಾಗವಹಿಸಿದ್ದರು.

 ಗಾಂಜಾ ಪತ್ತೆಹಚ್ಚಲು ಜನರ ಫೋನ್‌ ಪರಿಶೀಲನೆ ಪ್ರಾರಂಭಿಸಿದ ಹೈದರಾಬಾದ್‌ ಪೊಲೀಸರು !

ಗಾಂಜಾ ಪತ್ತೆಹಚ್ಚಲು ಜನರ ಫೋನ್‌ ಪರಿಶೀಲನೆ ಪ್ರಾರಂಭಿಸಿದ ಹೈದರಾಬಾದ್‌ ಪೊಲೀಸರು !


 ಗಾಂಜಾ ಪತ್ತೆಹಚ್ಚಲು ಜನರ ಫೋನ್‌ ಪರಿಶೀಲನೆ ಪ್ರಾರಂಭಿಸಿದ ಹೈದರಾಬಾದ್‌ ಪೊಲೀಸರು !

ಹೊಸದಿಲ್ಲಿ: ಯಾರಾದರೂ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದಾರೆಯೋ? ಅಥವಾ ಮಾದಕ ವಸ್ತುಗಳನ್ನು ಬಳಸುತ್ತಿರುವ ಕುರಿತು ತಿಳಿಯಲು ದಾರಿಯಲ್ಲಿ ತೆರಳುತ್ತಿರುವ ಜನರ ಮೊಬೈಲ್‌ ಫೋನ್‌ ಗಳನ್ನು ಪೊಲೀಸರು ಪರಿಶೀಲಿಸಿದ ಘಟನೆ ಹೈದರಾಬಾದ್‌ ನಲ್ಲಲಿ ನಡೆದಿದೆ. ಗಾಂಜಾವನ್ನು ಸಂಪೂರ್ಣವಾಗಿ ನಗರದಿಂದ ನಿರ್ಮೂಲನೆ ಮಾಡುವ ಸಲುವಾಗಿ ಈ ʼರೈಡ್‌ʼ ಅನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾಗಿ newsminute.com ವರದಿ ಮಾಡಿದೆ.

ನಗರದಲ್ಲಿ ಗಾಂಜಾ ಬಳಕೆ ಮತ್ತು ಮಾರಾಟ ಮಾಡುತ್ತಿರುವವರ ವಿರುದ್ಧ ರೈಡ್‌ ನಡೆಸುವಂತೆ ಹಾಗೂ ಪರಿಶೀಲನೆ ನಡೆಸುವಂತೆ ಪೊಲೀಸ್‌ ಕಮಿಷನರ್‌ ಸೂಚನೆ ನೀಡಿದ ಬಳಿಕ ಪೊಲೀಸರು ಈ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಪೊಲೀಸರು ಮೊಬೈಲ್‌ ಫೋನ್‌ ಗಳನ್ನು ಪರಿಶೀಲಿಸುವ ವೇಳೆ ಜನರ ಚಾಟ್‌ ಗಳನ್ನೂ ಶೋಧಿಸಿದ್ದು, ಅದರಲ್ಲಿ ಗಾಂಜಾಗೆ ಸಂಬಂಧಿಸಿದ ಪದಗಳ ಕುರಿತು ಅನ್ವೇಷನೆ ನಡೆಸಿದ್ದಾರೆ ಎಂದು ಜನರು ಆರೋಪಿಸಿದ್ದಾಗಿ ವರದಿ ತಿಳಿಸಿದೆ.

ಮೊಬೈಲ್‌ ಫೋನ್‌ ಗಳ ಪರಿಶೀಲನೆ ನಡೆಸಿದ ಕುರಿತು ಪೊಲೀಸರಿಗೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಜನರು ತಮ್ಮ ಫೋನ್‌ ಗಳನ್ನು ನೀಡದೆಯೂ ಇರಬಹುದಾಗಿದೆ. ಎಲ್ಲರೂ ಪೊಲೀಸರೊಂದಿಗೆ ಸಹಕರಿಸಿದ್ದಾರೆ. ಯಾರೂ ಯಾವುದರ ಬಗ್ಗೆಯೂ ದೂರು ಸಲ್ಲಿಸಿಲ್ಲ ಎಂದು ಡೆಪ್ಯುಟಿ ಪೊಲೀಸ್‌ ಕಮಿಶನರ್‌ ಗಜರಾವ್‌ ಭೂಪಾಲ್‌ ತಿಳಿಸಿದ್ದಾಗಿ ವರದಿ ಬೆಟ್ಟು ಮಾಡಿದೆ.

 ಮಂಗಳೂರು; ಅಕ್ರಮ ಮರಳುಗಾರಿಕೆ ಆರೋಪ: 11 ದೋಣಿಗಳು ವಶಕ್ಕೆ

ಮಂಗಳೂರು; ಅಕ್ರಮ ಮರಳುಗಾರಿಕೆ ಆರೋಪ: 11 ದೋಣಿಗಳು ವಶಕ್ಕೆ


 ಮಂಗಳೂರು; ಅಕ್ರಮ ಮರಳುಗಾರಿಕೆ ಆರೋಪ: 11 ದೋಣಿಗಳು ವಶಕ್ಕೆ

ಮಂಗಳೂರು: ಫೈಸಲ್ ನಗರ ಬಳಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದೆಯೆನ್ನಲಾದ 11 ದೋಣಿ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಫೈಸಲ್ ನಗರ ಬಳಿ ನದಿಯಲ್ಲಿ ರಾತ್ರಿ ಹೊತ್ತು ಅಕ್ರಮವಾಗಿ ದೋಣಿಗಳಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಈ ದಾಳಿ ನಡೆಸಲಾಗಿದೆ.

ನಿನ್ನೆ ಸಂಜೆ ವೇಳೆ ದಾಳಿ ನಡೆಸಿದ್ದ ಪೊಲೀಸರು ಅಕ್ರಮವಾಗಿ ಮರಳುಗಾರಿಕೆಯಲ್ಲಿ ತೊಡಗಿದ್ದ 11 ದೋಣಿಗಳನ್ನು ವಶಪಡಿಸಿಕೊಂಡಿದ್ದು, ಗಣಿ ಇಲಾಖೆಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

 ಬಿ.ಸಿ.ರೋಡ್ ; ಬಸ್ - ರಿಕ್ಷಾ ನಡುವೆ ಅಪಘಾತ: ಇಬ್ಬರಿಗೆ ಗಾಯ

ಬಿ.ಸಿ.ರೋಡ್ ; ಬಸ್ - ರಿಕ್ಷಾ ನಡುವೆ ಅಪಘಾತ: ಇಬ್ಬರಿಗೆ ಗಾಯ


 ಬಿ.ಸಿ.ರೋಡ್ ; ಬಸ್ - ರಿಕ್ಷಾ ನಡುವೆ ಅಪಘಾತ: ಇಬ್ಬರಿಗೆ ಗಾಯ

ಬಂಟ್ವಾಳ: ಬಿ.ಸಿ.ರೋಡ್ - ಪೊಳಲಿ ರಸ್ತೆಯ ಕಲ್ಪನೆ ಎಂಬಲ್ಲಿ ಖಾಸಗಿ ಬಸ್ಸು ಮತ್ತು ಆಟೋ ರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಹಾಗೂ ಪ್ರಯಾಣಿಕ ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಅಪಘಾತದಿಂದ ನೇರಳಕಟ್ಟೆ ನಿವಾಸಿಗಳಾದ ಮುಹಮ್ಮದ್ ನಿಹಾಲ್ ಮತ್ತು ಮುಹಮ್ಮದ್ ಹನೀಫ್ ಎಂಬವರು ಗಾಯಗೊಂಡಿ ದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪೊಳಲಿಯಿಂದ ಬಿ.ಸಿ.ರೋಡ್ ಕಡೆ ಬರುತ್ತಿದ್ದ ಶುಭಲಕ್ಷ್ಮೀ ಬಸ್ ಹಾಗೂ ಬಿ.ಸಿ.ರೋಡ್ ನಿಂದ ಅಡ್ಡೂರು ಕಡೆ ತೆರಳುತ್ತಿದ್ದ ಆಟೋ ರಿಕ್ಷಾ ಕಲ್ಪನೆ ಇಳಿಜಾರು ಪ್ರದೇಶದಲ್ಲಿ ಢಿಕ್ಕಿಯಾಗಿದೆ. ರಿಕ್ಷಾ ಚಾಲಕ ನಿಹಾಲ್ ಮತ್ತು ಪ್ರಯಾಣಿಕ ಹನೀಫ್ ಮದುವೆ ಕಾರ್ಯಕ್ರಮ ಒಂದಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. 

 350 ಕೆ.ಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದ ವ್ಯಕ್ತಿಗೆ ಜಾಮೀನು ನೀಡಿದ ಅಲಹಾಬಾದ್‌ ಹೈಕೋರ್ಟ್‌

350 ಕೆ.ಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದ ವ್ಯಕ್ತಿಗೆ ಜಾಮೀನು ನೀಡಿದ ಅಲಹಾಬಾದ್‌ ಹೈಕೋರ್ಟ್‌


 350 ಕೆ.ಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದ ವ್ಯಕ್ತಿಗೆ ಜಾಮೀನು ನೀಡಿದ ಅಲಹಾಬಾದ್‌ ಹೈಕೋರ್ಟ್‌

ಅಲಹಾಬಾದ್:‌ ಸುಮಾರು ೩೫೦ಕೆ.ಜಿ ಪ್ರಮಾಣದ ಗಾಂಜಾ ಹೊಂದಿದ್ದ ವ್ಯಕ್ತಿಯನ್ನು 2019ರಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿತ್ತು. ಇದೀಗ ಅಯೋಧ್ಯೆ ಮೂಲದ ಆರೋಪಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ.

2019ರ ಜನವರಿಯಲ್ಲಿ ಎನ್ಡಿಪಿಎಸ್‌ ಕಾಯ್ದೆಯ ಕಟ್ಟುನಿಟ್ಟಿನ ನಿಬಂಧನೆಗಳ ಅಡಿಯಲ್ಲಿ ಅಯೋಧ್ಯೆ ನಿವಾಸಿ ಕಲೀಂ ಎಂಬಾತನಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಅವರು "ಸಂವಿಧಾನದ ೨೧ನೇ ವಿಧಿಯ ಆದೇಶದ ಪ್ರಕಾರ ಜಾಮೀನಿಗೆ ಸೂಕ್ತವಾದ ಪ್ರಕರಣ" ಹೊಂದಿದ್ದಾರೆ ಎಂದು ತೀರ್ಪು ನೀಡಿದೆ. 

ಅಯೋಧ್ಯೆ ಜಿಲ್ಲೆಯ ಎನ್‌ಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಎಫ್‌ಐಆರ್ ದಾಖಲಾಗಿದೆ. ಆರೋಪಿಯು ತನ್ನ ಜಾಮೀನು ಅರ್ಜಿಯಲ್ಲಿ, ದುರುದ್ದೇಶದಿಂದ ಮಾದಕ ವಸ್ತುವನ್ನು ಇರಿಸಲಾಗಿತ್ತು ಮತ್ತು ತಾನು ನಿರಪರಾಧಿ ಎಂದು ಪ್ರತಿಪಾದಿಸಿದ್ದಾನೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸ್ವತಂತ್ರ ಸಾಕ್ಷಿಗಳಿಲ್ಲ ಎಂದೂ ಹೇಳಲಾಗಿದೆ. 

ಜಾಮೀನಿನ ಮೇಲೆ ಬಿಡುಗಡೆಯಾದರೆ, ಜಾಮೀನಿನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಆರೋಪಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾನೆ ಎಂದು ವರದಿ ತಿಳಿಸಿದೆ.

ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಪ್ರಯೋಗ: ಸಂಸದ ನಳಿನ್ ಕುಮಾರ್

ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಪ್ರಯೋಗ: ಸಂಸದ ನಳಿನ್ ಕುಮಾರ್


ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಪ್ರಯೋಗ: ಸಂಸದ ನಳಿನ್ ಕುಮಾರ್

ಮಂಗಳೂರು : ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಗುರುವಾರ ಆಯೋಜಿಸಲಾಗಿರುವ 'ಲಕ್ಷಕಂಠಗಳ ಕನ್ನಡ ಗೀತಗಾಯನ' ಕಾರ್ಯಕ್ರಮ ನಾಡಿನ ಜನರಲ್ಲಿ ಭಾಷೆ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವುದು ಉತ್ತಮ ಪ್ರಯೋಗ ಎಂದು  ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಅವರು ಇಂದು ನಗರದ ತಣ್ಣೀರು ಬಾವಿ ಬೀಚ್ ನಲ್ಲಿ ದ.ಕ. ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಂಡ ಕನ್ನಡಕ್ಕಾಗಿ ನಾವು ಲಕ್ಷ ಕಂಠಗಳ ಸಾಮೂಹಿಕ  ಗೀತಗಾಯನ  ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು.

ಗೀತಗಾಯನ ಕಾರ್ಯಕ್ರಮವನ್ನು ಸರಕಾರದ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ. ದ.ಕ.ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.       

ಸಮಾರಂಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಪ್ರೊ.ಕೆ.ಎಸ್. ನಿಸಾರ್ ಅಹ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಗೀತೆಗಳನ್ನು ನಗರದ ವಿವಿಧ ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಾಡಿದರು.

ಕಾರ್ಯಕ್ರಮದ ಅಂಗವಾಗಿ ಎನ್.ಎಮ್.ಪಿ.ಟಿ, ವಿಮಾನ ನಿಲ್ದಾಣ, ರೈಲು-ಬಸ್ ನಿಲ್ದಾಣಗಳು, 10 ಜನಕ್ಕೂ ಹೆಚ್ಚಿರುವ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಸೇರಿದಂತೆ ಎಲ್ಲೆಡೆ ಏಕಕಾಲಕ್ಕೆ ಸಾಮೂಹಿಕ ಗೀತಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಬಗ್ಗೆ ಜಾಗೃತಿ ಮೂಡಿಸುವ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಸಮಾರಂಭದಲ್ಲಿ ದ.ಕ.ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.