RCB ನಾಯಕತ್ವ ತ್ಯಜಿಸುವ ವಿರಾಟ್ ಕೊಹ್ಲಿ
ಟಿ20 ನಾಯಕತ್ವಕ್ಕೆ ವಿದಾಯ ಹೇಳಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ನಾಯಕರಾಗಿದ್ದಾರೆ. ದಿಢೀರ್ ಬೆಳವಣಿಗೆಯಲ್ಲಿ ಅವರು ಆರ್ಸಿಬಿ ನಾಯಕತ್ವ ತೊರೆಯುವುದಾಗಿ ಹೇಳಿಕೆ ನೀಡಿದ್ದಾರೆ.
ಸೋಮವಾರ ಕೆಕೆಆರ್ ಮತ್ತು ಆರ್ಸಿಬಿ ನಡುವೆ ಪಂದ್ಯ ನಡೆಯಲಿದೆ. ಮರಳುಗಾಡಿನ ಯುಎಇನಲ್ಲಿ ನಡೆಯುವ ಪಂದ್ಯಕ್ಕೆ ಮೊದಲು ಆರ್ಸಿಬಿ ಅಭಿಮಾನಿಗಳಿಗೆ ಕೊಹ್ಲಿ ಶಾಕ್ ನೀಡಿದ್ದಾರೆ. ನಾಯಕತ್ವಕ್ಕೆ ವಿದಾಯ ಹೇಳುವುದಾಗಿ ಅವರು ತಿಳಿಸಿದ್ದು, ಆಟಗಾರನಾಗಿ ಮುಂದುವರಿಯುತ್ತೇನೆ. ಐಪಿಎಲ್ ಟೂರ್ನಿ ಮುಗಿದ ಬಳಿಕ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
2013ರಲ್ಲಿ ನಾಯಕನಾಗಿ ಆರ್ಸಿಬಿ ತಂಡವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿ 60 ಗೆಲುವು, 65 ಸೋಲು ಕಂಡಿದ್ದಾರೆ. 8 ವರ್ಷಗಳ ಕಾಲ ಆರ್ಸಿಬಿ ನಾಯಕನಾಗಿದ್ದರು. ಒಂದು ಸಲವೂ ಟ್ರೋಫಿ ಗೆಲ್ಲಿಸಿ ಕೊಡಲಿಲ್ಲ. ಆದರೆ, ಆರ್ಸಿಬಿ ಅಭಿಮಾನಿಗಳ ಅಭಿಮಾನ ಕೊಂಚವೂ ಕಡಿಮೆಯಾಗಿಲ್ಲ. ಹೀಗಿರುವಾಗಲೇ ಕೊಹ್ಲಿ ನಾಯಕತ್ವ ತ್ಯಜಿಸುವ ಘೋಷಣೆ ಮಾಡಿದ್ದಾರೆ.
0 التعليقات: