Sunday, 12 September 2021

ಯುಎಸ್ ಓಪನ್: ಜೊಕೊವಿಕ್ ಕನಸಿಗೆ ತಣ್ಣೀರೆರಚಿದ ಮೆಡ್ವೆಡೇವ್


ಯುಎಸ್ ಓಪನ್:
ಜೊಕೊವಿಕ್ ಕನಸಿಗೆ ತಣ್ಣೀರೆರಚಿದ ಮೆಡ್ವೆಡೇವ್

ನ್ಯೂಯಾರ್ಕ್, ಸೆ.13: ಪುರುಷರ ಸಿಂಗಲ್ಸ್ ಟೆನಿಸ್ ಸ್ಪರ್ಧೆಯಲ್ಲಿ ವರ್ಷದ ಎಲ್ಲ ಗ್ರ್ಯಾಂಡ್‌ಸ್ಲಾಂಗಳನ್ನು ಗೆಲ್ಲುವ ಮೂಲಕ ದಾಖಲೆ ಸ್ಥಾಪಿಸುವ ನೊವಾಕ್ ಜೊಕೊವಿಕ್ ಅವರ ಕನಸನ್ನು ಡೇನಿಯಲ್ ಮೆಡ್ವೆಡೆವ್ ರವಿವಾರ ನುಚ್ಚುನೂರು ಮಾಡಿದರು. ಯುಎಸ್ ಓಪನ್ ಫೈನಲ್‌ನಲ್ಲಿ ಡೊಕೊವಿಕ್ ಅವರನ್ನು ಮೆಡ್ವೆಡೇವ್ 6-4, 6-4, 6-4 ನೇರ ಸೆಟ್‌ಗಳಿಂದ ಸೋಲಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ 1969ರ ಬಳಿಕ ಯಾರೂ ವರ್ಷದ ಎಲ್ಲ ಗ್ರ್ಯಾಂಡ್‌ಸ್ಲಾಂಗಳನ್ನು ಗೆಲ್ಲುವ ಸಾಧನೆ ಮಾಡಿರಲಿಲ್ಲ. ಇದು ಮೆಡ್ವೆಡೆವ್ ಗೆ ಮೊದಲ ಸಿಂಗಲ್ಸ್ ಕಿರೀಟವಾಗಿದ್ದು, ಜೋಕೊವಿಕ್ ವೃತ್ತಿಜೀವನದ 21ನೇ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಅವಕಾಶದಿಂದ ವಂಚಿತರಾದರು.

ವಿಶ್ವದ ನಂಬರ್ 1 ಆಟಗಾರ ಜೊಕೊವಿಕ್ ಪ್ರಮುಖ ನಾಲ್ಕು ಟೂರ್ನಿಗಳಲ್ಲಿ ಯಾವ ಪಂದ್ಯವನ್ನೂ ಕಳೆದುಕೊಳ್ಳದೇ ಸತತ 27 ಪಂದ್ಯಗಳನ್ನು ಗೆದ್ದಿದ್ದು, ಇಂದಿನ ಸೋಲಿನ ಮೂಲಕ ಅವರ ಈ ಜೈತ್ರಯಾತ್ರೆ ಅಂತ್ಯವಾಯಿತು. ಕಳೆದ ಫೆಬ್ರವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್‌ನಲ್ಲಿ ಜೊಕೊವಿಕ್, ಮೆಡ್ವೆಡೆವ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಹಾರ್ಡ್‌ಕೋರ್ಟ್‌ನಲ್ಲಿ ಈ ಪ್ರಶಸ್ತಿ ಗೆದ್ದ ಬಳಿಕ ಆವೆಮಣ್ಣಿನ ಅಂಕಣದಲ್ಲಿ ಫ್ರೆಂಚ್ ಓಪನ್ ಹಾಗೂ ಹುಲ್ಲುಹಾಸಿನ ಕೋರ್ಟ್‌ನಲ್ಲಿ ವಿಂಬಲ್ಡನ್ ಪ್ರಶಸ್ತಿಗಳನ್ನು ಕಳೆದ ಜೂನ್ ಹಾಗೂ ಜುಲೈನಲ್ಲಿ ಗೆದ್ದಿದ್ದರು.

ಆದರೆ ರವಿವಾರ ತಮ್ಮ ಪೂರ್ಣ ಸಾಮರ್ಥ್ಯ ಪ್ರಕಟಿಸುವಲ್ಲಿ ವಿಫಲರಾದ 34 ವರ್ಷದ ಸೈಬೀರಿಯಾ ಆಟಗಾರ ರನ್ನರ್ ಅಪ್‌ಗೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಯುಎಸ್ ಓಪನ್ ಫೈನಲ್ ತಲುಪುವ ಮೂಲಕ ದಾಖಲೆ 31 ಗ್ರ್ಯಾಂಡ್‌ಸ್ಲಾಂ ಫೈನಲ್ ತಲುಪಿದ ಸಾಧನೆಯನ್ನು ಜೊಕೊವಿಕ್ ಸರಿಗಟ್ಟಿದ್ದರು. ಅತ್ಯಧಿಕ ಗ್ರ್ಯಾಂಡ್‌ಸ್ಲಾಂ ಗೆದ್ದ ದಾಖಲೆ ಸೃಷ್ಟಿಸಲು ರವಿವಾರ ಜಯ ಅನಿವಾರ್ಯವಾಗಿತ್ತು. ಇದೀಗ ಜೊಕೊವಿಕ್, ರೋಜರ್ ಫೆಡರರ್ ಹಾಗೂ ರಫೇಲ್ ನಡಾಲ್ ತಲಾ 20 ಗ್ರ್ಯಾಂಡ್‌ಸ್ಲಾಂ ಜಯದೊಂದಿಗೆ ದಾಖಲೆ ಹಂಚಿಕೊಂಡಿದ್ದಾರೆ.SHARE THIS

Author:

0 التعليقات: