Monday, 20 September 2021

ದ್ವೇಷದ ಹೇಳಿಕೆ ನೀಡಿದವರು ಒಬ್ಬರು ಮಾತ್ರ; ಅವರು ಅದನ್ನು ಹಿಂಪಡೆದರೆ ಸಮಸ್ಯೆ ಮುಗಿಯುತ್ತದೆ: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ

 

ದ್ವೇಷದ ಹೇಳಿಕೆ ನೀಡಿದವರು ಒಬ್ಬರು ಮಾತ್ರ; ಅವರು ಅದನ್ನು ಹಿಂಪಡೆದರೆ ಸಮಸ್ಯೆ ಮುಗಿಯುತ್ತದೆ: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ

ಕೇರಳ-ಆಲಪ್ಪುಝ: ದ್ವೇಷದ ಹೇಳಿಕೆ ನೀಡಿದವರು ಒಬ್ಬರು ಮಾತ್ರ, ಅವರು ಅದನ್ನು ಹಿಂಪಡೆದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಮುಸ್ಲಿಂಗಳ ಭಾಗದಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ವಿವಾದ ಮಾಡಿದವರು ಅದರಿಂದ ಹಿಂದೆ ಸರಿದರೆ ಸಮಸ್ಯೆ ಮುಗಿಯಲಿದೆ. ಇದು ಮೊದಲೇ ನಾವು ಹೇಳಿದ್ದೇವೆ ಎಂದು ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಹೇಳಿದರು.

ಅದರೆಡೆಯಲ್ಲಿ, ಕ್ಲಿಮ್ಮೀಸ್ ಬಾವ ಕರೆದ ಸಮುದಾಯ ನಾಯಕರ ಸಭೆ ತಿರುವನಂತಪುರದಲ್ಲಿ ಆರಂಭ ಆಯಿತು. ಸಭೆಯಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಹೊರತುಪಡಿಸಿ   ಇತರ ಮುಸ್ಲಿಂ ಸಂಘಟನೆಗಳು ಕೂಡ ಭಾಗವಹಿಸುವುದಿಲ್ಲ. ಪಾಲಾ ಬಿಷಪ್, ವಿವಾದಾತ್ಮಕ ಹೇಳಿಕೆ ತಿದ್ದುಪಡಿಸಲು ಅಥವಾ  ಹಿಂಪಡೆಯಲು ಇದುವರೆಗೆ ಸಿದ್ಧವಾಗಿಲ್ಲದ ಕಾರಣ ಏಕಪಕ್ಷೀಯ ಒಮ್ಮತದ ಅಗತ್ಯವಿಲ್ಲ ಎಂದು ಮುಸ್ಲಿಂ ಸಂಫಟನೆಗಳು. 

   ಅದೇ ಸಂದರ್ಭದಲ್ಲಿ, ಯೂತ್ ಲೀಗ್ ಸಂಘಟನಾ ಅಧ್ಯಕ್ಷರಾದ ಪಾನಕ್ಕಾಡ್ ಸಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್, ಕೆ.ಎನ್.ಎಂ ನಾಯಕ ಹುಸೈನ್ ಮಡವೂರ್, ಅಧ್ಯಾಪಕ ಅಶ್ರಫ್ ಕಡೈಕಲ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದರು.


SHARE THIS

Author:

0 التعليقات: