Tuesday, 21 September 2021

ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ರಾಜಸ್ಥಾನ ಸಂಪುಟ ಪುನರ್ರಚನೆ ಕುರಿತು ಚರ್ಚಿಸಿದ ಸಚಿನ್ ಪೈಲಟ್


 ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ರಾಜಸ್ಥಾನ ಸಂಪುಟ ಪುನರ್ರಚನೆ ಕುರಿತು ಚರ್ಚಿಸಿದ ಸಚಿನ್ ಪೈಲಟ್

ಹೊಸದಿಲ್ಲಿ: ಪಂಜಾಬ್‌ನಲ್ಲಿ ಶುಕ್ರವಾರ ನಾಯಕತ್ವ ಬದಲಾವಣೆ ಮಾಡಲು ಕಾಂಗ್ರೆಸ್ ನಾಯಕತ್ವ ಸಿದ್ಧತೆ ನಡೆಸುತ್ತಿದ್ದಂತೆ, ರಾಜಸ್ಥಾನದ ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು ಎಂದು The Indian Express ವರದಿ ಮಾಡಿದೆ.

ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರಕಾರದಲ್ಲಿ ಹೆಚ್ಚು ಚರ್ಚೆಯಾದ ಸಂಪುಟ ಪುನರ್ರಚನೆಯು ಕೆಲವು ಸಮಯದಿಂದ ನೆನೆಗುದಿಯಲ್ಲಿದೆ. ಈ ಇಬ್ಬರು ನಾಯಕರು ರಾಜ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜಸ್ಥಾನದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ ಹಾಗೂ ಎಲ್ಲಾ ಶಾಸಕರ ಅಭಿಪ್ರಾಯಗಳನ್ನು ಪಡೆದಿದ್ದಾರೆ.

ಸಂಪುಟ ಪುನರ್ರಚನೆ ಹಾಗೂ  ತನಗೆ ನಿಷ್ಠರಾಗಿರುವ ಕೆಲವು ಶಾಸಕರ ಸೇರ್ಪಡೆ, ರಾಜ್ಯದ ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ಅಧ್ಯಕ್ಷರ ನೇಮಕಾತಿಗಳ ಕುರಿತಾಗಿ ಪೈಲಟ್  ಅವರು ಪಕ್ಷದ ಹೈಕಮಾಂಡ್ ಮುಂದೆ ಪದೇ ಪದೇ ಬೇಡಿಕೆ ಇಟ್ಟಿದ್ದಾರೆ.

ಆದರೆ ಮಾಕೆನ್  ಅವರಯ ಹಲವು ಬಾರಿ ರಾಜಸ್ಥಾನಕ್ಕೆ ಭೇಟಿ ನೀಡಿದರೂ ಸಂಪುಟ  ಪುನಾರಚನೆ ನಡೆದಿಲ್ಲ.

 ಸಂಪುಟ ಪುನರ್ರಚನೆ ಶೀಘ್ರದಲ್ಲೇ ನಡೆಯಲಿದೆ ಎಂದು ಪೈಲಟ್‌ಗೆ ಮತ್ತೊಮ್ಮೆ ಭರವಸೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.


SHARE THIS

Author:

0 التعليقات: