ಪಣಂಬೂರಿನಲ್ಲಿ ಓರ್ವ ಮೀನುಗಾರ ಸಮುದ್ರಪಾಲು
ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಗಿಲ್ನೆಟ್ ಬೋಟ್ವೊಂದು ಭಾರೀ ಬಿರುಗಾಳಿಗೆ ಸಿಲುಕಿದ ಪರಿಣಾಮ ಒಬ್ಬ ಮೀನುಗಾರ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ಪಣಂಬೂರು ಬೀಚ್ ಬಳಿ ನಡೆದಿದೆ.
ನಾಪತ್ತೆಯಾದ ಮೀನುಗಾರರನ್ನು ಕಸಬಾ ಬೆಂಗರೆ ನಿವಾಸಿ ಶರೀಫ್ ಎಂದು ಗುರುತಿಸಲಾಗಿದೆ. ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಈ ತಂಡದ ಬೆಂಗರೆಯ ಅಝೀಝ್, ಇಮ್ತಿಯಾಝ್, ಸಿನಾನ್, ಫೈರೋಝ್ ಎಂಬವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಅಝರ್ ಎಂಬವರ ಮಾಲಕತ್ವದ ಗಿಲ್ನೆಟ್ ದೋಣಿ ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಬೆಳಗ್ಗೆ ಸುಮಾರು 7:30ಕ್ಕೆ ಈ ದುರಂತ ಸಂಭವಿಸಿದೆ. ನಾಪತ್ತೆಯಾದ ಮೀನುಗಾರ ಶರೀಫ್ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ತೆರಳಿ ತನಿಖೆ ನಡೆಸುತ್ತಿದ್ದಾರೆ.
0 التعليقات: