ಸಚಿವ ಮುರುಗೇಶ್ ನಿರಾಣಿ ಟ್ವಿಟರ್ ಖಾತೆ ಹ್ಯಾಕ್, ಮರುಸ್ಥಾಪನೆ

ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಟ್ವಿಟರ್ ಖಾತೆ ಕೆಲಕಾಲ ಹ್ಯಾಕ್ ಆಗಿದ್ದು, ಬಳಿಕ ಮರುಸ್ಥಾಪಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, ''ಹ್ಯಾಕರ್ ಗಳು ನನ್ನನ್ನು ಕೂಡಾ ಹ್ಯಾಕರ್ ಗಳಂತೆಯೇ ಯೋಚಿಸುವಂತೆ ಮಾಡಿದರು. ಎಲ್ಲಾ ಯಶಸ್ವಿ ಹ್ಯಾಕರ್ ಗಳ ಹಿಂದೆ ಹ್ಯಾಕರ್ ಗಳನ್ನು ಯಶಸ್ವಿಯಾಗಿ ಡಿಕೋಡ್ ಮಾಡುವ ವ್ಯಕ್ತಿ ಇರುತ್ತಾನೆ. ನಾನು ಮರಳಿದ್ದೇನೆ'' ಎಂದು ತಿಳಿಸಿದ್ದಾರೆ.
ಇತ್ತೇಚೆಗಷ್ಟೇ ನಕಲಿ ಫೇಸ್ ಬುಕ್ ಖಾತೆ ತೆರೆದು ಹಣದ ಸಹಾಯ ಯಾಚಿಸಿರುವ ಪ್ರಕರಣದ ಬೆನ್ನಿಗೆ ಇದೀಗ ಮತ್ತೆ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಸಚಿವ ನಿರಾಣಿ ಅವರೇ ಮಾಹಿತಿ ನೀಡಿದ್ದಾರೆ.
0 التعليقات: