Saturday, 25 September 2021

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಜಯ

 

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಜಯ

ಶಾರ್ಜಾ: ಕಡಿಮೆ ಸ್ಕೋರ್ ಗಳಿಸಿದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶನಿವಾರ ನಡೆದ ಐಪಿಎಲ್ ನ 37ನೇ ಪಂದ್ಯದಲ್ಲಿ 5 ರನ್ ಅಂತರದಿಂದ ರೋಚಕ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡವನ್ನು ಕೇವಲ 125 ರನ್ ಗೆ ನಿಯಂತ್ರಿಸಿದ್ದ ಹೈದರಾಬಾದ್ ಸುಲಭ ಸವಾಲು ಪಡೆದಿತ್ತು. ಆದರೆ ಮುಹಮ್ಮದ್ ಶಮಿ(2-14) ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಸೋಲುಂಡಿತು.

ಸನ್ ರೈಸರ್ಸ್ ಪರ ಆಲ್ ರೌಂಡರ್ ಜೇಸನ್ ಹೋಲ್ಡರ್(ಔಟಾಗದೆ 47) ಕೊನೆ ತನಕ  ಹೋರಾಟ ನೀಡಿದರು. ಅಗ್ರ ಕ್ರಮಾಂಕದಲ್ಲಿ ವೃದ್ದಿ ಮಾನ್ ಸಹಾ(31)ಒಂದಷ್ಟು ಪ್ರತಿರೋಧ ಒಡ್ಡಿದರು.

ಪಂಜಾಬ್ ರೋಚಕ ಗೆಲುವು ಸಾಧಿಸಲು ಕಾರಣವಾದ ಬೌಲಿಂಗ್ ವಿಭಾಗದಲ್ಲಿ ರವಿ ಬಿಶ್ನೋಯ್(3-24)ಹಾಗೂ ಅರ್ಷದೀಪ್(1-22)ಇನ್ನು 4 ವಿಕೆಟ್ ಹಂಚಿಕೊಂಡರು.


 SHARE THIS

Author:

0 التعليقات: