ಕರ್ನಾಟಕ ಸುನ್ನಿ ಜಂಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೆ.ಎ ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲ ವಫಾತ್
ಪ್ರಮುಖ ಉಲಮಾ ನಾಯಕರೂ ಕರ್ನಾಟಕ ಸುನ್ನಿ ಜಂಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿಯೂ
ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಸಹಾಯಕ ಖಾಝಿಯೂ, ಕೊಟ್ಟಮುಡಿ ಮರ್ಕಝುಲ್ ಹಿದಾಯ ಸಂಸ್ಥೆಗಳ ಅಧ್ಯಕ್ಷರೂ, ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರಾಗಿರುವ ಕೆ.ಎ ಮಹ್ಮೂದ್ ಮುಸ್ಲಿಯಾರ್ ಎಡಪ್ಪಲಂ ಕೊಡಗು (77) ಉಸ್ತಾದರು ಇಂದು (17/9/21 ಶುಕ್ರವಾರ) ಅಪರಾಹ್ನ 12.54 ಕ್ಕೆ ಮಂಗಳೂರು ಇಂಡಿಯಾನಾ ಆಸ್ಪತ್ರೆಯಲ್ಲಿ ನಿಧನರಾದರು.
ಅವರ ಜನಾಝ ಸ್ನಾನ ಮತ್ತು ಮಯ್ಯಿತ್ ನಮಾಝ್ ಮಿತ್ತೂರು ಕೆಜಿಎನ್ ಸಂಸ್ಥೆಯಲ್ಲಿ (ಮಿತ್ತೂರ್ ದಾರುಲ್ ಇರ್ಶಾದ್ ಸಂಸ್ಥೆಯಲ್ಲಿ) ಅಪರಾಹ್ನ 3.00 ಗಂಟೆಯ ವೇಳೆಗೆ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ದಫನ ಕಾರ್ಯಕ್ರಮ ರಾತ್ರಿ ಉಸ್ತಾದರ ಊರಾದ ಕೊಡಗು, ಎಡಪ್ಪಲಂ ಕಿಕ್ಕರೆ ಜುಮಾ ಮಸ್ಜಿದ್ನಲ್ಲಿ ನಡೆಯಲಿದೆ. ಅಲ್ಲಿ ಜನಾಝ ನಮಾಝ್ಗೆ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ ಎಂದು ತಿಳಿದು ಬಂದಿದೆ
ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
0 التعليقات: