Thursday, 2 September 2021

ಪ್ಯಾರಾಲಿಂಪಿಕ್ಸ್: ಹೈಜಂಪ್ ಪಟು ಪ್ರವೀಣ್ ಕುಮಾರ್ ಗೆ ಬೆಳ್ಳಿ

 

ಪ್ಯಾರಾಲಿಂಪಿಕ್ಸ್: ಹೈಜಂಪ್ ಪಟು ಪ್ರವೀಣ್ ಕುಮಾರ್ ಗೆ ಬೆಳ್ಳಿ

ಟೋಕಿಯೊ: ಪ್ಯಾರಾಲಿಂಪಿಕ್ಸ್ ಪುರುಷರ ಹೈಜಂಪ್ ಟಿ64 ಫೈನಲ್ ನಲ್ಲಿ ಶುಕ್ರವಾರ 2.07  ಮೀ. ಎತ್ತರಕ್ಕೆ ಜಿಗಿದು ಹೊಸ ಏಶ್ಯ ದಾಖಲೆಯೊಂದಿಗೆ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕವನ್ನು ಜಯಿಸಿದರು.

ಈ ಮೂಲಕ ಭಾರತವು ಪ್ಯಾರಾಲಿಂಪಿಕ್ಸ್ ನಲ್ಲಿ ಒಟ್ಟು 11ನೇ ಪದಕ ಗೆದ್ದಂತಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳ್ಳಿ ಗೆದ್ದ ಸಾಧನೆ ಮಾಡಿರುವ ಪ್ರವೀಣ್ ಗೆ ಅಭಿನಂದನೆ ಸಲ್ಲಿಸಿದ್ದು, ಪ್ರವೀಣ್ ಸಾಧನೆ ಹೆಮ್ಮೆ ತಂದಿದೆ.  ಈ ಪದಕವು ಅವರ ಕಠಿಣ ಶ್ರಮದ ಪ್ರತಿಫಲವಾಗಿದೆ ಎಂದು ಪ್ರಧಾನಿ ಟ್ವೀಟಿಸಿದ್ದಾರೆ.

ಬ್ರಿಟನ್ ನ ಜೋನಾತನ್ ಬ್ರೂಮ್ ಎಡ್ವಡ್ಸ್ (2.10 ಮೀ.) ಚಿನ್ನ ಗೆದ್ದುಕೊಂಡರು. ಪೊಲ್ಯಾಂಡ್ ನ ಲೆಪಿಯಾಟೊ(2.04)ಕಂಚಿನ ಪದಕ ಗೆದ್ದುಕೊಂಡರು.SHARE THIS

Author:

0 التعليقات: