Thursday, 16 September 2021

ದೇವಾಲಯಗಳ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್ ನಿಂದ ಲಾಭ ಪಡೆಯುವ ಹುನ್ನಾರ: ಸಂಸದ ತೇಜಸ್ವಿ ಸೂರ್ಯ


 ದೇವಾಲಯಗಳ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್ ನಿಂದ ಲಾಭ ಪಡೆಯುವ ಹುನ್ನಾರ: ಸಂಸದ ತೇಜಸ್ವಿ ಸೂರ್ಯ

ಚಿಕ್ಕಮಗಳೂರು: ದೇವಾಲಯಗಳ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಹಿಂದೂ ಧರ್ಮದ ಮೇಲೆ ದಿಢೀರ್ ಪ್ರೀತಿ ಮೂಡಿದೆ. ಕಾಂಗ್ರೆಸ್‍ನವರು ನಾಟಕವಾಡುತ್ತಾ ಲಾಭ ಪಡೆಯುವ ಹುನ್ನಾರ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಗುರುವಾರ ಜಿಲ್ಲೆಯ ಮೂಡಿಗೆರೆ ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮದ ಅಂಗವಾಗಿ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡರು ಇಷ್ಟು ವರ್ಷಗಳ ಕಾಲ ಯಾರನ್ನು ಆರಾಧಿಸುತ್ತಾ ಬಂದಿದ್ದಾರೆ, ಯಾರನ್ನು ಪೂಜೆ ಮಾಡಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ. ಮೂರ್ತಿ ಭಂಜಕನಾದ ಟಿಪ್ಪು ಜಯಂತಿಯನ್ನು ಆಚರಿಸಿರುವವರ ಬಗ್ಗೆ ರಾಜ್ಯದ ಜನಕ್ಕೆ ತಿಳಿದಿದ್ದು, ಸದ್ಯ ದೇವಾಲಯಗಳ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರು ನಾಟಕ ಆಡುತ್ತಿದ್ದಾರೆ ಎಂದರು.

ಹಿಂದೂ ಧರ್ಮದ ಬಗ್ಗೆ, ದೇವಾಲಯಗಳ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಹಿಂದೆಂದೂ ಇಲ್ಲದ ಪ್ರೀತಿ ದೇವಾಲಯಗಳ ಧ್ವಂಸ ಘಟನೆ ನಡೆದ ಬಳಿಕ ಉಕ್ಕಿ ಹರಿಯುತ್ತಿದೆ. ರಾತ್ರೋ ರಾತ್ರಿ ಮಂದಿರ, ದೈವಗಳ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ಇದು ನಾಟಕವಲ್ಲದೇ ಮತ್ತೇನೂ ಅಲ್ಲ. ಆಷಾಢಭೂತಿತನ ತೋರುತ್ತಿರುವ ಕಾಂಗ್ರೆಸ್‍ನವರ ಈ ನಾಟಕವನ್ನು ಜನ ನಂಬಲ್ಲ ಎಂದು ಟೀಕಸಿದರು.


SHARE THIS

Author:

0 التعليقات: