ಕುಕ್ಕಾಜೆಯಲ್ಲಿ ಎಸ್ಸೆಸ್ಸೆಫ್ ಧ್ವಜ ದಿನಾಚರಣೆ ಅಂಗವಾಗಿ ಧ್ವಜಾರೋಹಣ
ಕುಕ್ಕಾಜೆ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ದಿನವಾಗಿದೆ 1989 ಸೆಪ್ಟೆಂಬರ್ 19. ರಾಜ್ಯದಲ್ಲಿ ಎಸ್ಸೆಸ್ಸೆಫ್ 32 ವರ್ಷ ಪೂರ್ತಿ ಗೊಳಿಸಿ 33 ನೇ ವರ್ಷಕ್ಕೆ ಪಾದಾರ್ಪಣೆಗೈದಿದೆ. ಧ್ವಜದಿನದ ಅಂಗವಾಗಿ ರಾಜ್ಯ ಸಮಿತಿಯು ಸೂಚಿಸಿದ ಧ್ವಜಾರೋಹಣವನ್ನು SSF ಕುಕ್ಕಾಜೆ ಯೂನಿಟ್ ವತಿಯಿಂದ ನಿನ್ನೆ ಬೆಳಿಗ್ಗೆ 7 ಗಂಟೆಗೆ ಬದ್ರಿಯಾ ನಗರ ಕುಕ್ಕಾಜೆ ವಠಾರದಲ್ಲಿ ನಡೆಸಲಾಯಿತು. ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಸದಸ್ಯರೂ ಕುಕ್ಕಾಜೆ ಖತೀಬರೂ ಆದ ಎ.ಎಂ.ಫೈಝಲ್ ಝುಹ್ರಿ ಧ್ವಜಾರೋಹಣ ನಡೆಸಿದರು. ಯೂನಿಟ್ ಅಧ್ಯಕ್ಷರಾದ ನೌಷಾದ್ ಹಿಮಮಿ ಕುಕ್ಕಾಜೆ ನೇತೃತ್ವ ವಹಿಸಿದರು. ಸದಸ್ಯರಾದ ಆದಂ ಕುಂಞಿ, ಇರ್ಷಾದ್ ಕುಕ್ಕಾಜೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 التعليقات: