Sunday, 5 September 2021

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅರ್ಧವಾರ್ಷಿಕ ಕೌನ್ಸಿಲ್


 ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅರ್ಧವಾರ್ಷಿಕ  ಕೌನ್ಸಿಲ್

ಮಾಣಿ: ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅರ್ಧವಾರ್ಷಿಕ ಕೌನ್ಸಿಲ್ ಸಭೆಯು ಸತ್ತಿಕ್ಕಲ್ ತಾಜುಲ್ ಉಲಮಾ ಮದ್ರಸದಲ್ಲಿ ನಿನ್ನೆ ಮಗ್ರಿಬ್ ನಮಾಝ್ ಬಳಿಕ ನಡೆಯಿತು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಸಾಬಿತ್ ತಂಙಳ್ ರವರ ದುವಾ ದೊಂದಿಗೆ

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ದಅವಾ ಕಾರ್ಯದರ್ಶಿ ಮುಸ್ತಫಾ ಬುಡೋಳಿ ಸ್ವಾಗತಿಸಿದರು, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪಬ್ಲಿಕೇಶನ್ ಕಾರ್ಯದರ್ಶಿ ಜಾಬಿರ್ ಸಅದಿ ಗಡಿಯಾರ್ ಉದ್ಘಾಟಿಸಿದರು, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಸಾಬಿತ್ ತಂಙಳ್ ರವರು ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಲ್ ರವರು ವರದಿ ವಾಚಿಸಿದರು. ಸೆಕ್ಟರ್ ಕೋಶಾಧಿಕಾರಿ ಅನ್ಸಾರ್ ಸತ್ತಿಕ್ಕಲ್ ರವರು ಲೆಕ್ಕಪತ್ರ ಮಂಡಿಸಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಉಸ್ತುವಾರಿಯಾದ ಸಲಾಂ ಹನೀಫಿ ಕಬಕ ವೀಕ್ಷಕರಾಗಿ ಆಗಮಿಸಿ ಸಂಘಟನಾ ತರಗತಿಯನ್ನು ನಡೆಸಿಕೊಟ್ಟರು.ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿ ಕಲಂದರ್ ಪಾಟ್ರಕೋಡಿ ಧನ್ಯವಾದಗೈದರು‌. ಇತ್ತೀಚೆಗೆ ಅಕಾಲಿಕವಾಗಿ  ನಮ್ಮನ್ನಗಲಿದ ಉಮರಾ ನಾಯಕ,ಸಜ್ಜನ ಸ್ವಭಾವದ ವ್ಯಕ್ತಿತ್ವ, ಎಸ್ ಎಂ ಎ ವಿಟ್ಲ ಝೋನಲ್  ಕೋಶಾಧಿಕಾರಿಯೂ ಪೇರಮೊಗರು ಜಮಾಅತ್ ಅಧ್ಯಕ್ಷರಾದ ಮರ್ಹೂಂ ಇಬ್ರಾಹಿಂ ಹಾಜಿ ಪೇರಮೊಗರು ಹಾಗೂ ಕೆಮ್ಮಾರದ ಹೊಳೆಯಲ್ಲಿ ಬಿದ್ದು ಮರಣ ಹೊಂದಿದ ಮರ್ಹೂಂ ಶಫೀಕ್ ರವರ ಹೆಸರಿನಲ್ಲಿ ತಹ್ಲೀಲ್ ಹೇಳಿ ದುವಾ ಮಾಡಲಾಯಿತು. ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಸಭೆಯು ಮುಕ್ತಾಯಗೊಂಡಿತು.


SHARE THIS

Author:

0 التعليقات: