ವಿಟ್ಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡಂಟ್ಸ್ ಫೆಡರೇಶನ್ ಎರಡು ವರ್ಷಕ್ಕೊಮ್ಮೆ ನಡೆಸುತ್ತಿರುವ ಪ್ರತಿಭೋತ್ಸವ ಕಾರ್ಯಕ್ರಮದ ಜಿಲ್ಲಾ ಮಟ್ಟದ ಕಾರ್ಯಗಾರವು ವಿಟ್ಲ ಮಂಗಳಪದವು ಮದ್ರಸಾ ಹಾಲ್ ನಲ್ಲಿ ನಡೆಯಿತು.
ಸಯ್ಯಿದ್ ಸಾಬಿತ್ ತಂಙಲ್ ಪಾಟ್ರಕೋಡಿ ದುವಾ ನೆರವೇರಿಸಿದರು. ಜಿಲ್ಲಾ ಪ್ರತಿಭೋತ್ಸವ ಸಮಿತಿ ಚೆಯರ್ಮಾನ್ ಎ.ಎಂ ಪೈಝಲ್ ಝುಹ್ರಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರವನ್ನು ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಉದ್ಘಾಟಿಸಿದರು. ರಶೀದ್ ಮಡಂತ್ಯಾರು ರವರು ವಿಷಯ ಮಂಡನೆ ನಡೆಸಿ ಕಾರ್ಯಾಗಾರಕ್ಕೆ ನೇತೃತ್ವ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಶುಭನುಡಿಯ ಮೂಲಕ ಶುಭಾಶಯಗೈದರು. ಜಿಲ್ಲಾ ದಅವಾ ಕಾರ್ಯದರ್ಶಿ ರಝಾಕ್ ಸಅದಿ ಕೊಡಿಪ್ಪಾಡಿ ಸ್ವಾಗತಿಸಿ, ಜಿಲ್ಲಾ ಪ್ರತಿಭೋತ್ಸವ ಸಮಿತಿ ವೈಸ್ ಚಯರ್ಮೇನ್ ಇಕ್ಬಾಲ್ ಮಾಚಾರ್ ಕೃತಜ್ಞತೆ ಸಲ್ಲಿಸಿದರು.
0 التعليقات: