Tuesday, 7 September 2021

ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಶರಣಾದ ಯುವಕ

 

 ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಶರಣಾದ ಯುವಕ

ರಾಯಚೂರು: ಪ್ರೀತಿಸಿ ವಿವಾಹವಾಗಿದ್ದ ಯುವತಿ ತನ್ನಿಂದ ದೂರವಾದ ಕಾರಣಕ್ಕೆ ಬೇಸರಗೊಂಡ ಯುವಕ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿ ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರಿನ ಗಾಣದಾಳದಲ್ಲಿ ನಡೆದಿದೆ.

ಯುವತಿ ಸಂಧ್ಯಾ ಹಾಗೂ ಭೀಮೇಶ್ ನಾಯಕ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಂತರ್ಜಾತಿಯಾಗಿದ್ದರಿಂದ ಕುಟುಂಬದವರು ವಿವಾಹಕ್ಕೆ ಒಪ್ಪಿರಲಿಲ್ಲ. ಆದಾಗ್ಯೂ ಯುವಕ ಹಾಗೂ ಯುವತಿ ಮದುವೆಯಾಗಿದ್ದರು. ಪ್ರಕರಣ ಇಡಪನೂರು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ವಿಚಾರಣೆಗೆಂದು ನವದಂಪತಿಯನ್ನು ಠಾಣೆಗೆ ಕರೆದ ಪೊಲೀಸರು ಯುವತಿಯನ್ನು ಯುವಕನಿಂದ ಬೇರ್ಪಡಿಸಿ ಪೋಷಕರ ಕೈಗೊಪ್ಪಿಸಿದ್ದರು. ಈ ಘಟನೆಯಿಂದ ನೊಂದ ಯುವಕ ಡೆತ್ ನೋಟ್ ಬರೆದಿಟ್ಟು ಬಳಿಕ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೆತ್ ನೋಟ್ ನಲ್ಲಿ ಇಡಪನೂರು ಪಿಎಸ್‌ಐ, ಯುವತಿ ತಂದೆ ಚಕ್ರಪಾಣಿ ಸೇರಿದಂತೆ ಹಲವರು ತನ್ನ ಸಾವಿಗೆ ಕಾರಣ ಎಂದು ಬರೆದಿದ್ದಾನೆ.


SHARE THIS

Author:

0 التعليقات: