ಸ್ಟಾರ್ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ಅಭಿಯಾನದಲ್ಲಿ ಭಾರತೀಯ ಹಾಕಿ ತಂಡ ಐತಿಹಾಸಿಕ ಕಂಚು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಗುರುವಾರ ತಕ್ಷಣದಿಂದ ಜಾರಿಗೆ ಬರುವಂತೆ ಅಂತರ್ ರಾಷ್ಟ್ರೀಯ ಪಂದ್ಯದಿಂದ ನಿವೃತ್ತಿಯನ್ನು ಘೋಷಿಸಿದರು. 'ಯುವಕರಿಗೆ ದಾರಿ ಮಾಡಿಕೊಡಲು' ನಿವೃತ್ತಿ ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾರೆ.
30 ರ ಹರೆಯದ ಸಿಂಗ್ ದೇಶದ ಅತ್ಯುತ್ತಮ ಡ್ರ್ಯಾಗ್-ಫ್ಲಿಕರ್ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. 223 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
'ಬಾಬ್' ಎಂದು ಖ್ಯಾತರಾಗಿರುವ ರೂಪಿಂದರ್, ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ ವೇಳೆ ಭಾರತದ ಕಂಚಿನ ಪದಕ ವಿಜೇತ ಅಭಿಯಾನದ ಸಂದರ್ಭದಲ್ಲಿ ಜರ್ಮನಿ ವಿರುದ್ಧದ ಮೂರನೇ ಸ್ಥಾನಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಪೆನಾಲ್ಟಿ ಸ್ಟ್ರೋಕ್ ಸೇರಿದಂತೆ ನಾಲ್ಕು ನಿರ್ಣಾಯಕ ಗೋಲುಗಳನ್ನು ಗಳಿಸಿದ್ದರು. ಅವರ ಫಿಟ್ನೆಸ್ ಹಾಗೂ ಫಾರ್ಮ್ನ ಪ್ರಕಾರ, ಅವರು ಹಾಕಿ ಕ್ರೀಡೆಯಲ್ಲಿ ಇನ್ನೂ ಕೆಲವು ವರ್ಷ ಆಡಬಹುದಿತ್ತು. ಆದಾಗ್ಯೂ ಅವರ ಈ ನಿರ್ಧಾರವು ಆಶ್ಚರ್ಯ ವುಂಟು ಮಾಡಿದೆ.
0 التعليقات: