Tuesday, 21 September 2021

ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ಪ್ರತಿಭೋತ್ಸವ ಸಮಿತಿ ಚೇರ್ ಮ್ಯಾನ್ : ಹುಸೈನ್ ಜೌಹರಿ,ಕನ್ವೀನರ್: ಇಸ್ಮಾಯಿಲ್ ಡೆಂಬಳೆ


 ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ಪ್ರತಿಭೋತ್ಸವ ಸಮಿತಿ ಚೇರ್ ಮ್ಯಾನ್ : ಹುಸೈನ್ ಜೌಹರಿ,ಕನ್ವೀನರ್: ಇಸ್ಮಾಯಿಲ್ ಡೆಂಬಳೆ  

ಪುತ್ತೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ SSF ವತಿಯಿಂದ 2 ವರ್ಷ ಕ್ಕೊಮ್ಮೆ ನಡೆಸಿಕೊಂಡು ಬರುವ ಪ್ರತಿಭೋತ್ಸವ ಇದರ ಈಶ್ವರಮಂಗಲ ಸೆಕ್ಟರ್  ನಿರ್ವಹಣಾ ಸಮಿತಿ ರಚನೆಯು ಸೆಕ್ಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ  ತ್ವೈಬ ಸೆಂಟರ್ ನಲ್ಲಿ ನಡೆಯಿತು.  

 ಸಭೆಯನ್ನು SYS ಈಶ್ವರಮಂಗಲ ಸೆಂಟರ್ ಅಧ್ಯಕ್ಷರಾದ ಜಲೀಲ್ ಸಖಾಫಿ ಕರ್ನೂರು ಉದ್ಘಾಟಿಸಿದರು.

ನಿರ್ವಹಣಾ ಸಮಿತಿ ಚೇರ್ ಮೇನ್ ಆಗಿ ಹುಸೈನ್ ಜೌಹರಿ ಪಾಳ್ಯತ್ತಡ್ಕ  ವೈಸ್ಸ್ ಚೇರ್ ಮೇನ್ ಆಗಿ ಶಫೀಕ್ ಸಅದಿ ಮೇನಾಲ, ಕನ್ವೀನರ್ ಇಸ್ಮಾಯಿಲ್ ಬಡಗನ್ನೂರು, ಜೋಯಿಂಟ್  ಕನ್ವೀನರ್ ಅಬ್ದುಲ್ ರಹಿಮಾನ್ ಅನಿಳೆ, ಫೈನಾನ್ಸ್ ಕಾರ್ಯದರ್ಶಿ   ರಫೀಕ್ ಹುಮೈದಿ ಮೀನಾವು ಹಾಗೂ ಸದಸ್ಯರಾಗಿ ಅಬೂಬಕರ್ ಲತೀಫಿ, ನೌಫಾನ್ ಕಾವು, ನೌಷಾದ್ ಹಿಮಮಿ ಕುಕ್ಕಾಜೆ, ರಮೀಝ್ ಕೊಯಿಲ, ಬಶೀರ್ ಮೀನಾವು ಆಯ್ಕೆಯಾದರು. ಸಲಹಾ ಸಮಿತಿ  ಚೇರ್ ಮೇನ್ ಆಗಿ ಅಬ್ದುಲ್ ಅಝೀಝ್ ಮಿಸ್ಬಾಹಿ ಹಾಗೂ ಕನ್ವೀನರ್ ಆಗಿ ಆದಂ.ಕೆ.ಪಿ ಯವರನ್ನು ಆರಿಸಲಾಯಿತು.

  ಕಾರ್ಯಕ್ರಮದಲ್ಲಿ KMJ, KCF, SYS, SSF ನ ಹಲವಾರು ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.

ಸೆಕ್ಟರ್ ಪ್ರ.ಕಾರ್ಯದರ್ಶಿ ಸಲೀಂ ಝುಹ್ರಿ ಸ್ವಾಗತಿಸಿ, ಕಾರ್ಯದರ್ಶಿ ಬಶೀರ್ ಮೀನಾವು ಕೃತಜ್ಞತೆ ಸಲ್ಲಿಸಿದರು.


SHARE THIS

Author:

0 التعليقات: