Wednesday, 22 September 2021

ಆಲ್ ರೌಂಡ್ ಆಟವಾಡಿದ ರಿಷಭ್ ಪಂತ್ ಬಳಗ ಡೆಲ್ಲಿಗೆ ಸುಲಭವಾಗಿ ಶರಣಾದ ಸನ್ ರೈಸರ್ಸ್


ಡೆಲ್ಲಿಗೆ ಸುಲಭವಾಗಿ ಶರಣಾದ ಸನ್ ರೈಸರ್ಸ್

ದುಬೈ,ಸೆ.22: ಬೌಲರ್ ಗಳ ಸಾಂಘಿಕ ಪ್ರದರ್ಶನ ಹಾಗೂ ಶಿಖರ್ ಧವನ್ ನೇತೃತ್ವದ ಬ್ಯಾಟ್ಸ್ ಮನ್ ಗಳ ಸಾಂದರ್ಭಿಕ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಬುಧವಾರ ನಡೆದ  ಐಪಿಎಲ್ ಟೂರ್ನಿಯ 33ನೇ ಪಂದ್ಯದಲ್ಲಿ 8 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಗೆಲ್ಲಲು 135 ರನ್ ಸುಲಭ ಸವಾಲು ಪಡೆದ ಡೆಲ್ಲಿ ತಂಡ 17.5  ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು.

ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್(42,37 ಎಸೆತ), ಶ್ರೇಯಸ್ ಅಯ್ಯರ್(ಔಟಾಗದೆ 47, 41 ಎಸೆತ) ಹಾಗೂ ನಾಯಕ ರಿಷಭ್ ಪಂತ್(ಔಟಾಗದೆ 35,21 ಎಸೆತ) ಗೆಲುವಿನ ರನ್ ಗಳಿಸಲು ನೆರವಾದರು.ಪೃಥ್ವಿ  ಶಾ ಕೇವಲ 11 ರನ್ ಗಳಿಸಿ  ಔಟಾದರು. ಆಗ  ಧವನ್ ರೊಂದಿಗೆ 2ನೇ ವಿಕೆಟ್ ಗೆ 52 ರನ್ ಹಾಗೂ ಪಂತ್ ಜೊತೆಗೆ 3ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಗಳಿಸಿದ ಶ್ರೇಯಸ್ ಅಯ್ಯರ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು.



SHARE THIS

Author:

0 التعليقات: